ಮಂಗಳವಾರ, ಡಿಸೆಂಬರ್ 6, 2022
21 °C

ಸತೀಶ್‌ ಜಾರಕಿಹೊಳಿ ಹೇಳಿಕೆ ಕಾಂಗ್ರೆಸ್ ಮಾನಸಿಕತೆ: ಸಚಿವೆ ಶೋಭಾ ಕರಂದ್ಲಾಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ಸತೀಶ್ ಜಾರಕಿಹೊಳಿ ಹಿಂದೂಗಳ ವಿರುದ್ಧದ ಕಾಂಗ್ರೆಸ್‌ನ ಮಾನಸಿಕತೆಯಂತೆ ಮಾತನಾಡಿದ್ದಾರೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ತಾಲ್ಲೂಕಿನ ಕುಂಬ್ರಹಳ್ಳಿ ನಿಧನರಾದ ಬಿಜೆಪಿ ನಾಯಕಿ ಸುಶೀಲಾ ಶಿವಪ್ಪನವರ ಅಂತಿಮ ದರ್ಶನ ಪಡೆದ ನಂತರ ಮಂಗಳವಾರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಜಾರಕಿಹೊಳಿ ಹೇಳಿಕೆ ಖಂಡನೀಯ, ಚುನಾವಣೆ ಬಂದಾಗ ಹಿಂದೂ ಧರ್ಮ ಹಾಗೂ ಹಿಂದೂಗಳ ವಿರುದ್ದ ಮಾತನಾಡಿ ಗೊಂದಲ ಸೃಷ್ಟಿಸಲು ತಂತ್ರ ಮಾಡಿದ್ದಾರೆ ಎಂದರು. 

ಸಿದ್ದಾರಾಮಯ್ಯ ಟಿಪ್ಪು ಜಯಂತಿ, ಲಿಂಗಾಯಿತ ವೀರಶೈವ ಪ್ರತ್ಯೇಕ ಧರ್ಮ, ಭಯೋತ್ಪಾದಕರನ್ನು ಜೈಲಿನಿಂದ ಬಿಡುಗಡೆ ಮಾಡುವ ಕೆಲಸ ಮಾಡಿ ಗೊಂದಲ ಸೃಷ್ಟಿಸಿದರು. ಆದರೆ ಬಿಜೆಪಿ ಎಂದಿಗೂ ಒಂದು ಧರ್ಮ, ಜಾತಿಯನ್ನು ಮನದಲ್ಲಿ ಇಟ್ಟುಕೊಂಡು ಕೆಲಸ ಮಾಡಿಲ್ಲ, ಭಾಗ್ಯಲಕ್ಷ್ಮೀ, ಕಿಸಾನ್ ಸಮ್ಮಾನ್‌ನಂತಹ ಯೋಜನೆಗಳನ್ನು ದೇಶದ ಎಲ್ಲರಿಗೂ ನೀಡಿದೆ. ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರ ಹಿಡಿಯುವುದು ಕನಸಿನ ಮಾತು ಎಂದರು.

ಕಾಡಾನೆ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಎಲ್ಲ ರೀತಿಯ ಕ್ರಮ ಕೈಗೊಳ್ಳಲು ಸಿದ್ಧವಿದೆ. ಇದೀಗ ತಜ್ಞರ ಸಮಿತಿ ಜನರ ಅಭಿಪ್ರಾಯ ಆಲಿಸಿದ್ದು, ರಾಜ್ಯ ಸರ್ಕಾರ ಕೊಡುವ ಯೋಜನೆಯ ಆಧಾರದ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.