ಬೆಂಗಳೂರು: ಕೋವಿಡ್ ಸೇರಿದಂತೆ ಬೇರೆ ವಿಚಾರಗಳತ್ತ ಜನರ ಗಮನ ಸೆಳೆದು ಪೆಟ್ರೋಲ್, ಡೀಸೆಲ್ ದರ ಹೆಚ್ಚಳದ ಹೊರೆಯನ್ನು ಹೊರಿಸುವ ಚಾಣಾಕ್ಷತನವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಯಾವ ನಿರ್ಧಾರ ಕೈಗೊಂಡರೂ ಜನರು ಒಪ್ಪುತ್ತಾರೆ ಎಂಬ ಉದ್ಧಟತನದ ಪರಿಣಾಮವೇ ಇದು ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಈಗ ಗ್ರಾಮೀಣ ಪ್ರದೇಶದಲ್ಲೂ ಪ್ರತಿ ಲೀಟರ್ ಪೆಟ್ರೋಲ್ ದರ ₹ 100ರ ಗಡಿ ದಾಟಿದೆ. ವಾಹನ ಬಳಕೆದಾರರು, ರೈತರು, ಕಾರ್ಮಿಕರು ಸೇರಿದಂತೆ ಎಲ್ಲ ಜನರಿಗೂ ಇದರ ಹೊರೆ ಬೀಳಲಿದೆ. ರಾಜ್ಯ ಸರ್ಕಾರಗಳು ಸ್ಥಳೀಯ ಮಾರಾಟ ತೆರಿಗೆ ಕಡಿತ ಮಾಡಿದರೆ ಒಂದಷ್ಟು ಹೊರೆ ಇಳಿಯುತ್ತದೆ. ಈ ವಿಚಾರದಲ್ಲಿ ಜನರು ಎಚ್ಚರಗೊಂಡು ಹೋರಾಟಕ್ಕೆ ಇಳಿಯಬೇಕಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.