ಮಂಗಳವಾರ, ಮಾರ್ಚ್ 21, 2023
28 °C

ಕೆಎಸ್‌ಆರ್‌ಟಿಸಿಗೆ ಸಾಮಾಜಿಕ ಕಳಕಳಿ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್ ಸಮಯದಲ್ಲಿ ಅನುಷ್ಠಾನಗೊಳಿಸಿದ ಉಪಕ್ರಮಗಳಿಗಾಗಿ ಕೆಎಸ್‌ಆರ್‌ಟಿಸಿಗೆ ರೋಟರಿ 3190 ಡಿಸ್ಟ್ರಿಕ್ಟ್‌ನ ಸಾಮಾಜಿಕ ಕಳಕಳಿ ಪ್ರಶಸ್ತಿ ಲಭಿಸಿದೆ.

ಹಳೆಯ ಬಸ್‌ಗಳನ್ನು ಬಳಸಿಕೊಂಡು 20 ಕಡೆ ಸಂಚಾರಿ ಜ್ವರ ಕ್ಲಿನಿಕ್ ತೆರೆಯಲಾಗಿತ್ತು. ಮಿನಿ ಬಸ್‌ಗಳನ್ನು ಸಾರಿಗೆ ಸಂಜೀವಿನಿ ಆಂಬುಲೆನ್ಸ್ ಆಗಿ ಪರಿವರ್ತಿಸಲಾಗಿತ್ತು. ಬಸವೇಶ್ವರ ನಗರದ ಬಸ್ ನಿಲ್ದಾಣದಲ್ಲಿ ರೋಟರಿ ಆಡ್ವಿಕಾ ನಯೋನಿಕಾ ಸಹಯೋಗದಲ್ಲಿ 200 ಹಾಸಿಗೆಗಳ ಕೋವಿಡ್ ಆರೈಕೆ ಕೇಂದ್ರ ತೆರೆಯಲಾಗಿತ್ತು.

ಕ್ಯಾನ್ಸರ್ ಬಗ್ಗೆ ಹಳ್ಳಿ–ಹಳ್ಳಿಗಳಲ್ಲಿ ಜಾಗೃತಿ ಮೂಡಿಸಲು ಮತ್ತು ಸಂಚಾರಿ ರಕ್ತ ನಿಧಿಯಾಗಿ ಬಳಸಿಕೊಳ್ಳಲು ಹಳೆಯ ಐರಾವತ ಹವಾನಿಯಂತ್ರಿತ ಬಸ್ಸನ್ನು ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಗೆ ಉಚಿತವಾಗಿ ನೀಡಲಾಗಿದೆ.

‘ದೇಶದಲ್ಲೇ ಮೊದಲ ಪ್ರಯತ್ನವಾಗಿ 5 ಹಾಸಿಗೆಯ ಐಸಿಯು ಬಸ್‌ ನಿರ್ಮಿಸಲಾಗಿದ್ದು, ಪುತ್ತೂರು ವಿಭಾಗದ ವ್ಯಾಪ್ತಿಯಲ್ಲಿನ 21 ಗ್ರಾಮಗಳ 1303 ಜನ ಇದರ ಪ್ರಯೋಜನ ಪಡೆದಿದ್ದಾರೆ. ಈ ಎಲ್ಲ ಉಪಕ್ರಮಗಳನ್ನು ಗುರುತಿಸಿ ಸಾಮಾಜಿಕ ಕಳಕಳಿ ಪ್ರಶಸ್ತಿಯನ್ನು ರೋಟರಿ ಸಂಸ್ಥೆ ನೀಡಿದೆ’ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು