ಬುಧವಾರ, ನವೆಂಬರ್ 25, 2020
18 °C

ಪಿಯುಸಿ: ಶೇ 30ರಷ್ಟು ಪಠ್ಯ ಕಡಿತಗೊಳಿಸಲು ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪ್ರಥಮ ಮತ್ತು ದ್ವಿತೀಯ ಪಿಯು ತರಗತಿಗಳ ವಿಜ್ಞಾನ ವಿಷಯಗಳನ್ನು (ಭೌತ ವಿಜ್ಞಾನ, ರಸಾಯನ ವಿಜ್ಞಾನ, ಜೀವ ವಿಜ್ಞಾನ, ಗಣಿತ ಶಾಸ್ತ್ರ) ಹೊರತುಪಡಿಸಿ, ಇತರ 33 ವಿಷಯಗಳಲ್ಲಿ ಶೇ 30ರಷ್ಟು ಪಠ್ಯವನ್ನು ಕಡಿತಗೊಳಿಸಲು ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಈ ಪಠ್ಯಕ್ರಮ 2020–21ನೇ ಶೈಕ್ಷಣಿಕ ವರ್ಷಕ್ಕೆ ಮಾತ್ರ ಅನ್ವಯ ಆಗಲಿದೆ.

ವಿಜ್ಞಾನ ವಿಷಯಗಳ ಪಠ್ಯ ಕಡಿತವನ್ನು ಸಿಬಿಎಸ್‌ಇ ಶಿಕ್ಷಣ ಮಂಡಳಿ ನಿಗದಿಪಡಿಸಿದಂತೆ ಯಥಾವತ್‌ ಅಳವಡಿಸಲು ತೀರ್ಮಾನಿಸಲಾಗಿದೆ. ಇತರ ಒಟ್ಟು 34 ವಿಷಯಗಳಲ್ಲಿ ಕರ್ನಾಟಕ ಸಂಗೀತ ವಿಷಯಕ್ಕೆ ಕಳೆದ ಎರಡು ವರ್ಷಗಳಲ್ಲಿ ಯಾವುದೇ ವಿದ್ಯಾರ್ಥಿ ದಾಖಲಾಗದೇ ಇರುವುದರಿಂದ ಆ ವಿಷಯವನ್ನು ಪಠ್ಯ ಕಡಿತ ಪ್ರಕ್ರಿಯೆಯಿಂದ ಕೈಬಿಡಲಾಗಿದೆ.

‘ಈಗಾಗಲೇ ಕೇಂದ್ರ ಸರ್ಕಾರ 1ರಿಂದ 12ನೇ ತರಗತಿವರೆಗೆ ಶೇ 30ರಷ್ಟು ಪಠ್ಯ ಕಡಿತಗೊಳಿಸಿದೆ. ರಾಜ್ಯ ಸರ್ಕಾರದ ಸೂಚನೆಯಂತೆ ಈ ಕ್ರಮ ತೆಗೆದುಕೊಳ್ಳಲಾಗಿದ್ದು, ಪಠ್ಯ ಪುಸ್ತಕ ರಚನಾ ಸಮಿತಿ ಮತ್ತು ಪರಿಷ್ಕರಣಾ ಸಮಿತಿಯ ಸದಸ್ಯರು ಕಡಿತಗೊಳಿಸಬಹುದಾದ ಪಠ್ಯಗಳ ಕುರಿತು ವರದಿ ನೀಡಿದ್ದಾರೆ. ಇಲಾಖೆಯ ವೆಬ್‌ಸೈಟ್‌ನಲ್ಲಿ ಕಡಿತಗೊಳಿಸಿದ ಪಠ್ಯಗಳ ಮಾಹಿತಿ ಲಭ್ಯವಿದೆ’ ಎಂದು ಇಲಾಖೆಯ ನಿರ್ದೇಶಕರು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು