ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2 ಲಕ್ಷದ ಮೈಲಿಗಲ್ಲು ದಾಟಿದ ಪ್ರಜಾವಾಣಿ ಪಾಡ್‌ಕಾಸ್ಟ್

Last Updated 25 ಫೆಬ್ರುವರಿ 2021, 14:00 IST
ಅಕ್ಷರ ಗಾತ್ರ

ಕನ್ನಡ ಪತ್ರಿಕಾ ಲೋಕದಲ್ಲಿ ಮೊದಲ ಬಾರಿಗೆ ಪಾಡ್‌ಕಾಸ್ಟ್ ಎಂಬ ಧ್ವನಿ ಮಾಧ್ಯಮದ ಮೂಲಕ ಸಾಕಷ್ಟು ಕೇಳುಗರ ಮೆಚ್ಚುಗೆಗೆ ಪಾತ್ರವಾಗಿರುವ ಪ್ರಜಾವಾಣಿಯ 'ಕನ್ನಡಧ್ವನಿ' ಪಾಡ್‌ಕಾಸ್ಟ್ ಚಾನೆಲ್ ಈಗ 2 ಲಕ್ಷದ ಗಡಿಯನ್ನು ದಾಟಿದೆ.

2020ರ ಜೂನ್ ತಿಂಗಳಲ್ಲಿ ಪಾಡ್‌ಕಾಸ್ಟ್ ಎಂಬ ಧ್ವನಿ ಪ್ರಸಾರ ವ್ಯವಸ್ಥೆಯ ಮೂಲಕ ಕೇಳುಗರನ್ನು ತಲುಪುವ ಕಾಯಕಕ್ಕೆ ಮುಂದಾದ ನಾಲ್ಕೇ ತಿಂಗಳಲ್ಲಿ ಕನ್ನಡಧ್ವನಿಯು 1 ಲಕ್ಷ ಮಂದಿ ಕೇಳುಗರನ್ನು ತಲುಪಿತ್ತು. ಈಗ 2 ಲಕ್ಷ ಮಂದಿ ಪ್ರಜಾವಾಣಿ ಪಾಡ್‌ಕಾಸ್ಟ್‌ನ ವೈವಿಧ್ಯಮಯ ಕಾರ್ಯಕ್ರಮಗಳನ್ನು ಕಂಪ್ಯೂಟರ್, ಮೊಬೈಲ್ ಮೂಲಕ ಆಲಿಸಿದ್ದಾರೆ.

ವಾರಕ್ಕೊಮ್ಮೆ ಪ್ರಕಟವಾಗುತ್ತಾ ಜನಮೆಚ್ಚುಗೆ ಪಡೆದಿದ್ದ ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ 'ವಚನವಾಣಿ' ಈಗ ಕೇಳುಗರ ಬೇಡಿಕೆಯಿಂದ ಪ್ರತಿದಿನವೂ ಪ್ರಕಟವಾಗುತ್ತಿದೆ. ಇದನ್ನು ನಡೆಸಿಕೊಡುವವರು ಡಾ.ಬಸವರಾಜ ಸಾದರ್, ಡಾ.ಕುಮಾರ್ ಕಣವಿ, ಕವಿತಾ ಸಾದರ್ ಹಾಗೂಬಸವ ಕುಮಾರ್ ಅವರ ತಂಡ. ಇದೇ ವೇಳೆ, ಪ್ರತೀ ಶನಿವಾರ ಪ್ರಸಾರವಾಗುವ, ಪ್ರಚಲಿತ ವಿದ್ಯಮಾನಗಳ ಕುರಿತ ಮಾಹಿತಿಪೂರ್ಣ ಚರ್ಚಾ ಸರಣಿ 'ಹರಟೆ ಕಟ್ಟೆ'ಗೆ ಕೇಳುಗರ ಸಂಖ್ಯೆ ದುಪ್ಪಟ್ಟಾಗಿದೆ. ಅಂತೆಯೇ, ಪ್ರತಿ ಶುಕ್ರವಾರ ಮಕ್ಕಳ ಏಕಾಗ್ರತೆಗೆ ನೆರವಾಗುತ್ತಲೇ, ಕಥೆ ಕೇಳಿಸುವ 'ಕಥೆ ಕೇಳು ಮಗುವೇ' ಕಾರ್ಯಕ್ರಮವಂತೂ ಕೋವಿಡ್ ಕಾಲದಲ್ಲಿ ಮಕ್ಕಳ ಮನವರಳಿಸುವಲ್ಲಿ ನೆರವಾಗಿದೆ.

ಪ್ರತಿದಿನವೂ ಸಂಪಾದಕೀಯ, ಪ್ರಚಲಿತ ವಿದ್ಯಮಾನ, ದಿನದ ಸೂಕ್ತಿ ಇವುಗಳಲ್ಲದೆ, ದೈನಿಕ ವಿಶೇಷವಾಗಿ ಭಾನುವಾರ ವೈದ್ಯಮಿತ್ರ ಮತ್ತು ಕಥಾ ಸಾಗರ, ಮಂಗಳವಾರ ಸುದ್ದಿ ಸ್ವಾರಸ್ಯ, ಬುಧವಾರ ಝಣ ಝಣ ಕಾಂಚಾಣ, ಗುರುವಾರ ವನಿತಾ ಧ್ವನಿ ಮತ್ತು ಆಟ-ನೋಟ, ಶುಕ್ರವಾರ ಮ್ಯಾಟಿನಿ ಶೋ ಪ್ರಸಾರವಾಗುತ್ತಿದೆ.

ಪ್ರಜಾವಾಣಿ ಪಾಡ್‌ಕಾಸ್ಟ್ ಅನ್ನು ಪ್ರಜಾವಾಣಿ ಜಾಲತಾಣದಲ್ಲಿ (Prajavani.net/podcast) ಹಾಗೂ ಆ್ಯಂಕರ್, ಆ್ಯಪಲ್ ಪಾಡ್‌ಕಾಸ್ಟ್ , ಸ್ಪಾಟಿಫೈ, ಬ್ರೇಕರ್, ಗೂಗಲ್ ಪಾಡ್‌ಕಾಸ್ಟ್‌, ಪಾಕೆಟ್ ಕಾಸ್ಟ್, ರೇಡಿಯೋ ಪಬ್ಲಿಕ್ ಹಾಗೂ ಓವರ್‌ಕಾಸ್ಟ್ ತಾಣಗಳು ಮತ್ತು ಆ್ಯಪ್‌ಗಳ ಮೂಲಕವೂ ಕೇಳಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT