ಬುಧವಾರ, ಫೆಬ್ರವರಿ 1, 2023
16 °C

ಆಸ್ಪತ್ರೆಯಲ್ಲಿ ಬಟ್ಟೆ ಬದಲಿಸುವ ದೃಶ್ಯ ಚಿತ್ರೀಕರಣ: ನರ್ಸಿಂಗ್‌ ವಿದ್ಯಾರ್ಥಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುರತ್ಕಲ್: ಇಲ್ಲಿನ ಖಾಸಗಿ ಆಸ್ಪತ್ರೆಗೆ ವೈದ್ಯಕೀಯ ತಪಾಸಣೆಗೆ ತೆರಳಿದ ಮಹಿಳೆಯರು ಬಟ್ಟೆ ಬದಲಿಸುವ ದೃಶ್ಯಗಳನ್ನು ಗುಪ್ತ ಸ್ಥಳದಲ್ಲಿ ಮೊಬೈಲ್‌ ಕ್ಯಾಮೆರಾ ಇರಿಸಿ ಸೆರೆಹಿಡಿದ ಬಗ್ಗೆ ಸುರತ್ಕಲ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ನರ್ಸಿಂಗ್‌ ವಿದ್ಯಾರ್ಥಿ ಪವನ್‌ ಕುಮಾರ್‌ (21) ಮಹಿಳೆಯರು ಬಟ್ಟೆ ಬದಲಿಸುವುದನ್ನು ಚಿತ್ರೀಕರಿಸಿದ ಆರೋಪಿ. ಆತನನ್ನು ಬಂಧಿಸಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಕಲಬುರಗಿಯ ಪವನ್‌ ಬಜಪೆಯಲ್ಲಿ ವಾಸವಿದ್ದ. 

ಆಸ್ಪತ್ರೆಗೆ ತಪಾಸಣೆಗೆ ಬಂದ ಮಹಿಳೆಯರು ಸ್ಕ್ಯಾನಿಂಗ್‌ಗೆ ಒಳಗಾಗುವ ಮುನ್ನ  ಬಟ್ಟೆ ಬದಲಿಸಲು ಕೋಣೆಯೊಂದರಲ್ಲಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಯುವತಿಯೊಬ್ಬರು ಬಟ್ಟೆ ಬದಲಾಯಿಸುವುದಕ್ಕೆ ಮುನ್ನ ಆಸುಪಾಸಿನ ಸ್ಥಳಗಳನ್ನು ಪರಿಶೀಲಿಸಿದ್ದರು. ಈ ವೇಳೆ ಗುಪ್ತ ಸ್ಥಳದಲ್ಲಿ ಮೊಬೈಲ್‌ ಇಟ್ಟಿದ್ದು ಪತ್ತೆಯಾಗಿತ್ತು. ಈ ವಿಚಾರವನ್ನು ಯುವತಿಯು ಆಸ್ಪತ್ರೆಯ ವೈದ್ಯರ ಗಮನಕ್ಕೆ ತಂದಿದ್ದರು. 

ಈ ಬಗ್ಗೆ ಪರಿಶೀಲಿಸಿದಾಗ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ನರ್ಸಿಂಗ್‌ ವಿದ್ಯಾರ್ಥಿ ಪವನ್‌ ಈ ಕೃತ್ಯ ನಡೆಸಿದ್ದು ಗೊತ್ತಾಗಿದೆ. ಬಳಿಕ ಆಸ್ಪತ್ರೆಯವರೇ ಆತನ ವಿರುದ್ಧ ಸುರತ್ಕಲ್‌ ಠಾಣೆಗೆ ದೂರು ನೀಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು