ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಲತೀರದ ಭಾರ್ಗವ ಶಿವರಾಮ ಕಾರಂತರನ್ನು ಸ್ಮರಿಸಿದ ನೆಟ್ಟಿಗರು; 120 ನೇ ಜನ್ಮದಿನ

Last Updated 10 ಅಕ್ಟೋಬರ್ 2021, 9:47 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡದ ಶ್ರೇಷ್ಠ ಸಾಹಿತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಶಿವರಾಮ ಕಾರಂತ ಅವರ 120 ನೇ ಜನ್ಮದಿನಾಚರಣೆ ಇಂದು.

ಈ ನಿಟ್ಟಿನಲ್ಲಿ ಸಾಹಿತಿಗಳು, ಲೇಖಕರು, ಬರಹಗಾರರು, ರಾಜಕಾರಣಿಗಳು ಸೇರಿದಂತೆ ನಾನಾ ರಂಗದ ಗಣ್ಯರು, ಕಾರಂತರ ಅಭಿಮಾನಿಗಳು ಅವರನ್ನು ಸ್ಮರಿಸಿ ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿಗೌರವ ಸಲ್ಲಿಸುತ್ತಿದ್ದಾರೆ.

ಕಾರಂತರು ನಾಡು, ನುಡಿಗೆ ಸಲ್ಲಿಸಿದ ಸೇವೆಯನ್ನು ಸ್ಮರಿಸಿ ಪರಿಸರ ಹೋರಾಟ, ಯಕ್ಷಗಾನ ಕಾಳಜಿ ಸೇರಿದಂತೆ ಅವರ ಸಾಹಿತ್ಯದ ಕೊಡುಗೆಗಳನ್ನು ಗೌರವಿಸಲಾಗುತ್ತಿದೆ.

ಕೋಟಾ ಶಿವರಾಮ ಕಾರಂತ ಅವರು ಅಕ್ಟೋಬರ್ 10, 1902 ರಂದು ಸಾಲಿಗ್ರಾಮದಲ್ಲಿ ಜನಿಸಿ ಸಾಹಿತ್ಯ, ಪರಿಸರ, ರಾಜಕೀಯ, ಸಿನಿಮಾ, ಚಳವಳಿ, ರಂಗಭೂಮಿ, ಕಲೆ ಸೇರಿದಂತೆ ನಾನಾ ರಂಗಗಳಲ್ಲಿ ಅಪಾರ ಕೆಲಸ ಮಾಡಿ 1997 ಡಿಸೆಂಬರ್ 9 ರಂದು ಉಡುಪಿಯಲ್ಲಿ ನಿಧನರಾದರು.

ಅನೇಕರು ಶಿವರಾಮಕಾರಂತರ ಕೃತಿಗಳಲ್ಲಿನ ತಮ್ಮ ಇಷ್ಟದ ಸಾಲುಗಳನ್ನು ಪೋಸ್ಟ್ ಮಾಡಿ, ಕಾರಂತರಿಗೆ ಗೌರವ ನಮನ ಸಲ್ಲಿಸುತ್ತಿದ್ದಾರೆ. ಕಾರಂತರ ಪುಸ್ತಕಗಳನ್ನು ಓದಲು ಕರೆ ಕೊಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT