ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Asian Games: ಮಹಿಳೆಯರ 10 ಮೀಟರ್ ಏರ್ ರೈಫಲ್‌ನಲ್ಲಿ ರಮಿತಾಗೆ ಕಂಚು

Published : 24 ಸೆಪ್ಟೆಂಬರ್ 2023, 6:21 IST
Last Updated : 24 ಸೆಪ್ಟೆಂಬರ್ 2023, 6:21 IST
ಫಾಲೋ ಮಾಡಿ
Comments

ಹಾಂಗ್‌ಝೌ: ಇಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಭಾರತದ ಯುವ ಶೂಟರ್ ರಮಿತಾ ಕಂಚಿನ ಪದಕ ಗೆದ್ದರೆ, ಸಹ ಆಟಗಾರ್ತಿ ಮಾಹುಲಿ ಘೋಷ್ ನಾಲ್ಕನೇ ಸ್ಥಾನ ಪಡೆದರು.

19 ವರ್ಷದ ರಮಿತಾ 230.1 ಅಂಕ ಗಳಿಸಿ ಮೂರನೇ ಸ್ಥಾನ ಗಳಿಸುವ ಮೂಲಕ ಶೂಟಿಂಗ್ ಸ್ಪರ್ಧೆಯಲ್ಲಿ ಪಂದ್ಯಾವಳಿಯ ಆರಂಭಿಕ ದಿನ ಭಾರತಕ್ಕೆ ಎರಡನೇ ಪದಕ ಗೆದ್ದುಕೊಟ್ಟರು.

ರಮಿತಾ ಭಾನುವಾರ ಎರಡನೇ ಸ್ಥಾನದಲ್ಲಿ ಫೈನಲ್‌ಗೆ ಅರ್ಹತೆ ಪಡೆದಿದ್ದರು. ಆದರೆ, ಫೈನಲ್‌ನ ಮಧ್ಯದಲ್ಲಿ ಕಳಪೆ ಸ್ಕೋರ್ ಅವರ ಪ್ರಗತಿಗೆ ಅಡ್ಡಿಯಾಯಿತು. ಹಾಗಾಗಿ, ಕಂಚಿನ ಪದಕಕ್ಕೆ ತೃಪ್ತಿಪಡಬೇಕಾಯಿತು.

ಕೊನೆಯ ಐದು ಪ್ರಯತ್ನಗಳಲ್ಲಿ 10.7ರ ರೇಂಜ್‌ನಲ್ಲಿ ಸ್ಥಿರವಾದ ಪ್ರದರ್ಶನವನ್ನು ನೀಡುವ ಮೂಲಕ ಚೀನಾದ ಎದುರಾಳಿಯನ್ನು ಹಿಂದಿಕ್ಕಲು ಯತ್ನಿಸಿದರೂ ಫಲ ನೀಡಲಿಲ್ಲ.

‘ಹಿನ್ನಡೆ ಮತ್ತು ಮುನ್ನಡೆ ಆಟದ ಭಾಗವಾಗಿದೆ. ನೀವು ಒಂದು ಕೆಟ್ಟ ಶಾಟ್ ಬಗ್ಗೆ ಹೆಚ್ಚು ಯೋಚಿಸಲು ಸಾಧ್ಯವಿಲ್ಲ ಮತ್ತು ಅದರ ಬದಲು ನಿಮ್ಮ ಆಟದ ಮೇಲೆ ಮೇಲೆ ಗಮನ ಕೇಂದ್ರೀಕರಿಸಬೇಕು. ನಾನು ಅದನ್ನು ಮಾಡಿದ್ದೇನೆ. ಹಿರಿಯರ ವಿಭಾಗದಲ್ಲಿ ನನ್ನ ಮೊದಲ ಪದಕ ಗೆದ್ದಿದ್ದಕ್ಕೆ ನನಗೆ ಸಂತೋಷವಾಗಿದೆ’ಎಂದು ರಮಿತಾ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT