ಬೋಧಕೇತರರ ಕಾರ್ಯಕ್ಷಮತೆ ಪರೀಕ್ಷೆ ರದ್ದು

ಬೆಂಗಳೂರು: ‘ಸಿ’ ವೃಂದದ ಬೋಧಕೇತರ ನೌಕರರಿಗೆ ಜ.28ರಂದು ನಡೆಸಬೇಕಿದ್ದ ಕಾರ್ಯಕ್ಷಮತೆ ಪರೀಕ್ಷೆಯನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ರದ್ದು ಮಾಡಿದೆ.
ಲಿಪಿಕ ಸಿಬ್ಬಂದಿ ವರ್ಗದಲ್ಲಿ ಕಾರ್ಯಕ್ಷಮತೆ ಹಾಗೂ ವಿಷಯ ಪರಿಣತಿ ಹೆಚ್ಚಿಸಲು ಪರೀಕ್ಷೆ ನಡೆಸುವ ಕುರಿತು ಆಯುಕ್ತರ ಕಚೇರಿ ಸೂಚಿಸಿತ್ತು. ಆದರೆ, ಪರೀಕ್ಷೆ ನಡೆಸಲು ಹಿರಿಯ ಸಿಬ್ಬಂದಿ ಆಕ್ಷೇಪ ವ್ಯಕ್ತಪಡಿಸಿದ್ದರು. ಇಂತಹ ಪರೀಕ್ಷೆಗಳಿಂದ ಸಿಬ್ಬಂದಿಯ ಮನೋಬಲ ಕುಗ್ಗುತ್ತದೆ ಎಂದು ಮನವಿ ಸಲ್ಲಿಸಿದ್ದರು. ಮನವಿ ಪುರಸ್ಕರಿಸಿದ ಸರ್ಕಾರ ಪರೀಕ್ಷೆ ರದ್ದು ಮಾಡಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.