ಮಂಗಳವಾರ, ಮಾರ್ಚ್ 21, 2023
21 °C

ರೇಣುಕಾಚಾರ್ಯ ಅವರ ತಮ್ಮನ ಮಗನ ಸಾವಿನ ಪ್ರಕರಣ ಎಲ್ಲ ಆಯಾಮಗಳಲ್ಲಿ ತನಿಖೆ: ಆರಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಶಾಸಕ ಎಂ.ಪಿ. ರೇಣುಕಾಚಾರ್ಯ ಅವರ ತಮ್ಮನ ಮಗನ ಸಾವಿನ ಪ್ರಕರಣವನ್ನು ಎಲ್ಲ ಆಯಾಮಗಳಲ್ಲಿ ತನಿಖೆ ಮಾಡಲಾಗುವುದು’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, ‘ರೇಣುಕಾಚಾರ್ಯ ತಮ್ಮನ ಮಗನ ಕಾರು ನಾಲೆಯಲ್ಲಿ ಸಿಕ್ಕಿದೆ. ಆ ಕಾರಿನಲ್ಲಿ ಅವರ ಶವ ಪತ್ತೆಯಾಗಿದೆ. ಅಲ್ಲಿಂದ ಇನ್ನೂ ವರದಿ ಬರಬೇಕಿದೆ. ಇಲಾಖೆಗೆ ಈ‌ ಬಗ್ಗೆ ಸದ್ಯ ಯಾವುದೇ ಅನುಮಾನ ಇಲ್ಲ. ತನಿಖೆಯಿಂದ ಸತ್ಯ ಹೊರ‌ ಬರಬೇಕಾಗಿದೆ. ಏನಾಗಿದೆ, ಹೇಗೆ ಆಗಿದೆ ಎಂಬುದು ಕೆಲವೇ ಹೊತ್ತಿನಲ್ಲಿ ಗೊತ್ತಾಗಲಿದೆ’ ಎಂದರು.

‘ಅ. 31ರಂದು ರಾತ್ರಿ ನಾಪತ್ತೆಯಾಗಿದ್ದರು. ಎಲ್ಲ ಠಾಣೆಗಳಿಗೂ ಎಚ್ಚರಿಕೆ ನೀ‌ಡಲಾಗಿತ್ತು. ಸಿಸಿಟಿವಿ ಕ್ಯಾಮೆರಾಗಳನ್ನೂ ಪರಿಶೀಲಿಸಲಾಗುತ್ತಿದೆ. ಈ ಪ್ರಕರಣವನ್ನು ವಿಶೇಷವಾಗಿ ಪರಿಗಣಿಸುತ್ತೇವೆ’ ಎಂ‌ದರು.

ವಯೋಮಿತಿ ವಿನಾಯಿತಿ: ‘2022-23ನೇ ಸಾಲಿನಲ್ಲಿ ಐದು ಸಾವಿರ ಪೊಲೀಸ್‌ ಕಾನ್‌ಸ್ಟೆಬಲ್‌ ನೇಮಕಾತಿಗೆ ಅರ್ಜಿ ಕರೆಯಲಾಗಿದೆ. ಹುದ್ದೆ ಆಕಾಂಕ್ಷಿಗಳಿಗೆ ವಯೋಮಿತಿಯಲ್ಲಿ ಎರಡು ವರ್ಷಗಳ‌ ವಿನಾಯಿತಿ ನೀಡಬೇಕೆಂಬ ಒತ್ತಡ ಇತ್ತು. ಶಾಸಕರು, ಮಂತ್ರಿಗಳಿಂದ ನಿರಂತರ ಒತ್ತಡ ಇತ್ತು. ಹೀಗಾಗಿ, ಎರಡು ವರ್ಷಗಳ ವಯೋಮಿತಿ ವಿನಾಯಿತಿ ನೀಡಿ ಆದೇಶ ಹೊರಡಿಸಲಾಗಿದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು