ಭಾನುವಾರ, ಅಕ್ಟೋಬರ್ 25, 2020
27 °C

ಕಲಬುರ್ಗಿ: ಸಂಸದ ಡಾ. ಉಮೇಶ ಜಾಧವ ಪತ್ನಿ ಸೇರಿ 12 ಜನರಿಗೆ ಸೋಂಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂಸದ ಡಾ. ಉಮೇಶ ಜಾಧವ

ಕಲಬುರ್ಗಿ: ಸಂಸದ ಡಾ. ಉಮೇಶ ಜಾಧವ ಅವರ ಕುಟುಂಬ ಸದಸ್ಯರು ಹಾಗೂ ಆಪ್ತ ಸಹಾಯಕರಿಗೆ, ಚಾಲಕರಿಗೆ ಕೋವಿಡ್‌ ಸೋಂಕು ಇರುವುದು ದೃಢಪಟ್ಟಿದೆ.

ಈ ಕುರಿತು ಟ್ವೀಟ್‌ ಮಾಡಿರುವ ಸಂಸದ ಡಾ.ಉಮೇಶ ಜಾಧವ, ‘ಪತ್ನಿ, ಮಗಳು, ಸೊಸೆ ಹಾಗೂ ನನ್ನ ಕಾರಿನ ಚಾಲಕನಿಗೆ ಕೋವಿಡ್–19 ಇರುವುದರಿಂದ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಭಾನುವಾರ ನನ್ನ ಇಬ್ಬರು ಆಪ್ತ ಕಾರ್ಯದರ್ಶಿಗಳು, ಪುತ್ರ, ಚಿಂಚೋಳಿ ಶಾಸಕ ಡಾ. ಅವಿನಾಶ ಜಾಧವ ಅವರ ಆಪ್ತ ಕಾರ್ಯದರ್ಶಿ ಹಾಗೂ ಅವರ ಕಾರಿನ ಚಾಲಕನಿಗೆ ಸೋಂಕು ಇದೆ. ಎಲ್ಲರೂ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ಐದು ತಿಂಗಳಿಂದ ಕೊರೊನಾ ಸಂದರ್ಭದಲ್ಲಿ ನನ್ನೊಂದಿಗೆ ನಿರಂತರವಾಗಿ ಶ್ರಮಿಸಿದ ಆಪ್ತ ಸಹಾಯಕರಿಗೆ ಧನ್ಯವಾದಗಳು’ ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಡಾ. ಉಮೇಶ ಜಾಧವ ಹಾಗೂ ಡಾ. ಅವಿನಾಶ ಜಾಧವ ಅವರಿಗೆ ಈಗಾಗಲೇ ಸೋಂಕು ತಗುಲಿದ್ದು, ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು