ಬುಧವಾರ, ಜುಲೈ 28, 2021
20 °C
ತಮ್ಮೂರ ಶಾನುಭೋಗರ ಮಾತು ನೆನಪಿಸಿಕೊಂಡ ಸಿದ್ದರಾಮಯ್ಯ

ಶಾನುಭೋಗರು ದಾರಿ ತಪ್ಪಿಸಲು ನೋಡಿದ್ದರು: ಬಾಲ್ಯ ನೆನಪಿಸಿಕೊಂಡ ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಗಲಕೋಟೆ: ’ಕಾನೂನು ಓದು ಕುರುಬರಿಗೆ, ಶೂದ್ರರಿಗೆ ತಲೆಗೆ ಹತ್ತಲ್ಲಯ್ಯ. ಅದು ಮೇಲ್ಜಾತಿಯವರಿಗೆ ಮಾತ್ರ ಎಂದು ನಮ್ಮೂರಲ್ಲೊಬ್ಬ ಶಾನುಭೋಗ ನಮ್ಮಪ್ಪನಿಗೆ ಹೇಳಿದ್ದ. ಕೊನೆಗೆ ಊರಲ್ಲಿ ಪಂಚಾಯ್ತಿ ಸೇರಿಸಿ ನಾನು ಲಾ ಕಾಲೇಜು ಸೇರಿಕೊಂಡಿದ್ದೆ‘ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಬಾದಾಮಿ ಪಟ್ಟಣದ ಸರ್ಕಾರಿ ಪದವಿ ಕಾಲೇಜಿನಲ್ಲಿ ಮಂಗಳವಾರ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಿಸಿ ಮಾತನಾಡಿದ ಅವರು, ’ನೀನು ನಿನ್ನ ಮಗನಿಗೆ ಲಾ ಓದಿಸಬೇಡ, ಪೋಲಿಯಾಗಿಬಿಡ್ತಾನೆ ಅಂತ ಆ ಶಾನುಭೋಗ ಅಪ್ಪನಿಗೆ ನಂಬಿಸಿದ್ದ. ಅವನು ನನಗೆ ಕಲಿಯೋಕೆ ಬಿಡದೆ ನಮ್ಮಪ್ಪನಿಗೆ ಬರೀ ಸುಳ್ಳು ಹೇಳುತ್ತಿದ್ದ‘ ಎಂದು ನೆನಪಿಸಿಕೊಂಡರು.

’ಬುದ್ಧಿವಂತಿಕೆ ಯಾರಪ್ಪನ ಮನೆ ಸ್ವತ್ತಲ್ಲ. ನಾನು ಪ್ರೈಮರಿ ಸ್ಕೂಲ್ ಓದುವಾಗ ಕುರಿ, ಎಮ್ಮೆ ಮೇಯಿಸೋಗು ಅಂತ ಕೆಲವರು ಹೇಳ್ತಿದ್ರು. ಅವರ ಮಾತನ್ನೇ ಕೇಳಿದ್ರೆ ಏನಾಗ್ತಿತ್ತು. ಜನ ಹೇಗೆ ದಾರಿ ತಪ್ಪಿಸುತ್ತಾರೆ ಅನ್ನೋದಕ್ಕೆ ಸಾಕ್ಷಿ ಇದು. ಬುದ್ಧಿವಂತಿಕೆ ವಂಶ ಪಾರಂಪರ್ಯವಾಗಿ ಬರುವುದಿಲ್ಲ, ಅದನ್ನು ಬೆಳೆಸಿಕೊಳ್ಳಬೇಕು. ಹೀಗಾಗಿ ಚೆನ್ನಾಗಿ ಓದಿ‘ ಎಂದು ನೆರೆದ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು