ಭಾನುವಾರ, ಏಪ್ರಿಲ್ 11, 2021
32 °C

ನಿವೃತ್ತ ಡಿಜಿ– ಐಜಿಪಿ ಇ–ಮೇಲ್ ಹ್ಯಾಕ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ (ಡಿಜಿ– ಐಜಿಪಿ) ಸೇವೆ ಸಲ್ಲಿಸಿ ನಿವೃತ್ತರಾದ ಶಂಕರ್ ಬಿದರಿ ಅವರ ಇ–ಮೇಲ್ ಹ್ಯಾಕ್ ಮಾಡಲಾಗಿದ್ದು,  ಈ ಸಂಬಂಧ ಆಗ್ನೇಯ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಹ್ಯಾಕ್ ಬಗ್ಗೆ ಶಂಕರ್ ಬಿದರಿ ಅವರೇ ದೂರು ನೀಡಿದ್ದಾರೆ. ಅಪರಿಚಿತರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಮೂಲಗಳು ಹೇಳಿವೆ.

’ಇ–ಮೇಲ್ ಹ್ಯಾಕ್ ಮಾಡಿರುವ ವಂಚಕರು, ನನ್ನ ಸ್ನೇಹಿತರಿಗೆ ಸಂದೇಶ ಕಳುಹಿಸಿದ್ದಾರೆ. ತುರ್ತಾಗಿ ಹಣ ನೀಡುವಂತೆ ಸ್ನೇಹಿತರನ್ನು ಕೋರಿ ಐಎಫ್‌ಎಸ್‌ಸಿ  ಹಾಗೂ ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗಳ ಖಾತೆ ಸಂಖ್ಯೆಗಳನ್ನು ನೀಡಿದ್ದಾರೆ’ ಎಂದು ಶಂಕರ್ ಬಿದರಿ ದೂರಿನಲ್ಲಿ ಹೇಳಿದ್ದಾರೆ.

‘ಸಂದೇಶ ನಂಬಿದ್ದ ಸ್ನೇಹಿತರೊಬ್ಬರು, ಆರೋಪಿಗಳು ನೀಡಿದ್ದ ಖಾತೆಗೆ ₹ 25 ಸಾವಿರ ಜಮೆ ಮಾಡಿ ವಂಚನೆಗೀಡಾಗಿದ್ದಾರೆ. ಇ–ಮೇಲ್ ಹ್ಯಾಕ್ ಮಾಡಿರುವ ಆರೋಪಿಗಳನ್ನು ಪತ್ತೆ ಮಾಡಿ, ಕಾನುನು ಕ್ರಮ ಕೈಗೊಳ್ಳಿ’ ಎಂದೂ ಅವರು ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು