1957ರಿಂದ (ಅಂದಿನ ಮೈಸೂರು ಸರ್ಕಾರ ರಸ್ತೆ ಸಾರಿಗೆ ಇಲಾಖೆ) ಇದುವರೆಗೆ ಚಾಲಕರು ಹಾಗೂ ನಿರ್ವಾಹಕರಿಗೆ ಪ್ರತಿ ತಿಂಗಳ 7ರಂದು ವೇತನ ಪಾವತಿ ಆಗುತ್ತಿತ್ತು. ತಾಂತ್ರಿಕ ಸಿಬ್ಬಂದಿಗೆ ಆಯಾ ತಿಂಗಳ 4ರಂದು ಹಾಗೂ ಅಧಿಕಾರಿಗಳು, ಆಡಳಿತ ಸಿಬ್ಬಂದಿಗೆ 1ರಂದು ವೇತನ ನೀಡಲಾಗುತ್ತಿತ್ತು. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ಸೂಚನೆಯಂತೆ ಚಾಲಕರಿಗೆ ವೇತನ ಪಾವತಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.