ಶನಿವಾರ, ಜುಲೈ 31, 2021
26 °C

ರೈತರ ಆದಾಯ ದುಪ್ಪಟ್ಟು ಮಾಡದ ಮೋದಿ ಖರ್ಚನ್ನೇ ಎರಡರಷ್ಟಾಗಿಸಿದ್ದಾರೆ: ಕಾಂಗ್ರೆಸ್‌

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ರೈತರ ಆದಾಯ ದುಪ್ಪಟ್ಟು ಮಾಡುತ್ತೇನೆಂದು ಹೇಳಿದ್ದ ಮೋದಿ ಖರ್ಚನ್ನೇ ಎರಡರಷ್ಟಾಗಿಸಿದ್ದಾರೆ ಎಂದು ಕರ್ನಾಟಕ ಕಾಂಗ್ರೆಸ್‌ ವ್ಯಂಗ್ಯವಾಡಿದೆ.

ಈ ವಿಚಾರವಾಗಿ ಭಾನುವಾರ ಟ್ವೀಟ್‌ ಮಾಡಿರುವ ಕರ್ನಾಟಕ ಕಾಂಗ್ರೆಸ್‌, 'ಇಂಧನ ತೈಲಗಳ ಬೆಲೆ ಏರಿಕೆ ಪರಿಣಾಮದ ಆಳ, ಅಗಲದ ಅಂದಾಜಿಲ್ಲಾದ ದುಷ್ಟ ಬಿಜೆಪಿ ಸರ್ಕಾರ ಬೆಲೆ ಏರಿಕೆ ಮಾಡಿದೆ. ಆ ಮೂಲಕ ಕೃಷಿ, ಉತ್ಪಾದನೆ, ಕೈಗಾರಿಕೆ ಸೇರಿದಂತೆ ಇಡೀ ಅರ್ಥ ವ್ಯವಸ್ಥೆಯನ್ನ ಬುಡಮೇಲಾಗಿಸಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದೆ.

'ರೈತರ ಆದಾಯ ಡಬಲ್ ಮಾಡುತ್ತೇನೆಂದು ಹೇಳಿದ್ದ ಪ್ರಧಾನಿ ಮೋದಿ ರೈತರ ಖರ್ಚನ್ನು ಡಬಲ್‌ ಮಾಡುತ್ತಿದ್ದಾರೆ. ಈಗಾಗಲೇ ರೈತ ಸೋತಿದ್ದಾನೆ, ಮುಂದೆ ಸಾಯುತ್ತಾನೆ' ಎಂದು ಕಾಂಗ್ರೆಸ್‌ ಟೀಕಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು