ಸೋಮವಾರ, ಅಕ್ಟೋಬರ್ 26, 2020
27 °C

ಭಂಡತನದ ವಿರುದ್ಧ ಜನಾಭಿಪ್ರಾಯ: ದತ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಭಂಡತನದಿಂದ ಯಾವುದೇ ಕಾಯ್ದೆಗಳನ್ನು ನೀವು ಜಾರಿ ಮಾಡಬಹುದು. ಆದರೆ ಜನ ನಿಮ್ಮ ಪರ ಇಲ್ಲ ಎಂಬುದನ್ನು ಬಂದ್‌ ತೋರಿಸಿಕೊಡಲಿದೆ ಎಂದು ಜೆಡಿಎಸ್ ನಾಯಕ ವೈ.ಎಸ್‌.ವಿ. ದತ್ತ ಹೇಳಿದರು.

ಬಂದ್‌, ಹೋರಾಟದ ಪರಿಣಾಮ ತಾರ್ಕಿಕ ಅಂತ್ಯ ಕಾಣದೇ ಇರಬಹುದು. ಜನರಿಗೆ ಒಳಿತು ಮಾಡದ ಕಾಯ್ದೆಗಳನ್ನು ಜನರು ಒಪ್ಪುವುದಿಲ್ಲ, ವಿರೋಧಿಸುತ್ತಾರೆ ಎಂಬುದು ಗೊತ್ತಾಲಿದೆ. ಅಧಿವೇಶನದಲ್ಲಿ ಕೂಡ ಪರಿಣಾಮಕಾರಿಯಾಗಿ ವಿರೋಧಿಸಲು ಅವಕಾಶ ಸಿಕ್ಕಿಲ್ಲ. ಹಾಗಾಗಿ ಹೋರಾಟ ಅನಿವಾರ್ಯ ಎಂದು ಸುದ್ದಿಗಾರರಿಗೆ ಭಾನುವಾರ ತಿಳಿಸಿದರು.

ಜನಪರ ಚಳವಳಿಗಳು ಹಿಂದಿನಷ್ಟು ಪ್ರಬಲವಾಗಿಲ್ಲ, ನಿಸ್ತೇಜವಾಗಿವೆ. ನಾಲ್ಕೈದು ದಶಕಗಳ ಹಿಂದೆ ನಡೆದಿದ್ದ ಗೋಕಾಕ್‌ ಚಳವಳಿ, ದಲಿತ ಚಳವಳಿ, ರೈತ ಚಳವಳಿ ಮಾದರಿಯಲ್ಲಿ ಪ್ರಬಲವಾಗಬೇಕಿದೆ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು