ಬೆಂಗಳೂರು: ‘ಆ ಮಹಾನಾಯಕ ಯಾರೆಂದು ಯುವತಿಯ ಪೋಷಕರು ಹೇಳಿದ್ದಾರೆ. ಆ ಮಹಾ ನಾಯಕ ರಾಜಕೀಯದಲ್ಲಿ ಇರಲು ನಾಲಾಯಕ್. ಇಂಥ ಷಡ್ಯಂತ್ರ ಮಾಡಬಾರದು’ ಎಂದು ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಹೇಳಿದರು.

ಸಿ.ಡಿಯಲ್ಲಿ ಕಾಣಿಸಿಕೊಂಡ ಯುವತಿಯ ಪೋಷಕರು ಆಡುಗೋಡಿಯಲ್ಲಿರುವ ಎಸ್‌ಐಟಿ ಕಚೇರಿಯ ಎದುರು ಸುದ್ದಿಗಾರರ ಜೊತೆ ಮಾತನಾಡಿ, ‘ನಮ್ಮ ಮಗಳನ್ನು ಡಿ.ಕೆ. ಶಿವಕುಮಾರ್ ಹಣ ಕೊಟ್ಟು ಗೋವಾಕ್ಕೆ ಕಳುಹಿಸಿದ್ದರು’ ಎಂದು ಆರೋಪಿಸಿದ ಕೆಲವೇ ಕ್ಷಣಗಳಲ್ಲಿ ಸದಾಶಿವನಗರದಲ್ಲಿರುವ ತಮ್ಮ ಮನೆ ಮುಂಭಾಗದಲ್ಲಿ ರಮೇಶ ಜಾರಕಿಹೊಳಿ ಮಾತನಾಡಿದರು.

‘ನನ್ನ ಬಳಿ 11 ಸಾಕ್ಷ್ಯಗಳಿವೆ. ಆ ಸಾಕ್ಷ್ಯಾಧಾರಗಳನ್ನು ಎಸ್‌ಐಟಿಗೆ ಕೊಡುತ್ತೇನೆ’ ಎಂದರು.

‘ಕಿಂಗ್‌ಪಿನ್ ನರೇಶ್ ಗೌಡನಿಗೆ ಸಂಬಂಧ ಇದೆ ಎಂದು ಆ ಮಹಾನಾಯಕ ಒಪ್ಪಿಕೊಂಡಿದ್ದಾನೆ. ಆ ಯುವತಿ ನನ್ನ ಮನೆಯ ಬಳಿ ಬಂದಿದ್ದಳು ಎಂದೂ ಒಪ್ಪಿಕೊಂಡಿದ್ದಾನೆ. ಆ ಹೇಳಿದ್ದಾನೆ.. ಆ ಮಹಾನಾಯಕನನ್ನು ಪೊಲೀಸರು ಒದ್ದು ಒಳಗೆ ಹಾಕಬೇಕು’ ಎಂದರು.

ಇದನ್ನೂ ಓದಿ:ಸಿಡಿ ಪ್ರಕರಣ: ಎಲ್ಲ ಸಾಕ್ಷ್ಯಗಳನ್ನು ಅಧಿಕಾರಿಗಳಿಗೆ ನೀಡಿದ್ದೇವೆ: ಯುವತಿ ಪೋಷಕರು

‘ನಾನು ಗಂಡಸು, ನಾನು ಗಂಡಸು. ಅವನು ಗಾಂ...’ ಎಂದೂ ಅವಾಚ್ಯವಾಗಿ ನಿಂದಿಸಿದರು. ‘ಕನಕಪುರದಲ್ಲಿ ಡಿ.ಕೆ. ಶಿವಕುಮಾರ್ ಸೋಲಬೇಕು. ಅದಕ್ಕೆ ಏನೆಲ್ಲ ಬೇಕು ಅದೆಲ್ಲವನ್ನೂ ಮಾಡಿದ್ದೇನೆ’ ಎಂದರು

’ನಾನು ತಪ್ಪು ಮಾಡಿದ್ದರೆ ನನ್ನನ್ನು ನೇಣಿಗೆ ಹಾಕಲಿ. ನಾನು ಡಿ.ಕೆ. ಶಿವಕುಮಾರ್ ವಿರುದ್ಧ ದೌರ್ಜನ್ಯ ಪ್ರಕರಣ ದಾಖಲಿಸುತ್ತೇನೆ. ಆ ಯುವತಿಯ ಪೋಷಕರಿಗೆ ನಾನು ಧನ್ಯವಾದ ಹೇಳುತ್ತೇನೆ’

‘ಅವನ (ಡಿ.ಕೆ. ಶಿವಕುಮಾರ್ ವಿರುದ್ಧ ನಾನು ಹೋರಾಡುತ್ತೇನೆ. ಕನಕಪುರದಲ್ಲಿ ಅವನನ್ನು ಸೋಲಿಸುತ್ತೇನೆ. ಅದಕ್ಕೆ ಎಲ್ಲ ತಯಾರಿ ಮಾಡಿಕೊಂಡಿದ್ದೇನೆ’ ಎಂದೂ ಹೇಳಿದರು.

ಆ ಯುವತಿಗೆ ಏನೇ ಆದರೂ ಅವರೇ (ಡಿ.ಕೆ. ಶಿವಕುಮಾರ್) ಕಾರಣ ಆಗುತ್ತಾರೆ’ ಎಂದೂ ಹೇಳಿದರು

ಇದನ್ನೂ ಓದಿ:
ಸಿ.ಡಿ ಪ್ರಕರಣ: ಸದನದಲ್ಲಿ ಬೊಬ್ಬೆ ಹಾಕಿದ ಶೂರರು ಏಕೆ ಮೌನವಾಗಿದ್ದಾರೆ? -ಬಿಜೆಪಿ
ಸಿಡಿ ಪ್ರಕರಣದ ಆರೋಪಿ ಬಂಧನಕ್ಕೆ ಕಾಂಗ್ರೆಸ್ ಒತ್ತಾಯ
ಸದನದಲ್ಲಿ ಬೊಬ್ಬೆ ಹಾಕಿದ ಶೂರರು ಇಂದು ಮೌನವಾಗಿದ್ದೇಕೆ? ಬಿಜೆಪಿ ತಿವಿತ
ಕೊರೊನಾ ಪರಿಹಾರದ ವಿಚಾರವಾಗಿ ಸರ್ಕಾರ ತಕ್ಷಣ ಶ್ವೇತಪತ್ರ ಹೊರಡಿಸಲಿ: ಸಿದ್ದರಾಮಯ್ಯ
ಸಿ.ಡಿ.ಪ್ರಕರಣ: ಯುವತಿ ಪೋಷಕರು ಎಸ್‌ಐಟಿ ಅಧಿಕಾರಿಗಳ ಮುಂದೆ ಹಾಜರು
ಸಿಡಿ ಪ್ರಕರಣವನ್ನು ಟಿವಿ ಧಾರಾವಾಹಿಗೆ ಹೋಲಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ
ರಮೇಶ ಜಾರಕಿಹೊಳಿ ಹೆಸರು ಬರೆದಿಟ್ಟು ಸಾಯುವಷ್ಟು ಕಿರುಕುಳ: ಯುವತಿ ವಿಡಿಯೊ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.