ಬೆಂಗಳೂರು: 2021–22 ನೇ ಸಾಲಿಗೆ ₹10,265.33 ಕೋಟಿ ಮೊತ್ತದ ಪೂರಕ ಅಂದಾಜುಗಳ ಮೊದಲ ಕಂತಿನ ಪ್ರಸ್ತಾವನೆಯನ್ನು ವಿಧಾನಸಭೆಯಲ್ಲಿ ಮಂಗಳವಾರ ಮಂಡಿಸಿದ್ದು, ಇದರಲ್ಲಿ ಕೋವಿಡ್ ನಿರ್ವಹಣೆಗಾಗಿ ಸುಮಾರು ₹1,400 ಕೋಟಿಗೂ ಹೆಚ್ಚು ಮೊತ್ತ ನೀಡಲಾಗಿದೆ.
ಮುಖ್ಯವಾಗಿ, 1 ಕೋಟಿ ಡೋಸ್ ಕೋವಿಶೀಲ್ಡ್ ಲಸಿಕೆ ಖರೀದಿಗೆ ₹300 ಕೋಟಿ, ಔಷಧ ಮತ್ತು ಪರಿಕರಗಳ ಖರೀದಿಗೆ ₹60 ಕೋಟಿ, ಪಿಪಿಇ ಕಿಟ್ ಮತ್ತು ಎನ್–95 ಮಾಸ್ಕ್ ಖರೀದಿಗೆ ₹100 ಕೋಟಿ, ಕೋವಿಡ್ ಪರೀಕ್ಷೆಯ ಕಿರು ಪರಿಕರಗಳನ್ನು ಖರೀದಿಗೆ ₹17.72 ಕೋಟಿ ಒದಗಿಸಿದ್ದು, ಕೋವಿಡ್ ಔಷಧಿಯ ಹೆಚ್ಚುವರಿ ಖರೀದಿಗಾಗಿ ₹140 ಕೋಟಿ ಒದಗಿಸಲಾಗಿದೆ.
l ಕೇಂದ್ರ ಪುರಸ್ಕೃತ ಗ್ರಾಮೀಣ ಕುಡಿಯುವ ನೀರು (ಜಲ್ ಜೀವನ್ ಮಿಷನ್) ಯೋಜನೆ ಸೇರಿದಂತೆ ಗ್ರಾಮೀಣಾಭಿವೃದ್ಧಿ
ಮತ್ತು ಪಂಚಾಯತ್‌ರಾಜ್ ಇಲಾಖೆಯ ವಿವಿಧ ಯೋಜನೆಗಳಿಗೆ ₹2,858.05 ಕೋಟಿ ಒದಗಿಸಲಾಗಿದೆ.
l ಅನ್ನ ಭಾಗ್ಯ ಯೋಜನೆಗಾಗಿ ₹720 ಕೋಟಿ, ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಗೆ ₹559 ಕೋಟಿ ಮತ್ತು ಕರ್ನಾಟಕ ಆಹಾರ ನಿಗಮವು ಪಡೆದ ನಗದು ಸಾಲದ ಮೇಲಿನ ಬಡ್ಡಿ ಮರುಪಾವತಿಗೆ ₹60 ಕೋಟಿ ಸೇರಿ ₹1,339 ಕೋಟಿ ಒದಗಿಸಲಾಗಿದೆ.
l ಬೆಳಗಾವಿ ಲೋಕಸಭಾ ಉಪಚುನಾವಣೆ ಮತ್ತು ವಿಧಾನಸಭಾ ಉಪಚುನಾವಣೆಗಳಿಗಾಗಿ ₹10.37 ಕೋಟಿ ಹೆಚ್ಚುವರಿ ಅನುದಾನ ಒದಗಿಸಲಾಗಿದೆ.
lಪುಷ್ಪಗಿರಿ ಮಹಾಸಂಸ್ಥಾನ, ಹಳೇಬೀಡು ಸಂಸ್ಥೆಗೆ ಅನುದಾನ ಬಿಡುಗಡೆ ಮಾಡಲು ₹5 ಕೋಟಿ ಹೆಚ್ಚುವರಿಯಾಗಿ ನೀಡಲಾಗಿದೆ.
lಕೋವಿಡ್‌ನಿಂದಾಗಿ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ‘ಮುಖ್ಯಮಂತ್ರಿ ಬಾಲ ಸೇವಾ ಯೋಜನೆ’ಯಡಿ ತಿಂಗಳಿಗೆ ₹3,500 ಪಾವತಿಸಲು ₹168 ಕೋಟಿ ಹೆಚ್ಚುವರಿಯಾಗಿ ನೀಡಲಾಗಿದೆ.
lಮುಖ್ಯಮಂತ್ರಿ ಬೊಮ್ಮಾಯಿಯವರ ತವರು ಜಿಲ್ಲೆ ಹಾವೇರಿಯಲ್ಲಿ ವಿವಿಧ ದೇವಸ್ಥಾನ, ಟ್ರಸ್ಟ್, ಮಠಗಳ ವಿವಿಧ ಕಾಮಗಾರಿಗಳಿಗಾಗಿ ₹1.18 ಕೋಟಿ ಅನುದಾನ ನೀಡಲಾಗಿದೆ.
l ಬೆಂಗಳೂರಿನಲ್ಲಿರುವ ಮೈಸೂರು ಲ್ಯಾಂಪ್ಸ್‌ಗೆ ಸೇರಿದ ಭೂಮಿಯಲ್ಲಿ ನಿರ್ಮಾಣವಾಗಲಿರುವ ‘ ಬೆಂಗಳೂರು ಹೆರಿಟೇಜ್ ಅಂಡ್ ಎನ್‌ವಿರಾನ್‌ಮೆಂಟ್ ಟ್ರಸ್ಟ್‌ನ ಕಾರ್ಯಕ್ರಮಗಳಿಗಾಗಿ ₹ 5 ಕೋಟಿ ಹೆಚ್ಚುವರಿಯಾಗಿ ಒದಗಿಸಲಾಗಿದೆ.
l ‘ಕನ್ನಡ ಕಾಯಕ ವರ್ಷಾಚರಣೆ’ ಕಾರ್ಯಕ್ರಮಗಳಿಗೆ ₹ 20 ಕೋಟಿ, ಚಿತ್ರದುರ್ಗದಲ್ಲಿ ಬಸವಣ್ಣನವರ 380 ಅಡಿ ಎತ್ತರದ ಲೋಹದ ಪುತ್ಥಳಿ ನಿರ್ಮಾಣಕ್ಕೆ ₹10 ಕೋಟಿ ಹೆಚ್ಚುವರಿಯಾಗಿ ಬಿಡುಗಡೆ ಮಾಡಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.