ಸೋಮವಾರ, ನವೆಂಬರ್ 23, 2020
22 °C

ಪ್ರಜಾವಾಣಿ ನ್ಯೂಸ್ ಕ್ವಿಜ್- ನಿಯಮ ಮತ್ತು ನಿಬಂಧನೆಗಳು

. Updated:

ಅಕ್ಷರ ಗಾತ್ರ : | |

 

ಪ್ರಜಾವಾಣಿ-ಡೆಕ್ಕನ್ ಹೆರಾಲ್ಡ್ (ಪಿವಿ-ಡಿಎಚ್) ನ್ಯೂಸ್ ಕ್ವಿಜ್‌ ಅವಧಿ

1) ಒಟ್ಟು 6 ವಾರಗಳ ಅವಧಿಯಲ್ಲಿ ಸ್ಪರ್ಧೆ ನಡೆಯಲಿದೆ. 15ನೇ ನವೆಂಬರ್ 2020ರಂದು ಆರಂಭವಾಗುವ ಸ್ಪರ್ಧೆಯು 27ನೇ ಡಿಸೆಂಬರ್ 2020ರಂದು ಮುಕ್ತಾಯವಾಗಲಿದೆ.

ಪಿವಿ-ಡಿಎಚ್‌ ನ್ಯೂಸ್ ಕ್ವಿಜ್‌ ಪ್ರವೇಶ

1) ಕ್ವಿಜ್‌ನಲ್ಲಿ ಪಾಲ್ಗೊಳ್ಳುವವರು ಪ್ರತಿದಿನ ಪ್ರಜಾವಾಣಿ / ಡೆಕ್ಕನ್ ಹೆರಾಲ್ಡ್‌ ಓದಿ, ಪತ್ರಿಕೆಯಲ್ಲಿ ಪ್ರಕಟವಾಗುವ ಪ್ರಶ್ನೆಗಳಿಗೆ ಉತ್ತರಿಸಬೇಕು.

2) ಪ್ರಜಾವಾಣಿಯಲ್ಲಿ ಕೇಳುವ ಪ್ರಶ್ನೆಗಳಿಗೆ ಎಸ್‌ಎಂಎಸ್ ಮೂಲಕ, ಡೆಕ್ಕನ್ ಹೆರಾಲ್ಡ್‌ನಲ್ಲಿ ಪ್ರಕಟವಾಗುವ ಪ್ರಶ್ನೆಗಳಿಗೆ  ಆನ್‌ಲೈನ್‌ನಲ್ಲಿ ಉತ್ತರಿಸಬೇಕು.

ಪಿವಿ / ಡಿಎಚ್‌ ಕ್ವಿಜ್‌ನಲ್ಲಿ ಪಾಲ್ಗೊಳ್ಳಲು, ಪ್ರಶಸ್ತಿಗಳನ್ನು ಗೆಲ್ಲಲು ಅರ್ಹತೆಗಳು

1) ಕರ್ನಾಟಕದಲ್ಲಿ ವಾಸವಿರುವ ಎಲ್ಲರಿಗೂ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಮುಕ್ತ ಅವಕಾಶವಿದೆ. ವಾಸಸ್ಥಳದ ವಿಳಾಸ, ಸಂಪರ್ಕ ಸಂಖ್ಯೆ ಮತ್ತು ಇಮೇಲ್ ವಿಳಾಸ ಬೇಕು.

2) ಸ್ವಯಂಪ್ರೇರಿತವಾಗಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬೇಕು.

1) ನ್ಯೂಸ್‌ ಕ್ವಿಜ್‌ನಲ್ಲಿ ಪಾಲ್ಗೊಳ್ಳುವವರು ಪ್ರಜಾವಾಣಿ ಡೆಕ್ಕನ್ ಹೆರಾಲ್ಡ್‌ ಪತ್ರಿಕೆ ಖರೀದಿಸುವುದು ಕಡ್ಡಾಯ. ಗೆದ್ದ ಸ್ಪರ್ಧಿಗಳು ಪ್ರಜಾವಾಣಿ ಖರೀದಿಸುತ್ತಿದ್ದ ಬಗ್ಗೆ ದಾಖಲೆಗಳನ್ನು ತೋರಿಸಬೇಕಾಗುತ್ತದೆ. ಪತ್ರಿಕೆಯ ತುಣುಕುಗಳು, ಮಾಸಿಕ ಬಿಲ್ ಪಾವತಿ ರಸೀದಿಗಳು ಅಥವಾ ಇತ್ಯಾದಿಗಳನ್ನು ತೋರಿಸಬೇಕಾಗುತ್ತದೆ.

2) ನ್ಯೂಸ್‌ ಕ್ವಿಜ್‌ನಲ್ಲಿ ಪಾಲ್ಗೊಳ್ಳಲು ಪ್ರಜಾವಾಣಿ / ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳು ಯಾವುದೇ ಶುಲ್ಕ ವಿಧಿಸುವುದಿಲ್ಲ.

3) ದಿ ಪ್ರಿಂಟರ್ಸ್‌ ಮೈಸೂರು ಪ್ರೈವೇಟ್‌ ಲಿಮಿಟೆಡ್ (ಟಿಪಿಎಂಎಲ್‌) ಸಿಬ್ಬಂದಿ, ಅವರ ಸಂಬಂಧಿಗಳು, ನ್ಯೂಸ್‌ ಕ್ವಿಜ್‌ ಆಯೋಜಕರು, ನ್ಯೂಸ್‌ ಕ್ವಿಜ್ ಚಟುವಟಿಕೆಯಲ್ಲಿ ಪಾಲ್ಗೊಳ್ಳುವವರು ಕ್ವಿಜ್‌ನಲ್ಲಿ ಪಾಲ್ಗೊಳ್ಳುವಂತಿಲ್ಲ.

ಪಿವಿ / ಡಿಎಚ್ ನ್ಯೂಸ್‌ ಕ್ವಿಜ್‌ನ ಸಾಮಾನ್ಯ ನಿಯಮಗಳು ಮತ್ತು ನಿಬಂಧನೆಗಳು

1) ಸ್ಪರ್ಧೆಯು ಈ ಕೆಳಕಂಡ ನಿಯಮ ಮತ್ತು ನಿಬಂಧನಗಳಿಗೆ ಒಳಪಟ್ಟಿರುತ್ತದೆ. ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಎಲ್ಲರೂ ಈ ಅಂಶಗಳನ್ನು ಓದಿ, ಅರ್ಥ ಮಾಡಿಕೊಂಡಿದ್ದೇವೆ ಎಂದು ದೃಢಪಡಿಸಿರುತ್ತಾರೆ. ಈ ನಿಯಮಗಳಿಗೆ ಒಪ್ಪಿಗೆ ಸೂಚಿಸಿದ ನಂತರವೇ ಸ್ಪರ್ಧೆಯಲ್ಲಿ ಪಾಲ್ಗೊಂಡಿರುತ್ತಾರೆ. ಸ್ಪರ್ಧಿಸಲು ಅವಕಾಶ ಕೊಟ್ಟ ಮಾತ್ರಕ್ಕೆ, ಅಂಥವರು ಗೆಲುವು ಸಾಧಿಸಿದ್ದಾರೆ ಎಂದಾಗಲಿ, ಅವರಿಗೆ ಬಹುಮಾನ ನೀಡುವುದು ಪ್ರಜಾವಾಣಿಯ ಬಾಧ್ಯತೆ ಎಂದಾಗಲಿ ಭಾವಿಸಬಾರದು. ಭವಿಷ್ಯದಲ್ಲಿ ಇಂಥದ್ದೇ, ಇದನ್ನೇ ಹೋಲುವ ಅಥವಾ ಇದರ ವಿಸ್ತೃತ ಸ್ಪರ್ಧೆಗಳನ್ನು ನಡೆಸಲು ಪ್ರಜಾವಾಣಿಗೆ ಯಾವುದೇ ಬಾಧ್ಯತೆ ಇರುವುದಿಲ್ಲ.

2) ನಿಯಮಗಳಲ್ಲಿ ಉಲ್ಲೇಖಿಸಿರುವ ಮಾಹಿತಿಯನ್ನು ಸಕಾಲದಲ್ಲಿ ಒದಗಿಸದಿರುವುದು ಅಥವಾ ಅಪೂರ್ಣ ಮಾಹಿತಿ ಒದಗಿಸುವುದು, ಗುರುತು ಸಾಬೀತುಪಡಿಸುವ ದಾಖಲೆ ಒದಗಿಸಲು ವಿಫಲವಾದರೆ ಮತ್ತು / ಅಥವಾ ಮೂಲ ಸಂಖ್ಯೆಯನ್ನು ದೃಢೀಕರಿಸಲು ಸಾಧ್ಯವಾಗದಿದ್ದರೆ ಬಹುಮಾನ ಪಡೆಯುವ ಅರ್ಹತೆಯನ್ನು ಕಳೆದುಕೊಳ್ಳಬೇಕಾಗುತ್ತದೆ. 
ನಿಯಮಗಳ ಉಲ್ಲಂಘನೆ ಅಥವಾ ಇತರ ಯಾವುದೇ ಸಕಾರದಿಂದ ಯಾರನ್ನೇ ಆದರೂ ಪ್ರಶಸ್ತಿ ಪಡೆಯಲು ಅನರ್ಹಗೊಳಿಸುವ ಅಧಿಕಾರವನ್ನು ಟಿಪಿಎಂಎಲ್ ಹೊಂದಿದೆ.

ಮಾಹಿತಿಗೆ ತಕ್ಕ ಪೂರಕ ದಾಖಲೆಗಳನ್ನು ಒದಗಿಸಲು ವಿಫಲರಾಗುವುದು, ಮೋಸ, ದುರುದ್ದೇಶ ಅಥವಾ ಇತರ ಯಾವುದೇ ಸಕಾರಣದಿಂದ ಯಾವುದೇ ವ್ಯಕ್ತಿಯನ್ನು ಬಹುಮಾನ ಪಡೆಯಲು ಅನರ್ಹ ಎಂದು ಘೋಷಿಸುವ ಹಕ್ಕನ್ನು ಟಿಪಿಎಂಎಲ್ ಕಾಯ್ದಿರಿಸಿಕೊಂಡಿದೆ.

3) ಸ್ಪರ್ಧೆ ನಡೆಯುವ ಅವಧಿಯಲ್ಲಿ ಒಂದೇ ಕ್ವಿಜ್‌ಗೆ ಬಹು ಉತ್ತರಗಳನ್ನು ನೀಡಲು ಒಬ್ಬ ವ್ಯಕ್ತಿಗೆ ಅವಕಾಶ ಇರುವುದಿಲ್ಲ.

4) ಸ್ಪರ್ಧೆಯ ನಿಯಮ ಮತ್ತು ನಿಬಂಧನೆಗಳನ್ನು ಬದಲಿಸುವ ಹಕ್ಕನ್ನು ಟಿಪಿಎಂಎಲ್ ಕಾಯ್ದಿರಿಸಿದೆ. ಯಾವುದೇ ಸೂಚನೆ ನೀಡದೆ, ಸ್ಪರ್ಧೆಯ ಅವಧಿ ವಿಸ್ತರಿಸುವ, ರದ್ದುಪಡಿಸುವ ಅಥವಾ ಮೊಟಕುಗೊಳಿಸುವ ಅಧಿಕಾರವನ್ನು ಟಿಪಿಎಂಎಲ್‌ ಹೊಂದಿದೆ. ಇದು ಟಿಪಿಎಂಎಲ್‌ನ ಸ್ವಂತ ವಿವೇಚನೆಗೆ ಬಿಟ್ಟ ವಿಷಯವಾಗಿದ್ದು, ಇದರಲ್ಲಿ ಕಂಪನಿಯು ಯಾವುದೇ ಬಾಧ್ಯತೆ ಹೊಂದಿರುವುದಿಲ್ಲ.

5) ಉಲ್ಲೇಖಿಸಿರುವ ಬಹುಮಾನಗಳನ್ನು ನಗದು ರೂಪದಲ್ಲಿ ನೀಡಲು ಅವಕಾಶ ಇರುವುದಿಲ್ಲ. ಬಹುಮಾನಗಳನ್ನು ವರ್ಗಾಯಿಸಲು, ಮರುನಗದೀಕರಿಸಲು ಅವಕಾಶ ಇರುವುದಿಲ್ಲ. ಯಾವುದೇ ಬಹುಮಾನವನ್ನು ಅದರ ಮೊತ್ತಕ್ಕೆ ಸರಿಯಾಗಿ ಅಥವಾ ಅದಕ್ಕಿಂತಲೂ ದೊಡ್ಡಮೊತ್ತದ ಬಹುಮಾನಕ್ಕೆ ಬದಲಿಸುವ ಹಕ್ಕನ್ನು ಟಿಪಿಎಂಎಲ್ ಹೊಂದಿರುತ್ತದೆ.

6) ಬಹುಮಾನಗಳಿಗೆ ಲಗತ್ತಾಗುವ ತೆರಿಗೆಗಳು ಅಥವಾ ಇತರ ವೆಚ್ಚಗಳನ್ನು ವಿಜೇತರೇ ಭರಿಸಬೇಕು. ಟಿಪಿಎಂಎಲ್ ನಿಗದಿಪಡಿಸಿದ ಅವಧಿಯಲ್ಲಿ ತೆರಿಗೆ ಅಥವಾ ಶುಲ್ಕಗಳನ್ನು ಭರ್ತಿ ಮಾಡಲು ಸಾಧ್ಯವಾಗದಿದ್ದರೆ ಗಿಫ್ಟ್‌ ವೋಚರ್‌ಗಳು ಲ್ಯಾಪ್ಸ್ ಆಗಬಹುದು. ಎಂಥದ್ದೇ ಸಂದರ್ಭದಲ್ಲಿಯೂ ಗಿಫ್ಟ್‌ ವೋಚರ್‌ಗಳನ್ನು ವರ್ಗಾವಣೆ ಮಾಡಲು ಸಾಧ್ಯವಿಲ್ಲ.

7) ಸ್ಪರ್ಧೆಯ ವೇಳೆ, ಬಹುಮಾನದ ಬಳಕೆಯ ಸಂದರ್ಭ ಆಗಬಹುದಾದ ಯಾವುದೇ ನಷ್ಟ, ಹಕ್ಕು ಸಾಧನೆಯ ಹೊಣೆಯನ್ನು ಟಿಪಿಎಂಎಲ್ ಹೊತ್ತುಕೊಳ್ಳುವುದಿಲ್ಲ. 

8) ಕಾನೂನು ಅನುಮತಿಯ ಪರಿಮಿತಿಯಲ್ಲಿ ವಿಜೇತರ ಹೆಸರು, ಭಾವಚಿತ್ರ ಮತ್ತು ಆಸಕ್ತಿಯನ್ನು ಬಳಸಿಕೊಳ್ಳುವ ಹಕ್ಕುಗಳನ್ನು ಟಿಪಿಎಂಎಲ್ ಕಾಯ್ದಿರಿಸಿದೆ. ಇಂಥ ಮಾಹಿತಿಯನ್ನು ಪ್ರಚಾರ ಸಾಮಗ್ರಿಯಲ್ಲಿ, ಯಾವುದೇ ಮಾಧ್ಯಮಗಳಿಗೆ ನೀಡುವ ಜಾಹೀರಾತುಗಳಲ್ಲಿ, ಯಾವುದೇ ಉದ್ದೇಶಕ್ಕಾಗಿ ರೂಪಿಸಿದ ಟಿಪಿಎಂಎಲ್‌ನ ಯಾವುದೇ ಉತ್ಪನ್ನ ಅಥವಾ ಸೇವೆಗಳಲ್ಲಿ ಬಳಸಿಕೊಳ್ಳುವ ಹಕ್ಕನ್ನು ಕಾಯ್ದಿರಿಸಲಾಗಿದೆ. ವಿಜೇತರಿಗೆ ಯಾವುದೇ ಪೂರ್ವ ಸೂಚನೆ ನೀಡದೇ ಬಳಸಿಕೊಳ್ಳುವ ಹಕ್ಕನ್ನು ಟಿಪಿಎಂಎಲ್ ಹೊಂದಿರುತ್ತದೆ.

9) ಯಾವುದೇ ಜಾಹೀರಾತು, ಉತ್ತೇಜಕ ಬರಹಗಳು, ಪ್ರಚಾರ ಸಾಮಗ್ರಿಗಳು ಅಥವಾ ಇತರ ವಿಚಾರಗಳಲ್ಲಿ ಸಂದಿಗ್ಧಗಳು ತಲೆದೋರಿದರೆ ಇಲ್ಲಿ ಉಲ್ಲೇಖಿಸಿರುವ ನಿಯಮಗಳು ಮತ್ತು ನಿಬಂಧನೆಗಳು ಊರ್ಜಿತದಲ್ಲಿರುತ್ತವೆ.

10) ಮುನ್ನಡೆಯ ನಿರ್ಧಾರ ತೆಗೆದುಕೊಳ್ಳುವ ಸಂದರ್ಭದಲ್ಲಿ ಯಾರದ್ದಾದರೂ ಅರ್ಹತೆಯ ಬಗ್ಗೆ ಅನುಮಾನಗಳು ಬಂದರೆ ಅಂಥವರ ಅರ್ಹತೆಯನ್ನು ಸಾಬೀತುಪಡಿಸುವ ಪುರಾವೆಗಳನ್ನು ವಿನಂತಿಸುವ ಹಕ್ಕನ್ನೂ ಟಿಪಿಎಂಎಲ್‌ ಕಾಯ್ದಿರಿಸಿಕೊಂಡಿದೆ. 

11) ಅನ್ವಯಿಕ ಕಾನೂನುಗಳ ನಿಬಂಧನೆಗಳಿಗೆ ಒಳಪಟ್ಟು, ಈ ನಿಯಮ ಮತ್ತು ನಿಬಂಧನೆಗಳಿಂದ ಯಾವುದೇ ಸ್ಪರ್ಧಿಗೆ ಯಾವುದೇ ರೀತಿಯ ನಷ್ಟ, ತೆರಿಗೆ, ಬಾಧ್ಯತೆ ಅಥವಾ ತೊಂದರೆಯಾದರೆ, ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅಥವಾ ಬಹುಮಾನ ಪಡೆಯಲು ಸಮಸ್ಯೆಯಾದರೆ ಟಿಪಿಎಂಎಲ್ ಯಾವುದೇ ಬಾಧ್ಯತೆಯನ್ನು ಹೊರುವುದಿಲ್ಲ.

12) ಈ ಸ್ಪರ್ಧೆಗೆ ಪ್ರವೇಶ ಪಡೆಯಲು ಆಗುವ ಯಾವುದೇ ಸಮಸ್ಯೆಗಳ ಹೊಣೆಯನ್ನು ಟಿಪಿಎಂಎಲ್ ಹೊರುವುದಿಲ್ಲ. (1) ಪ್ರವೇಶ ಪತ್ರಗಳು ಕಳೆದುಹೋಗುವುದು, ತಡವಾಗುವುದು, ತಲುಪದೇ ಇರುವುದು ಅಥವಾ (2) ಯಾವುದೇ ತಾಂತ್ರಿಕ ಅಥವಾ ತಲುಪುವಿಕೆಯ ಸಸಮ್ಯೆಗಳು, ಕೆಟ್ಟುಹೋಗುವುದು ಅಥವಾ ಯಾವುದೇ ಕಾರಣದಿಂದ ಯಾವುದೇ ಸ್ಪರ್ಧಿಗೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಸಾಮರ್ಥ್ಯಕ್ಕೆ ಕುಂದುಂಟಾಗುವುದು ಅಥವಾ (3) ಸ್ಪರ್ಧೆಯನ್ನು ಹಾಳುಮಾಡುವ ಅಥವಾ ಕೆಡಿಸುವ ಯಾವುದೇ ಬೆಳವಣಿಗೆಗಳಿಗೆ ಟಿಪಿಎಂಎಲ್ ಜವಾಬ್ದಾರಿ ಹೊರುವುದಿಲ್ಲ.

13) ಊಹಿಸದಿದ್ದ ಪರಿಸ್ಥಿತಿ ಎದುರಾದರೆ ಈ ನಿಯಮಗಳು ಮತ್ತು ನಿಬಂಧನೆಗಳ ಜೊತೆಗೆ ಕಾಲಕಾಲಕ್ಕೆ ಟಿಪಿಎಂಎಲ್ ಹೆಚ್ಚುವರಿಯಾಗಿ ನಿರ್ದಿಷ್ಟ ನಿಯಮ ಮತ್ತು ನಿಬಂಧನೆಗಳನ್ನು ವಿಧಿಸಬಹುದು. ಈಗಾಗಲೇ ಪ್ರಸ್ತಾಪಿಸಿರುವ ನಿಯಮ ನಿಬಂಧನೆಗಳನ್ನು ಬದಲಿಸುವ ಸಂಪೂರ್ಣ ಹಕ್ಕನ್ನೂ ಟಿಪಿಎಂಎಲ್ ಕಾಯ್ದಿರಿಸಿಕೊಂಡಿದೆ ಮತ್ತು / ಅಥವಾ ಪೂರ್ವಸೂಚನೆ ಇಲ್ಲದೆಯೇ, ಕಾರಣ ನೀಡದೆಯೇ, ಯಾವುದೇ ಬಾಧ್ಯತೆ ಇಲ್ಲದೆಯೇ ಸ್ಪರ್ಧೆಗೆ ಸಂಬಂಧಿಸಿದ ನಿಯಮ ನಿಬಂಧನೆಗಳನ್ನು ಬದಲಿಸಬಹುದು. ಟಿಪಿಎಂಎಲ್ ಪ್ರತ್ಯೇಕವಾಗಿ ಪ್ರಕಟಪಡಿಸುವ ಇಂಥ ನಿಯಮ ಮತ್ತು ನಿಬಂಧನೆಗಳನ್ನು ಸ್ಪರ್ಧಿಗಳು ಗಮನಿಸಬೇಕೆಂದು ವಿನಂತಿಸುತ್ತೇವೆ. ನಿಯಮಗಳಲ್ಲಿ ಮಾಡುವ ಬದಲಾವಣೆಗಳನ್ನು ಪ್ರತಿಯೊಬ್ಬರಿಗೂ ವೈಯಕ್ತಿಕವಾಗಿ ತಿಳಿಸಬೇಕೆಂದು ಯಾರೊಬ್ಬರೂ ಷರತ್ತು ವಿಧಿಸುವಂತಿಲ್ಲ.

14) ನಿಯಂತ್ರಿಸಲು ಆಗದ ಸನ್ನಿವೇಶಗಳಲ್ಲಿ (i) ಟಿಪಿಎಂಎಲ್ ಸ್ಪರ್ಧೆಯನ್ನು ವಿಸ್ತರಿಸಬಹುದು (ii) ರದ್ದುಪಡಿಸಬಹುದು (iii) ಮಿತಗೊಳಿಸಬಹುದು (iv) ಬಹುಮಾನವನ್ನು ಬದಲಿಸಬಹುದು ಅಥವಾ ಬಹುಮಾನದ ಭಾಗವನ್ನು ಬದಲಿಸಬಹುದು.

15) ಟಿಪಿಎಂಎಲ್ ಸಂಸ್ಥೆಯ ನಿರ್ದೇಶಕರು, ಅಧಿಕಾರಿಗಳು, ಪಾಲುದಾರರು, ಸಿಬ್ಬಂದಿ, ಸಲಹೆಗಾರರು ಮತ್ತು ಏಜೆಂಟರೂ ಸೇರಿರಿದಂತೆ ಸಂಸ್ಥೆಯ ಆಡಳಿತ ಮತ್ತು ನಿರ್ವಹಣೆಯ ಜವಾಬ್ದಾರಿ ಹೊತ್ತ ಯಾವುದೇ ಅಧಿಕಾರಿಗೆ ಯಾವುದೇ ಸ್ಪರ್ಧಿಗೆ, ಸ್ಪರ್ಧೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಸಲಹೆ, ಸೇವೆ ಒದಗಿಸುವ ಬಾಧ್ಯತೆ ಇರುವುದಿಲ್ಲ.

16) ಉಲ್ಲೇಖಿಸಿರುವ ಯಾವುದೇ ನಿಯಮ ಮತ್ತು ನಿಬಂಧನೆಗಳನ್ನು ಉಲ್ಲಂಘಿಸುವ ಮೂಲಕ ಸ್ಪರ್ಧಿಯಿಂದ ಟಿಪಿಎಂಎಲ್ ಸಂಸ್ಥೆಗೆ ಯಾವುದೇ ಹಾನಿಯುಂಟಾದರೆ, ಹೆಚ್ಚುವರಿ ಖರ್ಚು ಬಂದರೆ ಅದನ್ನು ಸ್ಪರ್ಧಿಯೇ ತುಂಬಿಕೊಡಬೇಕು.

17) ಸ್ಪರ್ಧೆ ಪ್ರಚಾರಕ್ಕೆ ಸಂಬಂಧಿಸಿದ ಪ್ರಚಾರ ಮತ್ತು / ಅಥವಾ ನಿಯಮ ಮತ್ತು ನಿಬಂಧನೆಗಳಿಗೆ ಸಂಬಂಧಿಸಿದ ಯಾವುದೇ ವಿವಾದ, ಭಿನ್ನಮತ ಅಥವಾ / ಮತ್ತು ಇತರ ಯಾವುದೇ ವಿಚಾರಗಳನ್ನು ಆರ್ಬಿಟ್ರೇಶನ್ ಅಂಡ್ ಕನ್‌ಸಿಲೇಶನ್ ಕಾಯ್ದೆ 1996ರ ಅನ್ವಯ ಮಧ್ಯಸ್ಥಿಕೆ (ಸಂಧಾನದ) ಮೂಲಕ ಪರಿಹರಿಸಿಕೊಳ್ಳಬೇಕು. ಸಂಧಾನ ಮಾತುಕತೆಯು ಬೆಂಗಳೂರು ನಗರದಲ್ಲಿ ನಡೆಯಬೇಕು. ಸ್ಪರ್ಧೆಯ ಪ್ರಚಾರವು ಭಾರತೀಯ ಕಾನೂನುಗಳ ಪರಿಮಿತಿಯಲ್ಲಿ ಬೆಂಗಳೂರು ನಗರದ ನ್ಯಾಯಾಲಯಗಳ ವ್ಯಾಪ್ತಿಗೆ ಒಳಪಟ್ಟಿರುತ್ತದೆ. ಸಂಧಾನ ಪ್ರಕ್ರಿಯೆಗೆ ಭಾರತೀಯ ಆರ್ಬಿಟ್ರೇಶನ್ (ರೂಲ್ಸ್) ಕೌನ್ಸಿಲ್ ನಿಯಮಗಳು ಅನ್ವಯಿಸುತ್ತವೆ. ನಿಯಮಗಳ ಪ್ರಕಾರ ಏಕೈಕ ಸಂಧಾನಕಾರರು ಸಂಧಾನ ಪ್ರಕ್ರಿಯೆಯನ್ನು ನಿರ್ವಹಿಸುತ್ತಾರೆ.

18) ಭಾರತೀಯ ಕಾನೂನುಗಳ ಪ್ರಕಾರವೇ ಈ ಪ್ರಚಾರ ಕಾರ್ಯ ನಡೆಯುತ್ತದೆ. ಈ ಪ್ರಚಾರದಲ್ಲಿ ಪಾಲ್ಗೊಳ್ಳುವುದರಿಂದ ಯಾವುದೇ ಕಾನೂನಿನ ಉಲ್ಲಂಘನೆಯಾಗುವುದಿಲ್ಲ. ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದು ಕಾನೂನುಬದ್ಧ ಎಂದು ಮನಗಾಣಿಸಲು ಟಿಪಿಎಂಎಲ್ ಅಥವಾ ಅದರ ಪ್ರತಿನಿಧಿಗಳು ಅಥವಾ ಅದರ ಏಜೆಂಟರು ಯಾವುದೇ ವಿವರಣೆ ನೀಡಬೇಕಿಲ್ಲ.

19) ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಎಲ್ಲ ಸ್ಪರ್ಧಿಗಳೂ ಈ ನಿಯಮಗಳು ಮತ್ತು ನಿಬಂಧನೆಗಳನ್ನು ಒಪ್ಪಿಕೊಳ್ಳುತ್ತಾರೆ ಎಂದು ಭಾವಿಸಲಾಗುತ್ತದೆ.

20) ಕೆಳಗೆ ನೀಡಿರುವ ಕೋಷ್ಟಕದಲ್ಲಿ ಡಿಎಚ್-ಪಿವಿ ನ್ಯೂಸ್ ಕ್ವಿಜ್‌ನ ಬಹುಮಾನದ ವಿವರಗಳಿವೆ.

1) ಸ್ಪರ್ಧಿಯು ನೀಡಿದ ಯಾವುದೇ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ಅವರಿಗೆ ಯಾವುದೇ ಮುನ್ಸೂಚನೆ, ಹಣ ಅಥವಾ ಪರಿಹಾರ ನೀಡದೆ ಪ್ರಚಾರಕ್ಕೆ, ಮಾರ್ಕೆಟಿಂಗ್‌ಗೆ ಮತ್ತು ಉತ್ತೇಜನಾ ಕಾರ್ಯಗಳಿಗೆ ಬಳಸುವ ಹಕ್ಕನ್ನು ಟಿಪಿಎಂಎಲ್ ಹೊಂದಿದೆ. 

2) ಟಿಪಿಎಂಎಲ್‌ನ ನಿರ್ಧಾರವೇ ಅಂತಿಮ ಮತ್ತು ಒಪ್ಪಿಕೊಳ್ಳತಕ್ಕದ್ದು

ಪ್ರಶಸ್ತಿ ಪಡೆದುಕೊಳ್ಳಲು

1) ಗೆದ್ದವರು ದಿನಪತ್ರಿಕೆಯ ತುಣುಕುಗಳು, ಬಿಲ್‌ಗಳು ಅಥವಾ ದಿನಪತ್ರಿಕೆಯೊಂದಿಗೆ ಸೆಲ್ಫಿ ಅಪ್‌ಲೋಡುವುದು ಅಥವಾ ಟಿಪಿಎಂಎಲ್ ಸೂಚಿಸುವ ಯಾವುದೇ ಅಗತ್ಯಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕಾಗುತ್ತದೆ.

2) ವಿಜೇತರ ಹೆಸರನ್ನು ಟಿಪಿಎಂಎಲ್ ಸೂಕ್ತ ಮಾಧ್ಯಮಗಳ ಮೂಲಕ ಪ್ರಕಟಿಸುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು