ಶುಕ್ರವಾರ, ಜೂನ್ 25, 2021
22 °C

ಮಂತ್ರಿಗಳಿಗೆ ಬೇರೆ, ಸಾಮಾನ್ಯರಿಗೆ ಬೇರೆ ಕಾನೂನು ಇದೆಯೇ: ಕಾಂಗ್ರೆಸ್ ಪ್ರಶ್ನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಜೆಪಿ ಶಾಸಕ ರಮೇಶ ಜಾರಕಿಹೊಳಿಗೆ ಸಂಬಂಧಿಸಿದ್ದೆನ್ನಲಾದ ಸಿ.ಡಿ ಪ್ರಕರಣ ದಿನಕ್ಕೊಂದು ಆಯಾಮ ಪಡೆದುಕೊಳ್ಳುತ್ತಿದೆ. ಇದರ ನಡುವೆ ಕಾಂಗ್ರೆಸ್‌–ಬಿಜೆಪಿ ಟ್ವೀಟ್‌ ಸಮರ ಬುಧವಾರವೂ ಮುಂದುವರಿದಿದೆ.

ಪ್ರಕರಣ ಸಂಬಂಧ ಸರಣಿ ಟ್ವೀಟ್‌ ಮಾಡಿರುವ ಕಾಂಗ್ರೆಸ್‌, ‘ಬಸವರಾಜ ಬೊಮ್ಮಾಯಿ ಅವರೇ, ಮಂತ್ರಿಗಳಿಗೆ ಬೇರೆ, ಸಾಮಾನ್ಯರಿಗೆ ಬೇರೆ ಕಾನೂನು ಇದೆಯೇ? ಎಂದು ರಾಜ್ಯದ ಜನ ಕೇಳುತ್ತಿದ್ದಾರೆ. ಜನತೆಯಲ್ಲಿದ್ದ ಕಾನೂನಿನ ಬಗೆಗಿನ ಭರವಸೆಯನ್ನು ಕುಗ್ಗಿಸುತ್ತಿರುವುದೂ ಅಲ್ಲದೆ ಅತ್ಯಾಚಾರ ಆರೋಪಿಯ ಬಗ್ಗೆ ಬಂಡತನದಲ್ಲಿ ಸಮರ್ಥನೆಗೆ ಇಳಿಯುವುದಕ್ಕೆ ಸ್ವಲ್ಪವೂ ನಾಚಿಕೆ ಎನಿಸುತ್ತಿಲ್ಲವೇ?’ ಎಂದು ಪ್ರಶ್ನಿಸಿದೆ.

ಇದನ್ನೂ ಓದಿ... ಮಾಧ್ಯಮಗಳಿಗೆ ಸಂತ್ರಸ್ತೆ ವಿಡಿಯೊ: ಎಸ್ಐಟಿ ‌ವಿರುದ್ಧ ವಕೀಲ‌ ಜಗದೀಶ ಗರಂ

‘ಯಡಿಯೂರಪ್ಪ ಅವರೇ, ಹಾಗಿದ್ದರೆ ಕಣ್ಣಿನಲ್ಲಿ ನೋಡಲಾಗದಂತಹ ಸಿಡಿ ಇದೆ ಎಂದು ನಿಮ್ಮ ಬಗೆಗಿನ ಶಾಸಕ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಆರೋಪ ನಿಜವೇ?, ಅಥವಾ ಸುಳ್ಳೇ? ನಿಜವಾಗಿದ್ದರೆ ನೀವೇಕೆ ಇನ್ನೂ ರಾಜೀನಾಮೆ ನೀಡಲಿಲ್ಲ? ಸುಳ್ಳಾಗಿದ್ದರೆ ನೀವೇಕೆ ಇನ್ನೂ ಯತ್ನಾಳ್‌ರನ್ನು ಪಕ್ಷದಿಂದ ಉಚ್ಛಾಟಿಸಲಿಲ್ಲ?’ ಎಂದು ಕಾಂಗ್ರೆಸ್‌ ಮತ್ತೊಂದು ಟ್ವೀಟ್ ಮಾಡಿದೆ.

ಇದನ್ನೂ ಓದಿ... ಸಿಡಿ ಯುವತಿಯ ವಕೀಲರು ಕೆಂಡ ಕಾರಿದ ಬಿಜೆಪಿ ಮುಖಂಡ, ಪೊಲೀಸ್ ಯಾರು ಗೊತ್ತೇ? ‌

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು