ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 3,455 ಕೋಟಿ ಮೊತ್ತದ ಹೂಡಿಕೆ ಪ್ರಸ್ತಾವಗಳಿಗೆ ಒಪ್ಪಿಗೆ

Last Updated 25 ಜನವರಿ 2023, 15:53 IST
ಅಕ್ಷರ ಗಾತ್ರ

ಬೆಂಗಳೂರು: ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಏಕಗವಾಕ್ಷಿ ಅನುಮೋದನೆ ಸಮಿತಿಯು ₹ 3,455.39 ಕೋಟಿ ಮೊತ್ತದ ಹೂಡಿಕೆ ಪ್ರಸ್ತಾವದ 59 ಯೋಜನೆಗಳಿಗೆ ಮಂಗಳವಾರ ಒಪ್ಪಿಗೆ ನೀಡಿದೆ.

ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ಆರ್‌. ನಿರಾಣಿ ಅಧ್ಯಕ್ಷತೆಯಲ್ಲಿ ನಡೆದ ಏಕಗವಾಕ್ಷಿ ಅನುಮೋದನೆ ಸಮಿತಿ ಸಭೆಯಲ್ಲಿ ಈ ಹೂಡಿಕೆ ಪ್ರಸ್ತಾವಗಳಿಗೆ ಒಪ್ಪಿಗೆ ನೀಡಲಾಗಿದೆ. ಈ ಯೋಜನೆಗಳಿಂದ ರಾಜ್ಯದಲ್ಲಿ ಒಟ್ಟು 18,567 ಉದ್ಯೋಗಗಳು ಸೃಜನೆಯಾಗಲಿವೆ ಎಂದು ಅಂದಾಜಿಸಲಾಗಿದೆ.

‘₹ 50 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದ ಹೂಡಿಕೆಯ 11 ಬೃಹತ್‌ ಹಾಗೂ ಮಧ್ಯಮ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಈ ಯೋಜನೆಗಲ್ಲಿ ಒಟ್ಟು ₹ 2,186.70 ಕೋಟಿ ಹೂಡಿಕೆಯಾಗಲಿದ್ದು, 10,599 ಉದ್ಯೋಗಗಳು ಸೃಜನೆಯಾಗಲಿವೆ. ₹ 15 ಕೋಟಿಯಿಂದ ₹ 50 ಕೋಟಿವರೆಗಿನ ಹೂಡಿಕೆಯ 46 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಈ ಯೋಜನೆಗಳಲ್ಲಿ ಒಟ್ಟು ₹ 1,049.19 ಕೋಟಿ ಹೂಡಿಕೆಯಾಗಲಿದ್ದು, 8,008 ಉದ್ಯೋಗಗಳ ಸೃಜನೆಯಾಗಲಿದೆ’ ಎಂದು ನಿರಾಣಿ ತಿಳಿಸಿದ್ದಾರೆ.

ಒಟ್ಟು ₹ 219.50 ಮೊತ್ತದ ಎರಡು ಹೆಚ್ಚುವರಿ ಹೂಡಿಕೆ ಪ್ರಸ್ತಾವಗಳಿಗೂ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಅನುಮೋದನೆಗೊಂಡಿರುವ ಯೋಜನೆಗಳ ವಿವರ: ಮೈಸೂರು ಸ್ಟೀಲ್ಸ್‌ ಲಿಮಿಟೆಡ್‌ನಿಂದ ಮೈಸೂರಿನ ಮೇಟಗಾನಹಳ್ಳಿಯಲ್ಲಿ ₹ 405.43 ಕೋಟಿ ಹೂಡಿಕೆ (200 ಉದ್ಯೋಗ ಸೃಷ್ಟಿ), ಎನ್‌ಐಡಿಸಿ ಇಂಡಸ್ಟ್ರಿಯಲ್‌ ಆಟೊಮೋಷನ್‌ ಇಂಡಿಯಾ ಲಿಮಿಟೆಡ್‌ನಿಂದ ಬೇಲೂರು ಕೈಗಾರಿಕಾ ಪ್ರದೇಶದ ಕೋಟೂರ್‌ನಲ್ಲಿ ₹ 350 ಕೋಟಿ ಹೂಡಿಕೆ (730 ಉದ್ಯೋಗ ಸೃಷ್ಟಿ), ಧಾರವಾಡದ ಎಫ್‌ಎಂಸಿಜಿ ಕ್ಲಸ್ಟರ್‌ನಲ್ಲಿ ಸಿಲಾನ್‌ ಬೆವರೇಜಸ್‌ನಿಂದ ₹ 256.3 ಕೋಟಿ ಹೂಡಿಕೆ (200 ಉದ್ಯೋಗ ಸೃಷ್ಟಿ), ಬೆಳಗಾವಿ ಜಿಲ್ಲೆಯ ಕಣಗಲ್‌ ಕೈಗಾರಿಕಾ ಪ್ರದೇಶದಲ್ಲಿ ಬಾಲಾಜಿ ವೇರ್‌ ಹೌಸ್‌ ಪ್ರೈವೇಟ್‌ ಲಿಮಿಟೆಡ್‌ನಿಂದ ₹ 252.25 ಕೋಟಿ ಹೂಡಿಕೆ (500 ಉದ್ಯೋಗ), ಚಾಮರಾಜನಗರ ಬಡಗುಪ್ಪೆ, ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಮಂಜುಶ್ರೀ ಟೆಕ್ನೋಪಾರ್ಕ್‌ ಲಿಮಿಟೆಡ್‌ನಿಂದ ₹ 253 ಕೋಟಿ ಹೂಡಿಕೆ (500 ಉದ್ಯೋಗ).

ತುಮಕೂರು ಜಿಲ್ಲೆಯ ಶಿರಾ ಕೈಗಾರಿಕಾ ಪ್ರದೇಶದಲ್ಲಿ ಕ್ಸಿಸೋಡ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ನಿಂದ ₹ 138 ಕೋಟಿ ಹೂಡಿಕೆ (160 ಉದ್ಯೋಗ), ಬಳ್ಳಾರಿ ಜಿಲ್ಲೆಯ ಬೆಳಗಲ್ ಗ್ರಾಮದಲ್ಲಿ ಮಹಾಮಾನವ್‌ ಇನ್‌ಸ್ಪಾಟ್‌ ಪ್ರೈವೇಟ್‌ ಲಿಮಿಟೆಡ್‌ನಿಂದ ₹ 90 ಕೋಟಿ ಹೂಡಿಕೆ (90 ಉದ್ಯೋ), ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನಲ್ಲಿ ಎ.ಸಿ.ಆರ್‌. ಪ್ರಾಜೆಕ್ಟ್‌ನಿಂದ ₹ 85 ಕೋಟಿ ಹೂಡಿಕೆ (350 ಉದ್ಯೋಗ), ಧಾರವಾಡದ ಮಮ್ಮಿಗಟ್ಟಿ ಕೈಗಾರಿಕಾ ಪ್ರದೇಶದಲ್ಲಿ ನಿಯೋಬಿ ಸಲ್ಯೂಷನ್ಸ್ ಪ್ರೈವೇಟ್‌ ಲಿಮಿಟೆಡ್‌ನಿಂದ ₹ 50 ಕೋಟಿ ಹೂಡಿಕೆ (563 ಉದ್ಯೋಗ), ಕೊಪ್ಪಳ ಜಿಲ್ಲೆಯ ಗಬಾರ ಗ್ರಾಮದಲ್ಲಿ ಅಭಯ್‌ ಆಗ್ರೋ ಫುಡ್‌ ಪ್ರೈವೇಟ್‌ ಲಿಮಿಟೆಡ್‌ನಿಂದ ₹ 32.65 ಕೋಟಿ ಹೂಡಿಕೆ (35 ಉದ್ಯೋಗ).‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT