ಗುರುವಾರ , ಜನವರಿ 21, 2021
18 °C

ಸಂಕಲ್ಪ ಉತ್ಸವ 9ರಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂಕಲ್ಪ ಉತ್ಸವ ಪತ್ರಿಕೆ ಬಿಡುಗಡೆ

ಯಲ್ಲಾಪುರ (ಉತ್ತರ ಕನ್ನಡ): ಸಂಕಲ್ಪ ಸೇವಾ ಸಂಸ್ಥೆಯ 34ನೇ ‘ಸಂಕಲ್ಪ ಉತ್ಸವ’ವನ್ನು ಜನವರಿ 9 ರಂದು ಪಟ್ಟಣದ ‘ನಿಸರ್ಗ ಮನೆ’ಯಲ್ಲಿ  ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ.

ಉತ್ಸವ ಕುರಿತು ಮಾಹಿತಿ ನೀಡಿದ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರಸಾದ ಹೆಗಡೆ, ಪ್ರಸಿದ್ಧ ಕಲಾವಿದರಾದ ಕೇಶವ ಹೆಗಡೆ ಕೊಳಗಿ, ಶಂಕರ ಭಟ್ಟ ಬ್ರಹ್ಮೂರು, ರಾಘವೇಂದ್ರ ಆಚಾರ್ಯ ಜನಸಾಲೆ ಇವರ ಗಾಯನ ಕಾರ್ಯಕ್ರಮ 9 ರಂದು ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿದೆ. ಸುನೀಲ ಭಂಡಾರಿ, ಶಂಕರ ಭಾಗ್ವತ್, ಗಣಪತಿ ಭಾಗ್ವತ ಕವಾಳೆ, ಪ್ರಸನ್ನ ಹೆಗ್ಗಾರ, ಗಣೇಶ ಗಾಂವ್ಕರ್ ಇವರ ವಾದನದಲ್ಲಿ  ‘ಹಿಮ್ಮೇಳ ಗಾನ ವೈಭವ' ನಡೆಯಲಿದೆ. ಶ್ರೀರಕ್ಷಾ ಹಾಗೂ ಚಿಂತನಾ ಇವರ ಭಾಗವತಿಕೆ ನಡೆಯಲಿದೆ.

ಸಂಜೆ 6 ಗಂಟೆಯಿಂದ ಸುಬ್ರಹ್ಮಣ್ಯ ಚಿಟ್ಟಾಣಿ, ನೀಲಕೋಡ ಶಂಕರ ಹೆಗಡೆ ತಂಡದವರಿಂದ 'ಭಾಸವತಿ' ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದರು.

ಕೋವಿಡ್ ಕಾರಣದಿಂದ 7 ದಿನಗಳ ಸಂಕಲ್ಪ ಉತ್ಸವವನ್ನು ಈ ಬಾರಿ ಕೈ ಬಿಡಲಾಗಿದ್ದು, ವರ್ಷದುದ್ದಕ್ಕೂ ತಾಲ್ಲೂಕಿನ ವಿವಿಧ ಪ್ರದೇಶಗಳಲ್ಲಿ 7 ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು