ಶುಕ್ರವಾರ, ಡಿಸೆಂಬರ್ 3, 2021
20 °C

ರಾಹುಲ್‌ ಡ್ರಗ್‌ ವ್ಯಸನಿ, ಡ್ರಗ್‌ ಪೆಡ್ಲರ್‌ ಎಂದು ಮಾಧ್ಯಮಗಳಲ್ಲಿ ಬಂದಿದೆ: ನಳಿನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ‘ರಾಹುಲ್‌ ಗಾಂಧಿ ಡ್ರಗ್‌ ವ್ಯಸನಿ ಮತ್ತು ಡ್ರಗ್‌ ಪೆಡ್ಲರ್‌ ಎಂದು ಕೆಲವು ಮಾಧ್ಯಗಳು ವರದಿ ಮಾಡಿವೆ. ಇಂಥವರು ಹೇಗೆ ರಾಷ್ಟ್ರ ಮುನ್ನಡೆಸಲು ಸಾಧ್ಯ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಮಂಗಳವಾರ ಪ್ರಶ್ನೆ ಮಾಡಿದ್ದಾರೆ. 

ನಗರದ ಶ್ರೀನಿವಾಸ ಗಾರ್ಡನ್‌ನಲ್ಲಿ ಮಂಗಳವಾರ ನಡೆದ ವಿಧಾನ ಪರಿಷತ್‌ ಚುನಾವಣೆಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. 

‘ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ರಾಜ್ಯ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಡಿ.ಕೆ. ಶಿವಕುಮಾರ ಇಬ್ಬರೂ ಜಾಮೀನಿನ ಮೇಲೆ ಹೊರಗೆ ಇದ್ದಾರೆ. ಅವರಲ್ಲಿರುವ ಒಂದು ಗುಂಪು ರಾಹುಲ್‌ ಗಾಂಧಿ ರಾಷ್ಟ್ರೀಯ ಅಧ್ಯಕ್ಷ ಆಗಬೇಕು ಎಂದರೆ, ಮತ್ತೊಂದು ಗುಂಪು ಸೋನಿಯಾ ಗಾಂಧಿ ಆಗಬೇಕು ಎನ್ನುತ್ತಿದೆ. ಸ್ವಾತಂತ್ರ್ಯಪೂರ್ವದ ಪಕ್ಷ ಇದೀಗ ವೈಚಾರಿಕವಾಗಿ, ಭೌತಿಕವಾಗಿ ದಿವಾಳಿಯಾಗಿದೆ’ ಎಂದು ನಳೀನ್‌ ಗೇಲಿ ಮಾಡಿದರು. 

‘ರಾಹುಲ್‌ ಗಾಂಧಿ ಡ್ರಗ್‌ ವ್ಯಸನಿ ಮತ್ತು ಡ್ರಗ್‌ ಪೆಡ್ಲರ್‌ ಎಂದು ಕೆಲವು ಮಾಧ್ಯಗಳು ವರದಿ ಮಾಡಿವೆ. ಇಂಥವರು ಹೇಗೆ ರಾಷ್ಟ್ರ ಮುನ್ನಡೆಸಲು ಸಾಧ್ಯ’ ಎಂದು ಅವರು ಪ್ರಶ್ನಿಸಿದರು.

‘ಹಳದಿ ರೋಗ ಬಂದವನಿಗೆ ಎಲ್ಲವೂ ಹಳದಿಯೇ’: ‘ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕೆಪಿಎಸ್‌ಸಿಯಿಂದ ಗುಮಾಸ್ತನವರೆಗೂ ಕುಟುಂಬದವರನ್ನೇ ನೇಮಿಸಿದ್ದರು. ಜೀವನ ಪೂರ್ತಿ ಅಪ್ಪ, ಮಕ್ಕಳು ಕುಟುಂಬ ರಾಜಕಾರಣವನ್ನೇ ಮಾಡುತ್ತ ಬಂದಿದ್ದಾರೆ. ಹಳದಿ ರೋಗ ಬಂದವನಿಗೆ ಎಲ್ಲವೂ ಹಳದಿಯಾಗಿಯೇ ಕಾಣುತ್ತದೆ. ಅದಕ್ಕಾಗಿಯೇ ಅವರು ಆರ್‌ಎಸ್‌ಎಸ್‌ಗೆ ಬಯ್ಯುತ್ತಿರುವುದು. ಆರ್‌ಎಸ್‌ಎಸ್‌ ಶಾಖೆಗೆ ಬರಲು ಈಗಾಗಲೇ ಅವರಿಗೆ ಕರೆ ನೀಡಿದ್ದೇನೆ. ಅಲ್ಲಿ ಏನೇನು ಕಲಿಸುತ್ತಾರೆ ಎಂದು ಅವರೇ ತಿಳಿಯಲಿ’ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು..

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು