ಮುಧೋಳ (ಬಾಗಲಕೋಟೆ): ಮುಧೋಳ ಹೌಂಡ್‘ ತಳಿಯ ನಾಯಿಯ ನಾಲ್ಕು ಮರಿಗಳನ್ನು ವಾಯುಪಡೆಯ ದೆಹಲಿ ಕೇಂದ್ರದ ಅಧಿಕಾರಿಗಳಿಗೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಶುಕ್ರವಾರ ಇಲ್ಲಿನತಾಲ್ಲೂಕಿನ ತಿಮ್ಮಾಪುರ ಗ್ರಾಮ ವ್ಯಾಪ್ತಿಯ ಶ್ವಾನ ಸಂಶೋಧನಾ ಕೇಂದ್ರದಲ್ಲಿ ಹಸ್ತಾಂತರಿಸಿದರು.
ಬಳಿಕ ಮಾತನಾಡಿದ ಅವರು, ಮುಧೋಳದ ಘೋರ್ಪಡೆ ಮಹಾರಾಜರು ಸಂರಕ್ಷಿಸಿದ್ದ ‘ಮುಧೋಳದ ಹೌಂಡ್’ ತಳಿಗೆ ಅಪಾರ ಬೇಡಿಕೆಯಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಬೇಕಾಗಿದೆ ಎಂದು ಹೇಳಿದರು.
ಭಾರತೀಯ ಸೇನೆ, ಪೊಲೀಸ್ ಇಲಾಖೆ, ಇಂಡೋ ಟಿಬೆಟ್ ಗಡಿ ಭದ್ರತಾ ಪಡೆಯಲ್ಲಿ ಇವುಸಮರ್ಥವಾಗಿ ಕಾರ್ಯನಿರ್ವಹಿಸುತ್ತಿವೆ. ಈಗ ವಾಯುಪಡೆ ಸೇರಿದೆ. ಮುಂದೆ ನೌಕಾಪಡೆಗೂ ಕಳುಹಿಸಲಾಗುವುದು.ಪ್ರಧಾನಿ ನರೇಂದ್ರ ಮೋದಿ ಈ ತಳಿ ಕುರಿತು ‘ಮನ್ ಕಿ ಬಾತ್’ನಲ್ಲಿ ಉಲ್ಲೇಖಿಸಿದ್ದರು ಎಂದರು.
ಬೀದರ್ ಪಶುವೈದ್ಯಕೀಯ ವಿಶ್ವವಿದ್ಯಾಲಯ ಈ ಶ್ವಾನದ ಸಂಶೋಧನಾ ಕೇಂದ್ರದ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿಲ್ಲ. ಇದಕ್ಕಾಗಿ ಶೀಘ್ರ ಸಭೆ ನಡೆಸಲಾಗುವುದು. ವಿಶ್ವವಿದ್ಯಾಲಯ ಬಿಟ್ಟು ಸ್ವತಂತ್ರವಾಗಿ ಸರ್ಕಾರದಿಂದಲೇ ತಳಿ ಅಭಿವೃದ್ಧಿ ಪಡಿಸಲು ಚಿಂತನೆ ನಡೆದಿದೆ ಎಂದು ವಿವರಿಸಿದರು.
40 ಎಕರೆ ವಿಸ್ತೀರ್ಣದ ಈ ಕೇಂದ್ರದಲ್ಲಿ ವರ್ಷ ಪೂರ್ತಿ ಸಂಶೋಧನೆ, ತಳಿ ಅಭಿವೃದ್ಧಿ, ಪಾಲನೆ ಪೋಷಣೆ ಕುರಿತು ಚಟುವಟಿಕೆಗಳು ನಡೆಯಬೇಕು. ವಿ.ವಿ ಸಹಕರಿಸದ್ದರೆ, ಸರ್ಕಾರವೇ ಈ ಕೆಲಸ ಮಾಡಲಿದೆ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.