ಮಂಗಳವಾರ, ಜೂನ್ 22, 2021
27 °C

ವೈ.ಎಸ್‌. ರವಿಕುಮಾರ್‌ ಕಲಬುರ್ಗಿ ಪೊಲೀಸ್‌ ಕಮಿಷನರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಐಜಿಪಿ ಶ್ರೇಣಿಯ ಐವರು ಸೇರಿದಂತೆ ಆರು ಐಪಿಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಶುಕ್ರವಾರ ಆದೇಶ ಹೊರಡಿಸಿದ್ದು, ಪೊಲೀಸ್‌ ನೇಮಕಾತಿ ವಿಭಾಗದ ಡಿಐಜಿ ಡಾ.ವೈ.ಎಸ್‌. ರವಿಕುಮಾರ್‌ ಅವರನ್ನು ಕಲಬುರ್ಗಿ ನಗರ ಪೊಲೀಸ್‌ ಕಮಿಷನರ್‌ ಹುದ್ದೆಗೆ ನೇಮಿಸಲಾಗಿದೆ.

ಪೊಲೀಸ್‌ ಪ್ರಧಾನ ಕಚೇರಿಯ ಆಡಳಿತ ವಿಭಾಗದ ಐಜಿಪಿಯಾಗಿದ್ದ ಕೆ.ವಿ. ಶರತ್‌ ಚಂದ್ರ ಅವರನ್ನು ಅರಣ್ಯ ಘಟಕದ ಐಜಿಪಿ ಹುದ್ದೆಗೆ, ಬಳ್ಳಾರಿ ವಲಯದ ಐಜಿಪಿ ಎಂ. ನಂಜುಂಡಸ್ವಾಮಿ ಅವರನ್ನು ಕಾರಾಗೃಹ ಇಲಾಖೆಯ ಐಜಿಪಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.

ಈಶಾನ್ಯ ವಲಯದ ಐಜಿಪಿಯಾಗಿದ್ದ ಮನೀಶ್ ಖರ್ಬೀಕರ್‌ ಅವರನ್ನು ಬಳ್ಳಾರಿ ವಲಯದ ಐಜಿಯನ್ನಾಗಿ, ಉತ್ತರ ವಲಯದ (ಬೆಳಗಾವಿ) ಐಜಿಪಿ ಹುದ್ದೆಯಲ್ಲಿದ್ದ ಎಚ್‌.ಜಿ. ರಾಘವೇಂದ್ರ ಸುಹಾಸ್‌  ಅವರನ್ನು ಬೆಂಗಳೂರಿನ ಆಂತರಿಕ ಭದ್ರತಾ ವಿಭಾಗದ ಐಜಿಪಿ ಹುದ್ದೆಗೆ ಮತ್ತು ಕಲಬುರ್ಗಿ ನಗರ ಪೊಲೀಸ್‌ ಕಮಿಷನರ್‌ ಎನ್‌. ಸತೀಶ್‌ ಕುಮಾರ್‌ ಅವರನ್ನು ಉತ್ತರ ವಲಯದ ಐಜಿಪಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು