ಬುಧವಾರ, ಆಗಸ್ಟ್ 10, 2022
21 °C

ಮೊದಲ ಬಾರಿಗೆ ತಮ್ಮ ಹೆಸರಿನಲ್ಲಿ ಕಾರು ಖರೀದಿಸಿದ ಶಾಮನೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಶಾಸಕ ಶಾಮನೂರು ಶಿವಶಂಕರಪ್ಪ ಅವರು ತಮಗೆ 90 ವರ್ಷ ತುಂಬಿದ ದಿನ ಇದೇ ಮೊದಲ ಬಾರಿಗೆ ತಮ್ಮ ಹೆಸರಿನಲ್ಲಿ ‘ಇನ್ನೊವಾ ಕ್ರಿಸ್ಟ’ ಕಾರನ್ನು ಖರೀದಿಸಿದ್ದಾರೆ. ಕೋಟ್ಯಾಧೀಶರಾದರೂ ಇದುವರೆಗೆ ಅವರ ಹೆಸರಿನಲ್ಲಿ ಯಾವ ಕಾರನ್ನೂ ಖರೀದಿಸಿರಲಿಲ್ಲ.

ಶಾಮನೂರು ಅವರಿಗೆ ಪ್ರತಿ 5 ವರ್ಷಗಳಿಗೊಮ್ಮೆ ಕಾರು ಖರೀದಿಸುವ ಹವ್ಯಾಸವಿದೆ. ಆದರೆ, ಖರೀದಿಸಿದ ಯಾವ ಕಾರಿನ ಮಾಲೀಕತ್ವವೂ ಇದುವರೆಗೆ ಅವರ ಹೆಸರಿನಲ್ಲಿ ಇರಲಿಲ್ಲ. ಈ ಹಿಂದೆ ಅಂಬಾಸಿಡರ್, ಬೆಂಜ್ ಕಾರಿನಲ್ಲಿ ಓಡಾಡಿದ್ದರು. ಹೊಸ ಕಾರಿಗೆ ‘ಕೆಎ–51 ಎಂ.ಆರ್ 0555’ ನಂಬರ್ ಇದೆ. ₹ 30 ಲಕ್ಷ ವೆಚ್ಚದಲ್ಲಿ ಇದನ್ನು ಖರೀದಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು