ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PSI ಹಗರಣ ಆರೋಪಿ ಆರ್.ಡಿ ಪಾಟೀಲ್‌ಗೆ ಬಿಜೆಪಿ ಟಿಕೆಟ್ ಖಚಿತ: ಕಾಂಗ್ರೆಸ್ ವ್ಯಂಗ್ಯ

Last Updated 24 ಜನವರಿ 2023, 9:40 IST
ಅಕ್ಷರ ಗಾತ್ರ

ನವದೆಹಲಿ: ಪಿಎಸ್ಐ ನೇಮಕಾತಿ ಹಗರಣವನ್ನು ಪ್ರಸ್ತಾಪಿಸಿ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

ಪಿಎಸ್ಐ ಹಗರಣ ಪ್ರಸ್ತಾಪಿಸಿ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಕಲಬುರಗಿಯಲ್ಲಿ ಆರ್.ಡಿ ಪಾಟೀಲ್, ಸಿಎಂ ಬೊಮ್ಮಾಯಿಗೆ ಸ್ವಾಗತಿಸುವ ಫ್ಲೆಕ್ಸ್ ಹಾಕಿದ್ದಾನೆ. ಈ ಮೂಲಕ ಆತನಿಗೆ ಬೊಮ್ಮಾಯಿ ಅವರ ಶ್ರೀರಕ್ಷೆ ಇದೆ ಎನ್ನುವುದು ಸ್ಪಷ್ಟವಾಗಿದೆ’ ಎಂದು ಕಿಡಿಕಾರಿದೆ.

‘ಮುಂಬರುವ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವುದಾಗಿ ಹೇಳಿಕೊಂಡಿದ್ದಾನೆ. ಆತನಿಗೆ ಬಿಜೆಪಿ ಟಿಕೆಟ್ ನೀಡುವುದು ಖಚಿತವಿರಬಹುದು. ಆತ ಬಿಜೆಪಿಗರ ಹೆಸರು ಬಾಯಿ ಬಿಡದಿರುವುದಕ್ಕೆ 'ಟಿಕೆಟ್' ಉಡುಗೊರೆಯೇ’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಪಿಎಸ್‌ಐ ಹಗರಣದ ಮುಚ್ಚಿಹಾಕಲು ಸಿಐಡಿ ಪೊಲೀಸ್ ಅಧಿಕಾರಿಗಳು ₹3 ಕೋಟಿ ಕೇಳಿದ್ದರು, ನಾನು ₹76 ಲಕ್ಷ ಕೊಟ್ಟಿದ್ದೇನೆ" ಎಂದು ಆರ್.ಡಿ ಪಾಟೀಲ್ ಗಂಭೀರ ಆರೋಪ ಮಾಡಿದ್ದಾನೆ. ಪ್ರಾಮಾಣಿಕ, ಪಾರದರ್ಶಕ ತನಿಖೆ ಎಂದು ಡೈಲಾಗ್ ಹೊಡೆದಿದ್ದ ಬಸವರಾಜ ಬೊಮ್ಮಾಯಿ ಅವರೇ, ನಿಮ್ಮ ಪಾರದರ್ಶಕತೆ ಇದೇನಾ? ಸರ್ಕಾರದ ತನಿಖೆಯಲ್ಲಿ ಸತ್ಯ ಸಮಾಧಿಯಾಗುತ್ತಿದೆ’ ಎಂದು ಕಾಂಗ್ರೆಸ್‌ ವಾಗ್ದಾಳಿ ನಡೆಸಿದೆ.

ಪಿಎಸ್‌ಐ ಹಗರಣದ ಪಾರದರ್ಶಕತೆ ಹೇಗಿದೆ ಎಂದು ಹಗರಣದ ಆರೋಪಿಯಿಂದಲೇ ಬೆತ್ತಲಾಗಿದೆ. ನ್ಯಾಯಾಂಗ ತನಿಖೆಗೆ ವಹಿಸಿ ಎಂದು ಕಾಂಗ್ರೆಸ್ ಆಗ್ರಹಿಸಿದಾಗ ಪ್ರಾಮಾಣಿಕ ತನಿಖೆ ನಡೆಯುತ್ತಿದೆ ಎಂಬ ಸೋಗಲಾಡಿ ಸಮರ್ಥನೆ ಮಾಡಿಕೊಳ್ಳುತ್ತಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ, ಸಿಐಡಿ ಅಧಿಕಾರಿಗಳ ₹3 ಕೋಟಿ ಡೀಲಿಂಗ್ ಬಗ್ಗೆ ಈಗ ಮಾತಾಡುತ್ತಿಲ್ಲವೇಕೆ? ಎಂದು ಕಾಂಗ್ರೆಸ್ ಕುಟುಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT