ಸೋಮವಾರ, ಮಾರ್ಚ್ 1, 2021
17 °C

ಜೂನ್‌ 14ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ: ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್‌ ಕುಮಾರ್‌

ಬೆಂಗಳೂರು:ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ (2020–21) ಜೂನ್‌ 14ರಿಂದ ಜೂನ್‌ 25ರ ವರೆಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ನಡೆಯಲಿವೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಗುರುವಾರ ಪ್ರಕಟಿಸಿದರು.

ಫೆ. 1ರಿಂದ 9ನೇ ತರಗತಿ, ಎಸ್ಸೆಸ್ಸೆಲ್ಸಿ, ಪ್ರಥಮ ಮತ್ತು ದ್ವಿತೀಯ ಪಿಯುಸಿ ಇನ್ನು ಮುಂದೆ ಪೂರ್ತಿವಧಿ ನಡೆಯಲಿದೆ. 6ರಿಂದ 8ನೇ ತರಗತಿವರೆಗೆ ‘ವಿದ್ಯಾಗಮ’ವೇ ಮುಂದುವರಿಯಲಿದೆ ಎಂದೂ ಹೇಳಿದರು.

ಫೆಬ್ರುವರಿ ಎರಡನೇ ವಾರದಲ್ಲಿ ಪರಿಸ್ಥಿತಿ ಗಮನಿಸಿ ಮತ್ತೆ ತಾಂತ್ರಿಕ ಸಲಹಾ ಸಮಿತಿಯ ಜೊತೆ ಸಭೆ ಸೇರಿ, ಇತರ ತರಗತಿಗಳನ್ನು ಆರಂಭಿಸುವ ಬಗ್ಗೆ ನಿರ್ಧರಿಸಲಾಗುವುದು ಎಂದೂ ಹೇಳಿದರು.

2020–21ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ವೇಳಾಪಟ್ಟಿ:

ಜೂನ್‌ 14 (ಸೋಮವಾರ)–ಪ್ರಥಮ ಭಾಷೆ
ಜೂನ್‌ 16 (ಬುಧವಾರ)– ಗಣಿತ
ಜೂನ್‌ 18 (ಶುಕ್ರವಾರ)– ಇಂಗ್ಲಿಷ್‌ (ದ್ವಿತೀಯ ಭಾಷೆ)
ಜೂನ್‌ 21 (ಸೋಮವಾರ)– ವಿಜ್ಞಾನ
ಜೂನ್‌ 23 (ಬುಧವಾರ)– ತೃತೀಯ ಭಾಷೆ
ಜೂನ್‌ 25 (ಶುಕ್ರವಾರ)– ಸಮಾಜ ವಿಜ್ಞಾನ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು