ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಡಿ ಪ್ರಕರಣ: ಸದನದಲ್ಲಿ ಬೊಬ್ಬೆ ಹಾಕಿದ ಶೂರರು ಏಕೆ ಮೌನವಾಗಿದ್ದಾರೆ? -ಬಿಜೆಪಿ

Last Updated 27 ಮಾರ್ಚ್ 2021, 10:50 IST
ಅಕ್ಷರ ಗಾತ್ರ

ಬೆಂಗಳೂರು:ಸಿ.ಡಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಸರಣಿ ಟ್ವೀಟ್‌ಗಳನ್ನು ಮಾಡಿರುವ ಬಿಜೆಪಿ ರಾಜ್ಯ ಘಟಕವು,ಕಾಂಗ್ರೆಸ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್‌ ಅವರ ವಿರುದ್ಧ ಕಿಡಿ ಕಾರಿದೆ.ಜೊತೆಗೆ#DKShiMustResign ಹ್ಯಾಷ್‌ಟ್ಯಾಗ್‌ನೊಂದಿಗೆ ಡಿಕೆ ಶಿವಕುಮಾರ್‌ ರಾಜೀನಾಮೆಗೆ ಒತ್ತಾಯಿಸಿದೆ.

ಪ್ರಕರಣದ ಆರೋಪಿಗಳೊಂದಿಗೆ ಸಂಬಂಧವಿರುವುದನ್ನು ʼಮಹಾನಾಯಕʼ ಒಪ್ಪಿಕೊಂಡಿದ್ದಾರೆ. ಹೀಗಾಗಿ ಮಾಸ್ಟರ್ ಮೈಂಡ್‌ಗಳೊಂದಿಗೆ ಯಾವ ರೀತಿಯ ಸಂಬಂಧವಿತ್ತೆಂಬುದನ್ನು ರಾಜ್ಯದ ಜನತೆಯ‌ ಮುಂದೆ ಖಳನಾಯಕ ಬಹಿರಂಗಪಡಿಸಬೇಕು. ಪ್ರಕರಣಕ್ಕೆ ಸಂಬಂಧಿಸಿದಂತೆಸದನದಲ್ಲಿ ಬೊಬ್ಬೆ ಹಾಕಿದ ಶೂರರೆಲ್ಲಾ ಏಕೆ ಇಂದು ಮೌನವಾಗಿದ್ದಾರೆ? ಎಂದು ಡಿಕೆ ಶಿವಕುಮಾರ್‌ ಅವರನ್ನುದ್ದೇಶಿಸಿ ಪ್ರಶ್ನಿಸಿದೆ.

ಷಡ್ಯಂತ್ರದ ಹಿಂದೆ 'ಮಹಾನಾಯಕ'ನ ಹೆಸರು ಪ್ರಸ್ತಾಪವಾಗಿದೆ. ಇತರ ಆರೋಪಿಗಳಂತೆ ಮಹಾನಾಯಕ ಕೂಡಾ ಆರೋಪಿಯಲ್ಲವೇ? ರಾಜಕಾರಣದಲ್ಲಿ ಅತಿಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿರುವ ಮಹಾನಾಯಕ ಏಕೆ ಇನ್ನೂ ರಾಜೀನಾಮೆ ಸಲ್ಲಿಸಿಲ್ಲ? ಕಾಂಗ್ರೆಸ್‌ ಪಕ್ಷಕ್ಕೆಬದ್ಧತೆ ಇದ್ದರೆ ಮೊದಲು ಮಹಾನಾಯಕನ ರಾಜೀನಾಮೆ ಪಡೆಯಲಿ ಎಂದು ಒತ್ತಾಯಿಸಿದೆ.

ಆರಂಭದಲ್ಲಿ ಈ ಪ್ರಕರಣದಲ್ಲಿ ನನ್ನನ್ನು ಸಿಲುಕಿಸುವ ಪ್ರಯತ್ನ ನಡೆಯುತ್ತಿದೆ ಎಂದು ಹೆಗಲು ಮುಟ್ಟಿಕೊಂಡು ಹೇಳಿಕೊಂಡಿದ್ದಿರಿ. ಇದೀಗ ಸಂತ್ರಸ್ಥೆ ನನ್ನನ್ನು ಭೇಟಿ ಮಾಡಲು ಪ್ರಯತ್ನಿಸಿದ್ದು ನಿಜ, ನರೇಶ್‌ ಮನಗೆ ಹೋಗಿದ್ದೇನೆ ಎನ್ನುತ್ತಿದ್ದೀರಿ. ಅಂದರೆ, ಪ್ರಕರಣದ ಎಲ್ಲಾ ಆಗುಹೋಗುಗಳು ನಿಮ್ಮ ನಿಯಂತ್ರಣದಲ್ಲೇ ನಡೆಯುತ್ತಿತ್ತು ಎಂಬುದು ಸ್ಪಷ್ಟ ಅಲ್ಲವೇ? ಎಂದು ಪ್ರಶ್ನಿಸಿದೆ.

ಮಾಜಿ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನೂ ತರಾಟೆಗೆ ತೆಗೆದುಕೊಂಡಿರುವ ಬಿಜೆಪಿ,ಕಾಗೆ ಹಿಕ್ಕೆ ಹಾಕಿದ್ದಕ್ಕೂ ಮೂಗು ತೂರಿಸುವ ಸೆಕ್ಷನ್ ಸಿದ್ದರಾಮಯ್ಯನವರೇ, ಸಿಡಿ ಹಗರಣಷಡ್ಯಂತ್ರದಲ್ಲಿ ಡಿಕೆ ಶಿವಕುಮಾರ್‌ ಅವರ ಪಾತ್ರದ ಬಗ್ಗೆ ಏಕೆ ಇನ್ನೂ ಮೌನವಾಗಿದ್ದೀರಿ?ಯಾವ ಸೆಕ್ಷನ್ ಪ್ರಕಾರ ಇದು ಅಪರಾಧವಾಗುತ್ತದೆ ಎಂದು ಜನರ ಮುಂದೆ ತೆರೆದಿಡಿ ಎಂದು ಕುಟುಕಿದೆ.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT