ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಷ್ಕೃತ ಪಠ್ಯ ವಾಪಸ್ ಇಲ್ಲ: ಸಚಿವ ಆರ್‌.ಅಶೋಕ

Last Updated 24 ಜೂನ್ 2022, 3:04 IST
ಅಕ್ಷರ ಗಾತ್ರ

ಬೆಂಗಳೂರು: ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಸಮಿತಿ ಪರಿಷ್ಕರಿಸಿರುವ ಪಠ್ಯಪುಸ್ತಕಗಳನ್ನು ಹಿಂದಕ್ಕೆ ಪಡೆಯುವ ಪ್ರಶ್ನೆಯೇ ಇಲ್ಲ. ಯಾರ ಒತ್ತಡಕ್ಕೂ ಮಣಿಯುವುದಿಲ್ಲ ಎಂದು ಕಂದಾಯ ಸಚಿವ ಆರ್‌.ಅಶೋಕ ಹೇಳಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಲವು ಸಾಹಿತಿಗಳೂ ತಮ್ಮ ಪಾಠಗಳನ್ನು ಹಿಂದಕ್ಕೆ ಪಡೆದಿರುವುದಾಗಿ ಹೇಳಿದ್ದಾರೆ. ಆದರೆ, ಈ ಬಾರಿ ಪಠ್ಯ ಪುಸ್ತಕಗಳಲ್ಲಿ ಅವರೆಲ್ಲರ ಪಾಠಗಳು ಇರಲಿವೆ. ಯಾವುದೇ ಪಾಠ ತೆಗೆಯುವುದಿಲ್ಲ’ ಎಂದು ತಿಳಿಸಿದರು.

‘ಚಕ್ರತೀರ್ಥ ಅಧ್ಯಕ್ಷತೆಯ ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಏಳೆಂಟು ಸಣ್ಣ– ಪುಟ್ಟ ದೋಷಗಳು ಉಳಿದಿವೆ. ದೊಡ್ಡ ಮಟ್ಟದ ತಪ್ಪುಗಳು ಆಗಿಲ್ಲ. ಅವುಗಳನ್ನು ಸರಿಪಡಿಸಿ ಮುಂದಿನ ಎಂಟು– ಹತ್ತು ದಿನಗಳಲ್ಲಿ ವಿದ್ಯಾರ್ಥಿಗಳಿಗೆ ವಿತರಿಸುತ್ತೇವೆ. ಬರಗೂರು ರಾಮಚಂದ್ರಪ್ಪ ಅವರ ಪರಿಷ್ಕರಣೆ ಮಾಡಿದಾಗ ಪಠ್ಯಗಳಲ್ಲಿ 150 ತಪ್ಪುಗಳಿದ್ದವು. ಆಗಲೂ ಸಿದ್ದರಾಮಯ್ಯ ಸರ್ಕಾರ ಹೊಸದಾಗಿ ಪುಸ್ತಕ ಮುದ್ರಿಸಿ ವಿತರಿಸಿಲ್ಲ. ಹೆಚ್ಚುವರಿ ಪುಟಗಳನ್ನಷ್ಟೇ ಸೇರಿಸಿದ್ದರು. ಅದೇ ಮಾದರಿ ಅನುಸರಿಸುತ್ತೇವೆ’ ಎಂದು ಅಶೋಕ ತಿಳಿಸಿದರು.

‘ಸಿದ್ದರಾಮಯ್ಯ ಅವರು ಬರಗೂರು ರಾಮಚಂದ್ರಪ್ಪ ಮೂಲಕ ಪಠ್ಯಪುಸ್ತಕಗಳಲ್ಲಿ ಕಮ್ಯುನಿಸ್ಟ್‌ ಸಿದ್ಧಾಂತವನ್ನು ಹೇರಿದರು. ಹಿಂದೂ ಧರ್ಮ, ಹಿಂದೂ ಅಸ್ಮಿತೆಯ ಪದಗಳು, ರಾಮಾಯಣ, ಮಹಾಭಾರತದ ಅಂಶಗಳು, ಈಶ್ವರ, ರಾಮ, ಕೃಷ್ಣರ ಕುರಿತು ಇದ್ದ ಅಂಶಗಳು ಮತ್ತು ಹೆಸರುಗಳನ್ನೂ ಪಠ್ಯಪುಸ್ತಕಗಳಿಂದ ತೆಗೆಸಿ ಹಾಕಿದರು. ಹಿಂದೂ ರಾಜರು, ಚಕ್ರವರ್ತಿಗಳನ್ನು ಕಡೆಗಣಿಸಿ, ಟಿಪ್ಪು ಮತ್ತು ಮೊಗಲರನ್ನು ವೈಭವೀ
ಕರಿಸಿದರು. ತಮ್ಮ ಸೈದ್ಧಾಂತಿಕ ಕಾರ್ಯಸೂಚಿಗೆ ಹೊಂದದ ವ್ಯಕ್ತಿಗಳು ಮತ್ತು ವಿಷಯಗಳನ್ನು ನಿರ್ದಾಕ್ಷಿಣ್ಯ
ವಾಗಿ ಕಿತ್ತು ಹಾಕಿದರು’ ಎಂದು ಅವರು ಹೇಳಿದರು.

ಜಿ.ಎಸ್‌.ಮುಡಂಬಡಿತ್ತಾಯ, ಬರಗೂರು ರಾಮಚಂದ್ರಪ್ಪ ಮತ್ತು ರೋಹಿತ್ ಚಕ್ರತೀರ್ಥ ನೇತೃತ್ವದ ಪರಿಷ್ಕರಣಾ ಸಮಿತಿಗಳು ಸಮಾಜ ವಿಜ್ಞಾನ ಮತ್ತು ಕನ್ನಡ ಭಾಷಾ ಪಠ್ಯಗಳ ಪರಿಷ್ಕರಣೆ, ಮರು ಪರಿಷ್ಕರಣೆ, ಅವುಗಳಲ್ಲಿ ಆಗಿರುವ ವ್ಯತ್ಯಾಸಗಳ ಪ್ರಮುಖ ಅಂಶಗಳ ಒಳಗೊಂಡ ಹೊತ್ತಗೆಯನ್ನು ಸಚಿವ ಅಶೋಕ ಬಿಡುಗಡೆ ಮಾಡಿದರು. ಸಚಿವರಾದ ಸಿ.ಸಿ.ಪಾಟೀಲ, ಭೈರತಿ ಬಸವರಾಜ, ಶಿವರಾಂಹೆಬ್ಬಾರ್‌ಸುದ್ದಿಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT