ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಸ್‌ಐ ನೇಮಕಾತಿ ಅಕ್ರಮ: ಅಮ್ರಿತ್ ಪೌಲ್‌ ವಿರುದ್ಧ 1,406 ಪುಟಗಳ ಆರೋಪ ಪಟ್ಟಿ

Last Updated 28 ಸೆಪ್ಟೆಂಬರ್ 2022, 16:19 IST
ಅಕ್ಷರ ಗಾತ್ರ

ಬೆಂಗಳೂರು: ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ (ಪಿಎಸ್‌ಐ) ನೇಮಕಾತಿ ಪರೀಕ್ಷೆಯ ಅಕ್ರಮದಲ್ಲಿ ಬಂಧಿತ ಆರೋಪಿ ಐಪಿಎಸ್‌ ಅಧಿಕಾರಿಅಮ್ರಿತ್‌ ಪೌಲ್‌ ಅವರ ವಿರುದ್ಧದ ತನಿಖೆ ಪೂರ್ಣಗೊಳಿಸಿರುವ ಸಿಐಡಿ ತಂಡವು 1,406 ಪುಟಗಳ ಹೆಚ್ಚುವರಿ ಆರೋಪ ಪಟ್ಟಿಯನ್ನು 1ನೇ ಎಸಿಎಂಎಂ ನ್ಯಾಯಾ ಲಯಕ್ಕೆ ಬುಧವಾರ ಸಲ್ಲಿಸಿದೆ.

38 ಸಾಕ್ಷಿದಾರರ ಹೇಳಿಕೆ ಸಂಗ್ರಹಿ ಸಿದ್ದ ತನಿಖಾ ತಂಡವು 78 ದಾಖಲೆಗಳ ಸಹಿತ ಆರೋಪ ಪಟ್ಟಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಧೀಶರಿಗೆ ಸಲ್ಲಿಸಿತು.

ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಅಮ್ರಿತ್‌ ಪೌಲ್‌ ವಿರುದ್ಧ ಪ್ರಕರಣ ದಾಖಲಾಗಿತ್ತು.

ಅಮ್ರಿತ್‌ ಪೌಲ್‌, ಪೊಲೀಸ್‌ ನೇಮಕಾತಿ ವಿಭಾಗದ ಎಡಿಜಿಪಿಯಾಗಿದ್ದರು. ಹಣದ ವರ್ಗಾವಣೆ, ಅಕ್ರಮದಲ್ಲಿ ಅವರ ಪಾತ್ರ, ಅಭ್ಯರ್ಥಿಗಳಿಂದ ಪಡೆದ ಹಣದಿಂದ ಆಸ್ತಿ ಖರೀದಿಸಿರುವ ಮಾಹಿತಿ ಈ ಪಟ್ಟಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ.

‘ಪಿಎಸ್‌ಐ ಪರೀಕ್ಷೆ ಬರೆದಿದ್ದ 27 ಅಭ್ಯರ್ಥಿಗಳ ಒಎಂಆರ್‌ ಪ್ರತಿಯನ್ನು ನೇಮಕಾತಿ ವಿಭಾಗದ ಪ್ರಥಮ ದರ್ಜೆ ಸಹಾಯಕರಾದ (ಎಫ್‌ಡಿಎ) ಹರ್ಷ ಹಾಗೂ ಶ್ರೀನಿವಾಸ್ ಅವರು ಪೌಲ್‌ ಅವರ ಸೂಚನೆಯಂತೆ ತಿದ್ದುಪಡಿ ಮಾಡಿದ್ದರು ಎಂಬುದು ಆರೋಪ ಪಟ್ಟಿಯಲ್ಲಿದೆ. ಪೌಲ್‌ ಅವರ ಸೂಚನೆಯಂತೆ ನಡೆದಿದ್ದ ಅಕ್ರಮದ ಸಂಪೂರ್ಣ ಮಾಹಿತಿಯನ್ನು ಈ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.

2021ರ ಅಕ್ಟೋಬರ್ 3ರಂದು ರಾಜ್ಯದ 92 ಕೇಂದ್ರಗಳಲ್ಲಿ ಪಿಎಸ್‌ಐ ಪರೀಕ್ಷೆ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT