ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಂಬ್ ಸ್ಫೋಟದ ಆರೋಪಿ ಹೆಸರಿಗೆ ‘ಡ್ರಗ್ಸ್’ ರವಾನೆ?

ಕೇರಳದ ವಿಳಾಸದಿಂದ ಬಂದ ಕೋರಿಯರ್‌
Last Updated 11 ಏಪ್ರಿಲ್ 2021, 5:37 IST
ಅಕ್ಷರ ಗಾತ್ರ

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಬಾಂಬ್‌ ಸ್ಫೋಟ ಪ್ರಕರಣದ ಆರೋಪಿ ಮುಜೀಬ್ ಹೆಸರಿಗೆ ಕೋರಿಯರ್ ಮೂಲಕ ಪಾರ್ಸೆಲ್ ಬಂದಿದ್ದು, ಅದನ್ನು ಪತ್ತೆ ಹಚ್ಚಿರುವ ಜೈಲಿನ ಅಧಿಕಾರಿಗಳು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

‘ಏಪ್ರಿಲ್ 6ರಂದು ಡ್ರಗ್ಸ್ ಮಾದರಿ ವಸ್ತುವಿರುವ ಪಾರ್ಸೆಲ್‌ ಜೈಲಿಗೆ ಬಂದಿದೆ. ಅದರ ಸಮೇತ ಜೈಲಿನ ಅಧಿಕಾರಿಗಳು ದೂರು ನೀಡಿದ್ದಾರೆ. ಪಾರ್ಸೆಲ್‌ನ್ನು ಪರೀಕ್ಷೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ’ ಎಂದು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ಮೂಲಗಳು ಹೇಳಿವೆ.

‘ಮಡಿವಾಳ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಮುಜೀಬ್, ಹತ್ತು ವರ್ಷಗಳಿಂದ ಜೈಲಿನಲ್ಲಿದ್ದಾನೆ. ಆತನ ಹೆಸರಿನಲ್ಲಿ ಕೋರಿಯರ್‌ನಲ್ಲಿ ಬಂದ ಪಾರ್ಸೆಲ್‌ನ್ನು ಸಿಬ್ಬಂದಿ ಪರಿಶೀಲಿಸಿದ್ದರು. ಅದರಲ್ಲಿ ತಿಂಡಿ ಪೊಟ್ಟಣ ಹಾಗೂ ಬಾಟಲಿ ಇತ್ತು. ಬಾಟಲಿ ತೆರೆದು ನೋಡಿದಾಗ, ಅದರಲ್ಲಿ ಪೌಡರ್ ಕಂಡಿತ್ತು. ಮೇಲ್ನೋಟಕ್ಕೆ ಅದು ಡ್ರಗ್ಸ್ ರೀತಿಯಲ್ಲಿತ್ತು. ಪ್ರಯೋಗಾಲಯದ ವರದಿ ಬಂದ ನಂತರ ಅದರಲ್ಲಿದ್ದ ಪದಾರ್ಥ ಏನೆಂಬುದು ತಿಳಿಯಲಿದೆ’ ಎಂದೂ ತಿಳಿಸಿವೆ.

ಕೇರಳ ವಿಳಾಸದಿಂದ ಬಂದಿದ್ದ ಕೋರಿಯರ್; ‘ಕೇರಳ ಕಣ್ಣೂರಿನಿಂದ ಜಿನೇಬ್ ಎಂಬಾತ ಮುಜೀಬ್‌ಗೆ ಕೋರಿಯರ್ ಕಳುಹಿಸಿದ್ದಾನೆ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಆತ ಯಾರು ಎಂಬುದನ್ನು ಪತ್ತೆ ಮಾಡಲಾಗುತ್ತಿದೆ’ ಎಂದೂ ಮೂಲಗಳು ಹೇಳಿವೆ.

‘ಕೋರಿಯರ್ ಬಂದಿರುವ ವಿಳಾಸದ ಬಗ್ಗೆ ಕೇರಳ ಪೊಲೀಸರಿಂದ ಹೆಚ್ಚಿನ ಮಾಹಿತಿ ಕೇಳಲಾಗಿದೆ’ ಎಂದೂ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT