ಬೆಂಗಳೂರು: ‘ರಾಜ್ಯದ ವಿಧಾನಮಂಡಲ ಇಡೀ ದೇಶಕ್ಕೆ ಮಾದರಿ. ಡಿ. 15ರಂದು ವಿಧಾನ ಪರಿಷತ್ತಿನಲ್ಲಿ ನಡೆದ ಘಟನೆ ಸಂಸದೀಯ ವ್ಯವಸ್ಥೆಯನ್ನೇ ತಲ್ಲಣಗೊಳಿಸಿದೆ. ಮುಂದಿನ ಅಧಿವೇಶನಕ್ಕೂ ಮೊದಲು ಈ ಕುರಿತು ಸಾಮಾಜಿಕ ಚಿಂತಕರು, ತಜ್ಞರು, ಹಿರಿಯರು ಹಾಗೂ ಮಾಧ್ಯಮ ಪ್ರತಿನಿಧಿಗಳ ಸಮಾಲೋಚನಾ ಸಭೆ ಕರೆದು ಚರ್ಚಿಸುತ್ತೇನೆ’ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ವಿಧಾನ ಮಂಡಲಗಳ ಮೌಲ್ಯ ಹೆಚ್ಚಿಸುವುದು, ನಿಮಮಾವಳಿಗಳ ಅಡಿಯಲ್ಲಿ ಸುಧಾರಣೆ ತರುವ ಬಗ್ಗೆ ಮುಕ್ತ ಸಮಾಲೋಚನೆ ನಡೆಸಲು ನಾನು ಸಿದ್ದ’ ಎಂದರು.

‘ಪರಿಷತ್ನಲ್ಲಿ ಡಿ. 15ರಂದು ನಡೆದ ಘಟನೆಯಿಂದಾಗಿ ಲೋಕಸಭಾಧ್ಯಕ್ಷರು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ರಾಜ್ಯ– ದೇಶದ ಗಣ್ಯರು, ಹಿರಿಯರು, ಮಾಧ್ಯಮದವರು ಖೇದ ವ್ಯಕ್ತಪಡಿಸಿದ್ದಾರೆ. ವಿಧಾನ ಪರಿಷತ್ ಬೇಕೊ, ಬೇಡವೊ ಎಂಬುದರ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಜವಾಬ್ದಾರಿಯುತ ವ್ಯಕ್ತಿಗಳಾದ ನಾವು ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಎತ್ತಿ ಹಿಡಿಯುವ ಕಾರ್ಯ ಮಾಡಬೇಕು. ಆದರೆ, ಈ ಘಟನೆಯಿಂದಾಗಿ ಪ್ರಜಾಪ್ರಭುತ್ವದ ಮೌಲ್ಯದಲ್ಲಿ ಕುಸಿತ ಉಂಟಾಗಿದೆ. ಈ ಬಗ್ಗೆ ನಾವೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ’ ಎಂದರು.

‘ಪರಿಷತ್ ಸಭಾಪತಿಯಾಗಿದ್ದ ಎಸ್.ಎಲ್. ಧರ್ಮೇಗೌಡ ಅವರ ಅನಿರೀಕ್ಷಿತ ಸಾವು ಆಘಾತ ನೀಡಿದೆ’ ಎಂದೂ ಕಾಗೇರಿ ಭಾವುಕರಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.