ಶನಿವಾರ, ಜುಲೈ 2, 2022
27 °C

ವಿಜಯನಗರ: ಏ.4ರಿಂದ ಎರಡು ಡೆಮು ರೈಲು ಸಂಚಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ (ವಿಜಯನಗರ): ನೈರುತ್ಯ ರೈಲ್ವೆ ವಲಯವು ಏ. 4ರಿಂದ ಎರಡು ಡೆಮು ರೈಲುಗಳ ಸಂಚಾರ ಆರಂಭಿಸಲು ನಿರ್ಧರಿಸಿದೆ.

ಹೊಸಪೇಟೆ-ದಾವಣಗೆರೆ-ಹರಿಹರ (ಗಾಡಿ ಸಂಖ್ಯೆ: 07395) ಪ್ರತಿದಿನ ಬೆಳಿಗ್ಗೆ 9.40ಕ್ಕೆ ಹೊಸಪೇಟೆಯಿಂದ ನಿರ್ಗಮಿಸಿ ಹಗರಿಬೊಮ್ಮನಹಳ್ಳಿ, ಕೊಟ್ಟೂರು ಮಾರ್ಗವಾಗಿ ಮಧ್ಯಾಹ್ನ 1.30ಕ್ಕೆ ದಾವಣಗೆರೆ ತಲುಪಲಿದೆ. ಅಲ್ಲಿಂದ ಹರಿಹರಕ್ಕೆ ತೆರಳಿ ಮಧ್ಯಾಹ್ನ 3ಕ್ಕೆ ಗಾಡಿ ಸಂಖ್ಯೆ 07396 ಅದೇ ಮಾರ್ಗವಾಗಿ ರಾತ್ರಿ 8ಕ್ಕೆ ಹೊಸಪೇಟೆ ಬಂದು ಸೇರಲಿದೆ.

ಹೊಸಪೇಟೆ-ಬಳ್ಳಾರಿ (ಗಾಡಿ ಸಂಖ್ಯೆ: 07397) ಪ್ರತಿದಿನ ಬೆಳಿಗ್ಗೆ 6ಕ್ಕೆ ಹೊಸಪೇಟೆಯಿಂದ ನಿರ್ಮಿಸಿ 7.40ಕ್ಕೆ ಬಳ್ಳಾರಿ ತಲುಪಲಿದೆ. ಬಳ್ಳಾರಿಯಿಂದ (ಗಾಡಿ ಸಂಖ್ಯೆ: 07398) 7.50ಕ್ಕೆ ಬಿಟ್ಟು 9.30ಕ್ಕೆ ಹೊಸಪೇಟೆ ಸೇರಲಿದೆ. ಎರಡು ರೈಲುಗಳಿಗೆ ಸಾಮಾನ್ಯ ದರ್ಜೆ ಟಿಕೆಟ್‌ ದರ ನಿಗದಿಪಡಿಸಲಾಗಿದೆ.

ಸಂತಸ: ನೈರುತ್ಯ ರೈಲ್ವೆ ವಲಯದ ನಿರ್ಧಾರವನ್ನು ಸ್ವಾಗತಿಸಿರುವ ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿ ಅಧ್ಯಕ್ಷ ವೈ.ಯಮುನೇಶ್‌, ಕಾರ್ಯದರ್ಶಿ ಮಹೇಶ್‌ ಕುಡುತಿನಿ, ಬಹುದಿನಗಳ ಬೇಡಿಕೆಯನ್ನು ರೈಲ್ವೆ ಇಲಾಖೆಗೆ ಈಡೇರಿಸಿರುವುದು ಖುಷಿ ತಂದಿದೆ. ಬರುವ ದಿನಗಳಲ್ಲಿ ರೈಲಿನ ಸಮಯ ಪರಿಷ್ಕರಣೆಗೆ ಆಗ್ರಹಿಸಲಾಗುವುದು ಎಂದು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು