ಹುಬ್ಬಳ್ಳಿ: ಬಾಕಿ ಉಳಿದ ಕಾಮಗಾರಿ ಮತ್ತು ಪ್ರಸ್ತಾವಿತ ಯೋಜನೆಗಳಿಗೆಕೇಂದ್ರ ಸರ್ಕಾರ ಈ ಸಲದ ಬಜೆಟ್‌ನಲ್ಲಿ ನೈರುತ್ಯ ರೈಲ್ವೆ ವಲಯಕ್ಕೆ ₹3,245 ಕೋಟಿ ಮೀಸಲಿಟ್ಟಿದೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನೈರುತ್ಯ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಈ. ವಿಜಯಾ, ‘ಹಿಂದಿನ ಬಜೆಟ್‌ಗೆ ಹೋಲಿಸಿದರೆ ಈ ಬಾರಿ ಶೇ12 ರಷ್ಟು ಹೆಚ್ಚುಅನುದಾನ ಬಂದಿದೆ’ ಎಂದರು.

‘ಕಳೆದ ಆರ್ಥಿಕ ವರ್ಷದಲ್ಲಿ 105 ಕಿ.ಮೀ. ಜೋಡಿ ರೈಲು ಮಾರ್ಗದ ಕಾಮಗಾರಿ ಪೂರ್ಣವಾಗಿದ್ದು, ಈ ಆರ್ಥಿಕ ವರ್ಷದ ಅಂತ್ಯಕ್ಕೆ ಒಟ್ಟು 203 ಕಿ.ಮೀ. ಜೋಡಿ ಮಾರ್ಗ ಮುಗಿಸುವ ಗುರಿ ಹೊಂದಲಾಗಿದೆ. ಯಲಹಂಕ–ಪೆನು ಕೊಂಡ ಮತ್ತು ಅರಸೀಕೆರೆ–ತುಮ ಕೂರು ನಡುವಿನ ಮಾರ್ಗ 2022ರ ಮಾರ್ಚ್ ನಲ್ಲಿ ಮುಗಿಯಲಿದೆ’ ಎಂದರು.

ಹೊಸಪೇಟೆ–ಹುಬ್ಬಳ್ಳಿ ವಾಸ್ಕೋಡ ಗಾಮ ನಡುವಿನ 346 ಕಿ.ಮೀ. ಮಾರ್ಗಕ್ಕೆ ₹85 ಕೋಟಿ, ಮೀರಜ್–ಲೋಂಡಾ (189 ಕಿ.ಮೀ) ₹80.14 ಕೋಟಿ, ಬಿರೂರು–ತಾಳಗುಪ್ಪ (161 ಕಿ.ಮೀ.) ₹43.89 ಕೋಟಿ, ಬೆಂಗಳೂರು–ಹೊಸೂರು ಮಾರ್ಗವಾಗಿ ಒಮಲೂರ (196 ಕಿ.ಮೀ.) ₹20 ಕೋಟಿ, ಹೊಸಪೇಟೆ–ಸ್ವಾಮಿಹಳ್ಳಿ (59 ಕಿ.ಮೀ.) ₹14.72 ಕೋಟಿ, ಮೈಸೂರು–ಹಾಸನ–ಮಂಗಳೂರು ಮತ್ತು ಅರಸೀಕೆರೆ–ಹಾಸನ ಮಾರ್ಗಕ್ಕೆ (ಒಟ್ಟು 347 ಕಿ.ಮೀ.) ₹112.32 ಕೋಟಿ, ಮೈಸೂರು–ಚಾಮರಾಜನಗರ (61 ಕಿ.ಮೀ.) ₹17.83 ಕೋಟಿ, ಚಿಕ್ಕಬಾಣಾವರ–ಹಾಸನ (166 ಕಿ.ಮೀ.) ₹50.06 ಕೋಟಿ, ಕಡೂರ–ಚಿಕ್ಕಮಗಳೂರು (46 ಕಿ.ಮೀ.) ₹5.89 ಕೋಟಿ, ಚಿಕ್ಕಜಾಜೂರು–ಬಳ್ಳಾರಿ (184 ಕಿ.ಮೀ) ₹30 ಕೋಟಿ ಮತ್ತು ಬಂಗಾರಪೇಟೆ–ಯಲಹಂಕ (149 ಕಿ.ಮೀ.) ₹32.33 ಕೋಟಿ ಅನುದಾನ ಮೀಸಲಿಡಲಾಗಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.