ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿರಂಗಾ ಮೇಲಿನ ಆರ್‌ಎಸ್‌ಎಸ್ ದ್ವೇಷ ಮುಂದುವರಿದಿದೆಯೇ: ಕಾಂಗ್ರೆಸ್‌ ಪ್ರಶ್ನೆ

Last Updated 8 ಆಗಸ್ಟ್ 2022, 10:36 IST
ಅಕ್ಷರ ಗಾತ್ರ

ಬೆಂಗಳೂರು:ತಿರಂಗಾ ಡಿಪಿ ಬದಲಿಸುವ ಪ್ರಧಾನಿ ಕರೆ ಆರ್‌ಎಸ್‌ಎಸ್‌ಗೆ ಅನ್ವಯಿಸುವುದಿಲ್ಲವೇ ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.

ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಕೆಪಿಸಿಸಿ, ‘ಆರ್‌ಎಸ್‌ಎಸ್‌ ಎಂದಿಗೂ ಭಾರತೀಯತೆಯನ್ನು ಒಪ್ಪಿಲ್ಲ, ಮುಂದೆಯೂ ಒಪ್ಪುವುದಿಲ್ಲ. ಪ್ರತ್ಯೇಕ ಐಡೆಂಟಿಟಿಯಲ್ಲಿ ಇರಲು ಬಯಸುವ ಆರ್‌ಎಸ್‌ಎಸ್‌, ಭಾರತದಲ್ಲಿನ ತಾಲಿಬಾನ್ ಇದ್ದಂತೆ. ತಿರಂಗಾ ಡಿಪಿ ಬದಲಿಸುವ ಪ್ರಧಾನಿ ಕರೆ ಆರ್‌ಎಸ್‌ಎಸ್‌ಗೆ ಅನ್ವಯಿಸುವುದಿಲ್ಲವೇ? ತಿರಂಗಾ ಮೇಲಿನ ಅಸಹನೆ, ದ್ವೇಷ ಸುಪ್ತವಾಗಿ ಮುಂದುವರೆದಿದೆಯೇ? ಆರ್‌ಎಸ್‌ಎಸ್‌ ತಿರಂಗಾ ಒಪ್ಪದಿರುವುದೇಕೆ’ ಎಂದು ಕೇಳಿದೆ.

ತಿರಂಗಾವನ್ನು 'ಅನಿಷ್ಟದ ಸಂಕೇತ' ಎಂದು ಕರೆದಿದ್ದ ಆರ್‌ಎಸ್‌ಎಸ್‌ ಇನ್ನೂ ಅದೇ ಧೋರಣೆ, ಮನೋಧರ್ಮವನ್ನು ಮುಂದುವರೆಸಿದೆ. 53 ವರ್ಷಗಳ ಕಾಲ ತಿರಂಗವನ್ನು ತಿರಸ್ಕರಿಸಿದ್ದ ಆರ್‌ಎಸ್‌ಎಸ್ ಈಗಲೂ ತಿರಸ್ಕರಿಸುತ್ತಿದೆ. ಹಾಗಾಗಿಯೇ ಪ್ರಧಾನಿ 'ತಿರಂಗಾ ಡಿಪಿ' ಕರೆಯನ್ನು ಆರ್‌ಎಸ್‌ಎಸ್‌ ತಿರಸ್ಕರಿಸಿದೆ ಅಲ್ಲವೇ ಎಂದು ಟ್ವೀಟಿಸಿದೆ.

ಅಂದು ಸ್ವತಂತ್ರ ಚಳವಳಿಯ ವಿರುದ್ಧ ಬ್ರಿಟಿಷರೊಂದಿಗೆ ಕೈಜೋಡಿಸಿದ್ದ ಆರ್‌ಎಸ್ಎಸ್‌ ಇಂದು 'ಸ್ವತಂತ್ರ ಅಮೃತ ಮಹೋತ್ಸವ'ವನ್ನೂ ವಿರೋಧಿಸುತ್ತಿರುವಂತಿದೆ. ಆರ್‌ಎಸ್‌ಎಸ್‌ ಎಂದಿಗೂ ಭಾರತದ ಸ್ವತಂತ್ರವನ್ನು ಸಂಭ್ರಮಿಸಲೇ ಇಲ್ಲ. ಭಾರತದ ಸಾರ್ವಭೌಮತೆಯನ್ನು ಒಪ್ಪಿರಲೇ ಇಲ್ಲ. ಏಕೆಂದರೆ ಆರ್‌ಎಸ್‌ಎಸ್‌ಗೆ ಬೇಕಿರುವುದು ಸಂವಿಧಾನಾತ್ಮಕ ಭಾರತವಲ್ಲ, ಮನುಸ್ಮೃತಿಯ ಭಾರತ ಎಂದು ಕಾಂಗ್ರೆಸ್‌ ವಾಗ್ದಾಳಿ ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT