ಸೋಮವಾರ, ಜೂನ್ 21, 2021
27 °C
ಸಿಡಿ ಪ್ರಕರಣ

ಡಿಕೆಶಿಗೆ ಸಿಕ್ಕಿ ಬೀಳುವ ಮುನ್ಸೂಚನೆ ಮೊದಲೇ ಗೊತ್ತಾಗಿದ್ದು ಹೇಗೆ?: ಬಿಜೆಪಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಜೆಪಿ ಶಾಸಕ ರಮೇಶ ಜಾರಕಿಹೊಳಿಗೆ ಸಂಬಂಧಿಸಿದ್ದೆನ್ನಲಾದ ಸಿ.ಡಿ ಪ್ರಕರಣ ದಿನಕ್ಕೊಂದು ಆಯಾಮ ಪಡೆದುಕೊಳ್ಳುತ್ತಿದೆ. ಇದರ ನಡುವೆ ಕಾಂಗ್ರೆಸ್‌–ಬಿಜೆಪಿ ಟ್ವೀಟ್‌ ಸಮರವೂ ಜೋರಾಗಿದೆ.

ಈ ಕುರಿತು ಟ್ವೀಟ್‌ ಮಾಡಿರುವ ಬಿಜೆಪಿ, ‘ಶಿವಮೊಗ್ಗದಲ್ಲಿ ಹೆಗಲು ಮುಟ್ಟಿನೋಡಿಕೊಂಡದ್ದಕ್ಕೂ, ಈಗ ನಡೆಯುತ್ತಿರುವ ಘಟನೆಗಳಿಗೂ ಏನೋ ಸಂಬಂಧವಿದೆ. ನನ್ನನ್ನು ಸಿಲುಕಿಸುವ ಷಡ್ಯಂತ್ರ ನಡೆಯುತ್ತಿದೆ’ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದರು. ಸಿಕ್ಕಿ ಬೀಳುವ ಮುನ್ಸೂಚನೆ ಮೊದಲೇ ಗೊತ್ತಾಗಿದ್ದು ಹೇಗೆ? ಪ್ರಕರಣದಲ್ಲಿ ನಿಮ್ಮ ಪಾಲೂ ಇದೆ ಎಂಬುದು ಸಾಬೀತು ಆದಂತಲ್ಲವೇ?’ ಎಂದು ಪ್ರಶ್ನಿಸಿದೆ.

ಇದನ್ನೂ ಓದಿ... ಹೇಳಿಕೆ‌ ದಾಖಲಿಸಲು ಅನುಮತಿ: ಸದ್ಯದಲ್ಲೇ‌ ನ್ಯಾಯಾಲಯಕ್ಕೆ ಯುವತಿ‌ ಹಾಜರು -ವಕೀಲ

‘ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮೇಲೆ ಸಂತ್ರಸ್ತೆಯ ಪೋಷಕರು ನೇರವಾದ ಆಪಾದನೆ ಮಾಡಿದ್ದಾರೆ. ಆದರೆ, ಡಿಕೆಶಿಯವರು ನನಗೂ ಇದಕ್ಕೂ ಸಂಬಂಧವಿಲ್ಲ. ನಾನು ಈಗ ಮಾತನಾಡುವುದಿಲ್ಲ ಎನ್ನುತ್ತಿದ್ದಾರೆ. ಇದೇ ಮಾತುಗಳು ಅಂದು ಸದನದಲ್ಲಿ ಸಿಡಿ ವಿಚಾರ ಪ್ರಸ್ತಾಪ ಮಾಡಿ ಅಮೂಲ್ಯ ಸಮಯವನ್ನು ಹಾಳು ಮಾಡುವಾಗ ನೆನಪಿರಲಿಲ್ಲವೇ?’ ಎಂದು ಬಿಜೆಪಿ ಮತ್ತೊಂದು ಟ್ವೀಟ್‌ ಮಾಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು