ಭಾನುವಾರ, 4 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಗೂಢ ಕಾಯಿಲೆ: 40 ರಾಸುಗಳ ಸಾವು

Last Updated 14 ಮಾರ್ಚ್ 2023, 22:59 IST
ಅಕ್ಷರ ಗಾತ್ರ

ಹೆತ್ತೂರು (ಸಕಲೇಶಪುರ ತಾಲ್ಲೂಕು): ಸಮೀಪದ ಯಸಳೂರು ಹೋಬಳಿ ವ್ಯಾಪ್ತಿಯ ಹಳ್ಳಿಗಳಲ್ಲಿ ಮೂರು ವಾರಗಳಿಂದ ಜಾನುವಾರುಗಳು ನಿಗೂಢ ಕಾಯಿಲೆಯಿಂದ ಸಾವಿಗೀಡಾಗುತ್ತಿದ್ದು, ಪಶು ವೈದ್ಯಾಧಿಕಾರಿಗಳಿಗೂ ಕಾರಣ ತಿಳಿದಿಲ್ಲ.

ಐಗೂರು ಪಂಚಾಯಿತಿ ವ್ಯಾಪ್ತಿಯ ಯಡಿಕೆರೆಯಲ್ಲಿ 8, ಚಿಕ್ಕಲ್ಲೂರಿನಲ್ಲಿ 14, ಕುಂಬಾರಗೇರಿಯಲ್ಲಿ 6 ದನ–ಕರು ಗಳು ಸೇರಿ 40 ಕ್ಕೂ ಹೆಚ್ಚು ಜಾನುವಾರು ಮೃತಪಟ್ಟಿವೆ.

ಸುದ್ದಿಗಾರರೊಂದಿಗೆ ಮಾತನಾಡಿದ ವೈದ್ಯಾಧಿಕಾರಿ ವೆಂಕಟೇಶ್, ‘ಪ್ರಯೋಗಾಲಯದಿಂದ ಒಂದೆರಡು ದಿನಗಳಲ್ಲಿ ವರದಿ ಬರಲಿದ್ದು, ನಿಖರ ಕಾರಣ ತಿಳಿಯಲಿದೆ. ನಂತರ ಇತರ ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುವುದು’ ಎಂದು ಹೇಳಿದರು.

‘ಕೆಲವರು ಜಾನುವಾರುಗಳ ಕಳೇಬರವನ್ನು ನೀರಿನಲ್ಲಿ ಬಿಸಾಡುವುದರಿಂದ ಬದುಕಿರುವ ಜಾನುವಾರುಗಳಿಗೆ ರೋಗ ಹರಡುವ ಸಾಧ್ಯತೆ ಇದೆ. ಕಡ್ಡಾಯವಾಗಿ 10 ಅಡಿ ಆಳದ ಗುಂಡಿ ತೆಗೆದು ಜಾನುವಾರು ಹೂಳಬೇಕು’ ಎಂದರು.

ಶಾಸಕ ಎಚ್.ಕೆ. ಕುಮಾರಸ್ವಾಮಿ ಮಾತನಾಡಿ, ‘ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ಜಾನುವಾರುಗಳ ಸಾವಿನ ಬಗ್ಗೆ ಸೂಕ್ತ ತನಿಖೆ ನಡೆಸಲಾಗುವುದು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT