ಹಾವೇರಿ: ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಬಹಿರಂಗ ಪ್ರಚಾರಕ್ಕೆ ಬುಧವಾರ ಸಂಜೆ 7 ಗಂಟೆಗೆ ತೆರೆಬಿದ್ದಿತು. ಬಿಜೆಪಿಯಿಂದ ಅದ್ಧೂರಿ ‘ರೋಡ್ ಷೋ’ ನಡೆದರೆ, ಕಾಂಗ್ರೆಸ್ನಿಂದ ‘ಬೃಹತ್ ಬಹಿರಂಗ ಸಭೆ’ ನಡೆಯಿತು. ಆ ಮೂಲಕ ಉಭಯ ಪಕ್ಷಗಳ ನಾಯಕರು ಶಕ್ತಿ ಪ್ರದರ್ಶಿಸಿದರು.

ಹಾನಗಲ್ ಪಟ್ಟಣದ ರಸ್ತೆಗಳಲ್ಲಿ ಬಿಜೆಪಿ ಧ್ವಜ, ಕೇಸರಿ ಮತ್ತು ಕಾಂಗ್ರೆಸ್ ಬಾವುಟಗಳು ರಾರಾಜಿಸಿದವು. ಬೈಕ್ ಮತ್ತು ವಾಹನಗಳಲ್ಲಿ ನೆಚ್ಚಿನ ಪಕ್ಷಗಳಿಗೆ ಜೈಕಾರ ಹಾಕುತ್ತಾ ಕಾರ್ಯಕರ್ತರು ಹರ್ಷೋದ್ಗಾರ ಮಾಡುತ್ತಾ ಸಂಚರಿಸಿದರು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರ ಪಡೆ ಮತ್ತು ವಾಹನಗಳಿಂದ ಹಾನಗಲ್ ಪಟ್ಟಣದ ರಸ್ತೆಗಳು ಕಿಕ್ಕಿರಿದು ತುಂಬಿದ್ದವು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಾನಗಲ್ ಕ್ಷೇತ್ರದ ಮಾಸನಕಟ್ಟಿ, ಕೂಡಲ, ನರೇಗಲ್ಲ, ವಂಶಿ ಫಾರ್ಮ್ಹೌಸ್, ಕಾಡಶೆಟ್ಟಿಹಳ್ಳಿ, ಸಾಂವಸಗಿ ಗ್ರಾಮಗಳಲ್ಲಿ ಬಿಡುವಿಲ್ಲದೆ ‘ರೋಡ್ ಷೋ’ ಮತ್ತು ಸಭೆಗಳನ್ನು ನಡೆಸಿ, ಬಿಜೆಪಿಯತ್ತ ಮತಗಳನ್ನು ಸೆಳೆಯಲು ಕಸರತ್ತು ನಡೆಸಿದರು.

ಹಾನಗಲ್ ಪಟ್ಟಣದ ಕುಮಾರೇಶ್ವರ ವಿರಕ್ತ ಮಠದಿಂದ ನಗರದ ಪ್ರಮುಖ ರಸ್ತೆಗಳಲ್ಲಿ ನಡೆದ ಬಿಜೆಪಿ ‘ರೋಡ್ಷೋ’ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವರಾದ ಗೋವಿಂದ ಕಾರಜೋಳ, ಬಿ.ಸಿ.ಪಾಟೀಲ, ಡಾ.ಕೆ.ಸುಧಾಕರ್, ಮುನಿರತ್ನ, ಸಂಸದ ಶಿವಕುಮಾರ್ ಉದಾಸಿ, ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಪಾಲ್ಗೊಂಡು ಪ್ರಚಾರ ರ್ಯಾಲಿಗೆ ರಂಗು ತಂದರು.

ಕಾಂಗ್ರೆಸ್ ನಾಯಕರ ದಂಡು: ಹಾನಗಲ್ ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಕಾಂಗ್ರೆಸ್ನಿಂದ ಏರ್ಪಡಿಸಿದ್ದ ‘ಬೃಹತ್ ಬಹಿರಂಗ ಸಭೆ’ಗೆ ನಾಯಕರ ದಂಡೇ ಬಂದಿತ್ತು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಶಾಸಕರಾದ ಡಾ.ಜಿ.ಪರಮೇಶ್ವರ, ಜಮೀರ್ ಅಹಮದ್, ಎಚ್.ಕೆ.ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ, ಮಾಜಿ ಸಚಿವ ಮನೋಹರ ತಹಶೀಲ್ದಾರ್ ಸೇರಿದಂತೆ ಹಲವಾರು ನಾಯಕರು ‘ಕೈ’ ಬಲಪಡಿಸಿ ಎಂದು ಮನವಿ ಮಾಡಿದರು.

‘ನಿಶ್ಶಬ್ದ ಅವಧಿ’

ಅ.30ರಂದು ಮತದಾನ ನಡೆಯಲಿದ್ದು, 72 ಗಂಟೆ ಪೂರ್ವ ಅವಧಿಯನ್ನು ‘ನಿಶ್ಶಬ್ದ ಅವಧಿ’ ಎಂದು ಜಿಲ್ಲಾ ಚುನಾವಣಾಧಿಕಾರಿ ಘೋಷಿಸಿದ್ದಾರೆ. ಈ ಅವಧಿಯಲ್ಲಿ ಚುನಾವಣಾ ಪ್ರಚಾರ, ಬಹಿರಂಗ ಸಭೆ, ಸಮಾರಂಭಗಳನ್ನು ನಿಷೇಧಿಸಲಾಗಿದೆ. ಮನೆ–ಮನೆ ಪ್ರಚಾರಕ್ಕೆ ಅವಕಾಶ ನೀಡಲಾಗಿದೆ.

ತಾರಾ ಪ್ರಚಾರಕರು ಸೇರಿದಂತೆ ರಾಜಕೀಯ ಮುಖಂಡರು ರಾಜಕೀಯ ಉದ್ದೇಶಕ್ಕಾಗಿ ಕ್ಷೇತ್ರಕ್ಕೆ ಬಂದ ಹೊರಗಿನವರು ಬುಧವಾರ ಸಂಜೆ 7 ಗಂಟೆ ನಂತರ ಕ್ಷೇತ್ರದಲ್ಲಿ ಉಳಿದುಕೊಳ್ಳುವಂತಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿ ಆದೇಶಿಸಿದ ಹಿನ್ನೆಲೆಯಲ್ಲಿ ಪಕ್ಷಗಳ ವರಿಷ್ಠರು ಕ್ಷೇತ್ರದಿಂದ ಹೊರನಡೆದರು. ನ.2ರಂದು ಮತ ಎಣಿಕೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.