ಸೋಮವಾರ, ಸೆಪ್ಟೆಂಬರ್ 26, 2022
20 °C

ಗಾಂಜಾ ಪೆಡ್ಲರ್ ಆಸ್ತಿ ಜಪ್ತಿ ಮಾಡಿಸಿದ್ದ ಅಧಿಕಾರಿಗೆ ಕೇಂದ್ರ ಸಚಿವರ ಪದಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೊಲೆ, ಡ್ರಗ್ಸ್ ಮಾರಾಟ ಹಾಗೂ ಇತರೆ ಗಂಭೀರ ಅಪರಾಧ ಪ್ರಕರಣಗಳನ್ನು ಅತ್ಯುತ್ತಮ ತನಿಖೆ ಮೂಲಕ ಭೇದಿಸಿ ಅಪರಾಧಿಗಳಿಗೆ ಶಿಕ್ಷೆ ಕೊಡಿಸಿದ್ದ ರಾಜ್ಯದ ಆರು ಪೊಲೀಸ್ ಅಧಿಕಾರಿಗಳಿಗೆ ಕೇಂದ್ರ ಗೃಹ ಸಚಿವಾಲಯದ 2022ನೇ ಸಾಲಿನ ಪದಕ ಲಭಿಸಿದೆ.

ಲೋಕಾಯುಕ್ತ ಎಸ್ಪಿ ಕೆ. ಲಕ್ಷ್ಮಿ ಗಣೇಶ್, ಹೆಸ್ಕಾಂ ಎಸ್ಪಿ ಶಂಕರ್ ಕೆ. ಮರಿಹಾಳ, ಸಿಂಧನೂರು ಉಪವಿಭಾಗದ ಡಿವೈಎಸ್ಪಿ ವೆಂಕಟಪ್ಪ ನಾಯ್ಕ, ಲೋಕಾಯುಕ್ತ ಡಿವೈಎಸ್ಪಿ ಎಂ.ಆರ್. ಗೌತಮ್, ಸಿಐಡಿ ಡಿವೈಎಸ್ಪಿ (ಕಲಬುರಗಿ) ಶಂಕರಗೌಡ ಪಾಟೀಲ ಹಾಗೂ ದಾವಣಗೆರೆ ಬಸವನಗರ ಠಾಣೆ ಇನ್‌ಸ್ಪೆಕ್ಟರ್ ಎಚ್. ಗುರು ಬಸವರಾಜ್ ಅವರು ಪದಕಕ್ಕೆ ಪಾತ್ರರಾಗಿದ್ದಾರೆ.

ಇದನ್ನೂ ಓದಿ: 

ಆಸ್ತಿ ಜಪ್ತಿ ಮಾಡಿಸಿದ್ದ ರಾಜ್ಯದ ಮೊದಲ ಪ್ರಕರಣ: ಗಾಂಜಾ ಮಾರಾಟವನ್ನೇ ವೃತ್ತಿ ಮಾಡಿಕೊಂಡಿದ್ದ ಪೆಡ್ಲರ್  ಅಜಯ್‌ ಕುಮಾರ್ ಸಿಂಗ್ (54) ಎಂಬಾತನನ್ನು ಬಂಧಿಸಿದ್ದ ಲಕ್ಷ್ಮಿ ಗಣೇಶ್,  ಆರೋಪಿ ಅಕ್ರಮವಾಗಿ ಸಂಪಾದಿಸಿದ್ದ ₹ 1.68 ಕೋಟಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿಸಿದ್ದರು. ಎನ್‌ಡಿಪಿಎಸ್ ಕಾಯ್ದೆಯಡಿ ಆಸ್ತಿ ಜಪ್ತಿ ಮಾಡಿದ ರಾಜ್ಯದ ಮೊದಲ ಪ್ರಕರಣ ಇದಾಗಿತ್ತು.

ರಾಮನಗರ ಜಿಲ್ಲೆಯ ಹಾರೋಹಳ್ಳಿ ಠಾಣೆ ವ್ಯಾಪ್ತಿಯ ಭೀಮೇಗೌಡನ ದೊಡ್ಡಿಯಲ್ಲಿ ವಾಸವಿದ್ದ ಮಾರೇಗೌಡ (70), ಅವರ ಮಗಳು ಗೌರಮ್ಮ (50) ಮತ್ತು ಮೊಮ್ಮೊಗಳು ಸುಕನ್ಯಾ (15) ಅವರನ್ನು 2016ನೇ ಇಸವಿ ಜನವರಿ 5ರಂದು ಕೊಲೆ ಮಾಡಲಾಗಿತ್ತು. ಅಂದು ರಾಮನಗರ ಡಿವೈಎಸ್ಪಿ ಆಗಿದ್ದ ಲಕ್ಷ್ಮಿ ಗಣೇಶ್ ಕೆ., ಆರೋಪಿ ಮರಳವಾಡಿ ಹೋಬಳಿಯ ಚಿಕ್ಕ ಬೆಜ್ಜಲಹಟ್ಟಿ ನಿವಾಸಿ ಬಸವರಾಜ ಬೋವಿ (41) ಎಂಬಾತನನ್ನು ಬಂಧಿಸಿದ್ದರು. ಈತನಿಗೆ ಮರಣ ದಂಡನೆ ಆಗಿತ್ತು. 

ಮಂಗಳೂರು ಡಿಸಿಪಿ ಆಗಿದ್ದ ಲಕ್ಷ್ಮಿ ಗಣೇಶ್, 2020ರಲ್ಲಿ ವಿಮಾನ ನಿಲ್ದಾಣದಲ್ಲಿ ಸ್ಫೋಟಕ ವಸ್ತು ಪತ್ತೆಯಾಗಿತ್ತು. ಬಜ್ಪೆ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆ ಕೈಗೊಂಡಿದ್ದ ಲಕ್ಷ್ಮಿ ಗಣೇಶ್, ಆರೋಪಿಯನ್ನು ಬಂಧಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು