ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಸುಧಾರಣಾ ಕಾಯ್ದೆ ವಿರುದ್ಧ ಪತ್ರ ಚಳವಳಿ

Last Updated 6 ಆಗಸ್ಟ್ 2020, 18:50 IST
ಅಕ್ಷರ ಗಾತ್ರ

ಬೆಂಗಳೂರು: ‘ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸಿ‘ನಮ್ಮೂರ ಭೂಮಿ ನಮಗಿರಲಿ; ಅನ್ಯರಿಗಲ್ಲ’ ಎಂಬಆಂದೋಲನದ ಭಾಗವಾಗಿಕ್ವಿಟ್ ಇಂಡಿಯಾ ಚಳವಳಿಯ ದಿನವಾದ ಆ.8ರಂದು ಎಲ್ಲಾ ಜಿಲ್ಲೆಗಳಲ್ಲಿ ಫಲಕ ಮತ್ತು ಪತ್ರ ಚಳವಳಿ ಆರಂಭಿಸಲಾಗುವುದು’ ಎಂದು ರೈತ ಮುಖಂಡಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.

‘ಗ್ರಾಮಸ್ಥರು, ಸ್ಥಳೀಯ ಸಂಘ–ಸಂಸ್ಥೆಗಳು, ಗ್ರಾಮ ಪಂಚಾಯತಿಗಳಿಂದ ಸಹಿ ಸಂಗ್ರಹಿಸಿ ಪ್ರತಿ ಗ್ರಾಮದಿಂದಲೂ ಮುಖ್ಯಮಂತ್ರಿಗೆ ಪತ್ರ ಬರೆಯಲಾಗುವುದು. ಇದೇ 15ರಂದು ಬೆಂಗಳೂರಿನಲ್ಲಿ ಧರಣಿ ನಡೆಸಲಾಗುವುದು’ ಎಂದು ಹೇಳಿದ್ದಾರೆ.

‘ಸುಗ್ರೀವಾಜ್ಞೆಯ ಮೂಲಕ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿಗಳನ್ನು ತಂದು ರೈತರ ಹೆಮ್ಮೆಯ ಕಾಯ್ದೆಯ ಆತ್ಮವನ್ನೇ ಸರ್ಕಾರ ಕಿತ್ತೊಗೆದಿದೆ. ಈಗಾಗಲೇ ಸಾಕಷ್ಟು ಹೊಡೆತಗಳನ್ನುಅನುಭವಿಸುತ್ತಿರುವ ಕೃಷಿ ಕ್ಷೇತ್ರ ನುಚ್ಚುನೂರು ಆಗುವುದರಲ್ಲಿ ಸಂಶಯವೇ ಇಲ್ಲ’ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಗ್ರಾಮಗಳಿಗೆ ವಲಸೆನಡೆದಿರುವ ಸಂದರ್ಭದಲ್ಲಿಸರ್ಕಾರ ಗ್ರಾಮೀಣ ಸಮುದಾಯಕ್ಕೆ ಒತ್ತಾಸೆಯಾಗುವ ರೀತಿಯ ಯೋಜನೆಗಳನ್ನುರೂಪಿಸಬೇಕಾದುದ್ದು ಅಗತ್ಯವಾಗಿತ್ತು. ಆದರೆ, ಸರ್ಕಾರ ಸಂಪೂರ್ಣತದ್ವಿರುದ್ಧವಾಗಿ ಹೋಗುತ್ತಿದೆ’ ಎಂದಿದ್ದಾರೆ.

‘ಕಾಯ್ದೆ ವಿರುದ್ಧಗ್ರಾಮಗಳಲ್ಲಿ ಚರ್ಚೆಗಳು, ಫಲಕ ಹಾಕುವುದು,ಗೋಡೆ ಬರಹ, ಸ್ಟಿಕ್ಕರ್ ಹಚ್ಚುವುದು, ಹಾಡು, ಪೋಸ್ಟರ್, ವಿಡಿಯೊ ತುಣುಕುಗಳ ಮೂಲಕ ಜನರಲ್ಲಿ ಅರಿವು ಮತ್ತು ಒಮ್ಮತ ಮೂಡಿಸುವಪ್ರಯತ್ನ ಇದಾಗಿದೆ. ಮನೆ ಮನೆಗಳಿಂದ ಪೋಸ್ಟ್ ಕಾರ್ಡ್ ಚಳವಳಿಪ್ರಾರಂಭವಾಗಿದೆ. ಸಾಮಾಜಿಕ ಜಾಲತಾಣದ ಮೂಲಕ ಪ್ರಚಾರ ವ್ಯಾಪಕಗೊಳಿಸಲಾಗುತ್ತಿದೆ’ ಎಂದು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT