ಬೆಂಗಳೂರು: ನಂದಿನಿ ಪ್ರೋಬಯೊಟಿಕ್ ಮೊಸರಿನ ಪ್ಯಾಕೆಟ್ ಮೇಲೆ ‘ದಹಿ’ ಎಂದು ಮುದ್ರಿಸಿದ್ದರ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಮೊಸರಿನ ಪ್ಯಾಕೆಟ್ ಮೇಲೆ ದಹಿ ಎಂಬ ಹಿಂದಿ ಪದ ಕಡ್ಡಾಯವಾಗಿ ಬಳಸುವಂತೆ ಹೊರಡಿಸಿರುವ ಾದೆಶಪತ್ರವನ್ನೂ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಹಂಚಿಕೊಂಡಿದ್ದಾರೆ.
ಇಂದು ಕೆಎಂಎಫ್ ಮುಖ್ಯಕಚೇರಿಗೆ ಭೇಟಿ ಕೊಟ್ಟಾಗ ತಿಳಿದ ಸತ್ಯ. ಕಡ್ಡಾಯವಾಗಿ ದಹಿ ಅಂತ ಬಳಸಲೇಬೇಕು ಎಂಬ ಆದೇಶ ಮಾಡಿದ್ದಾರೆ. ಇಂದು ದಹಿ, ನಾಳೆ ನಂದಿನಿ ದೂದ್, ನಂದಿನಿ ಪಾನಿ ಅಂದುಕೊಂಡು ಎಲ್ಲದಕ್ಕೂ ಹಿಂದಿ ಕಡ್ಡಾಯ ಮಾಡಿ ಕಡೆಗೆ ಕನ್ನಡವನ್ನೇ ಇಲ್ಲವಾಗಿಸೋ ಹುನ್ನಾರ ನಡೆದಿದೆ ಎಂದು ಅವರು ಆರೋಪಿಸಿದ್ದಾರೆ.