ಶನಿವಾರ, ಸೆಪ್ಟೆಂಬರ್ 26, 2020
22 °C

ಪೊಲೀಸ್‌ ಠಾಣೆ ಮೇಲೆ ದಾಳಿ ಮಾಡಲು ಇಸ್ಲಾಂ ಹೇಳಿದೆಯಾ: ರೋಷನ್ ಬೇಗ್‌ ಪ್ರಶ್ನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಪೊಲೀಸ್‌ ಠಾಣೆ ಮೇಲೆ ದಾಳಿ ಮಾಡಿ, ಆಸ್ತಿ–ಪಾಸ್ತಿ ನಾಶ ಮಾಡಿ ಎಂದು ಇಸ್ಲಾಂ ಹೇಳಿದೆಯಾ? ನಿಮಗೆಲ್ಲಾ ಯಾವಾಗ ಬುದ್ಧಿ ಬರುತ್ತದೆ’ ಎಂದು ಮಾಜಿ ಸಚಿವ ಆರ್‌.ರೋಷನ್ ಬೇಗ್‌ ಪ್ರಶ್ನಿಸಿದ್ದಾರೆ.

ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ದೇವಸ್ಥಾನದ ರಕ್ಷಣೆಗೆ ನಿಂತ ಮುಸ್ಲಿಂ ಯುವಕರಿಗೆ ಸಲಾಂ ಹೇಳುತ್ತೇನೆ’ ಎಂದರು.

‘ಪೊಲೀಸರು ಹಲವು ತಿಂಗಳಿಂದ ಕೊರೊನಾ ವಿರುದ್ಧ ಹೋರಾಡುತ್ತಾ ಹೈರಾಣಾಗಿದ್ದಾರೆ. ಕಿಡಿಗೇಡಿಗಳು ಅವರ ಮೇಲೆ ಹೋಗಿ ದಾಳಿ ಮಾಡಿದ್ದಾರೆ. ಈ ಘಟನೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ಒಂದು ವೇಳೆ ಇನ್ಸ್‌ಪೆಕ್ಟರ್‌ ಕೇಸು ದಾಖಲು ಮಾಡಿಲ್ಲ ಎಂದಾದರೆ, ಮೇಲಿನ ಅಧಿಕಾರಿಗಳ ಬಳಿಗೆ ಹೋಗಬೇಕಿತ್ತು. ಅದನ್ನು ಬಿಟ್ಟು ಠಾಣೆ ಮೇಲೆ ದಾಳಿ ಮಾಡಿದರಲ್ಲ ನಿಮ್ಮ ಬುದ್ಧಿಗೆ ಏನಾಗಿದೆ’ ಎಂದು ರೋಷನ್‌ ಬೇಗ್ ಪ್ರಶ್ನಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು