ಸೋಮವಾರ, ಅಕ್ಟೋಬರ್ 18, 2021
27 °C

9,10 ರಂದು ಬ್ರಾಹ್ಮಣ ವಧು–ವರರ ರಾಜ್ಯಮಟ್ಟದ ಸಮಾವೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಪ್ತಪದಿ ಫೌಂಡೇಷನ್‌ ಟ್ರಸ್ಟ್ ಹಾಗೂ ಬ್ರಾಹ್ಮಣ ಸ್ವಯಂ ಸೇವಕ ಸಂಘದ ಸಹಯೋಗದಲ್ಲಿ ಇದೇ 9 ಮತ್ತು 10ರಂದು ರಾಜ್ಯಮಟ್ಟದ ಬ್ರಾಹ್ಮಣ ವಧು–ವರರ ಸಮಾವೇಶ ಹಮ್ಮಿಕೊಳ್ಳಲಾಗಿದೆ.

ಎನ್‌.ಆರ್‌.ಕಾಲೊನಿ ಬಸ್‌ ನಿಲ್ದಾಣದ ಎದುರು ಇರುವ ಡಾ.ಅಶ್ವಥ್‌ ಕಲಾ ಭವನದಲ್ಲಿ ನಿಗದಿತ ದಿನಗಳಂದು ಬೆಳಿಗ್ಗೆ 9ರಿಂದ ಸಮಾವೇಶ ಶುರುವಾಗಲಿದೆ. 

‘ಸುಶಿಕ್ಷಿತ ವಧು–ವರರು, ವಿಚ್ಛೇದಿತರು, ವಿಧುರ–ವಿಧವೆಯರು ಹಾಗೂ ಅಂಗವಿಕಲರು ಇದರಲ್ಲಿ ಭಾಗವಹಿಸಬಹುದು. ಆಸಕ್ತರು ಇದೇ 8ರೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು’ ಎಂದು ಪ್ರಕಟಣೆ ತಿಳಿಸಿದೆ.

ಹೆಚ್ಚಿನ ಮಾಹಿತಿಗೆ 8217876335 ಅಥವಾ 9449425536.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು