ಗುರುವಾರ , ಸೆಪ್ಟೆಂಬರ್ 29, 2022
29 °C

ಶಿವಮೊಗ್ಗ–ಯಶವಂತಪುರ–ಬಾಣಸವಾಡಿ; ಹೊಸ ರೈಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ನೈರುತ್ಯ ರೈಲ್ವೆ ಶಿವಮೊಗ್ಗ–ಯಶವಂತಪುರ–ಬಾಣಸವಾಡಿ ನಡುವೆ ಸೆಪ್ಟೆಂಬರ್ 12ರಿಂದ ನೂತನ ರೈಲು (06513/06514) ಸಂಚಾರ ಅರಂಭಿಸಿದೆ.

ಶಿವಮೊಗ್ಗ ನಗರವನ್ನು ಮಧ್ಯಾಹ್ನ 1.05ಕ್ಕೆ ಬಿಟ್ಟು ಸಂಜೆ 5.30ಕ್ಕೆ ಈ ರೈಲು ತುಮಕೂರು ತಲುಪಲಿದೆ. 5.40ಕ್ಕೆ ತುಮಕೂರು ಬಿಟ್ಟು ಸಂಜೆ 6.50ಕ್ಕೆ ಯಶವಂತಪುರ ತಲುಪಿ, ಸಂಜೆ 7.40ಕ್ಕೆ ಬಾಣಸವಾಡಿ ತಲುಪುತ್ತದೆ. ಅದೇ ರೀತಿ ನಸುಕಿನ 5.50ಕ್ಕೆ ಬಾಣಸವಾಡಿ ಬಿಟ್ಟು, ಬೆಳಿಗ್ಗೆ 6.40ಕ್ಕೆ ಯಶವಂತಪುರ, 7.55ಕ್ಕೆ ತುಮಕೂರು ತಲುಪಲಿದೆ. ಬೆಳಿಗ್ಗೆ 8.05ಕ್ಕೆ ತುಮಕೂರು ಬಿಟ್ಟು ಮಧ್ಯಾಹ್ನ 12.30ಕ್ಕೆ ಶಿವಮೊಗ್ಗಕ್ಕೆ ಬರಲಿದೆ.

’ಇತ್ತೀಚೆಗೆ ನೈರುತ್ಯ ರೈಲ್ವೆ ಜನರಲ್ ಮ್ಯಾನೇಜರ್ ಇವರು ಶಿವಮೊಗ್ಗ ಜಿಲ್ಲೆಗೆ ಭೇಟಿ ನೀಡಿ ರೈಲ್ವೆ ಇಲಾಖೆಗೆ ಸಂಬಂಧಿಸಿದ ಅಭಿವೃದ್ಧಿ ಕಾರ್ಯಗಳು ಹಾಗೂ ಪ್ರಯಾಣಿಕರ ಕುಂದು ಕೊರತೆಗಳ ವಿಚಾರಣೆ ಸಂದರ್ಭದಲ್ಲಿ ಶಿವಮೊಗ್ಗದಿಂದ ಬೆಂಗಳೂರಿಗೆ ಮಧ್ಯಾಹ್ನದ ಸಮಯದಲ್ಲಿ ರೈಲು ಸೌಲಭ್ಯ ಕಲ್ಪಿಸಿಕೊಡಲು ಮನವಿ ಮಾಡಲಾಗಿತ್ತು. ಅದಕ್ಕೆ
ಸ್ಪಂದಿಸಿರುವ ಜನರಲ್ ಮ್ಯಾನೇಜರ್ ಈ ವಿಶೇಷ ರೈಲನ್ನು ಶಿವಮೊಗ್ಗಕ್ಕೆ ಅರಂಭಿಸಿದ್ದಾರೆ‘ ಎಂದು ಸಂಸದ ಬಿ.ವೈ.ರಾಘವೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.