ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಹಲವೆಡೆ ಅಕಾಲಿಕ ಮಳೆ: ರೈತರಲ್ಲಿ ಆತಂಕ

Last Updated 7 ಜನವರಿ 2021, 6:34 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಉತ್ತರ ಒಳನಾಡು, ದಕ್ಷಿಣ ಒಳನಾಡು ಸೇರಿದಂತೆ ಮಲೆನಾಡು ಭಾಗದಲ್ಲಿ ಗುರುವಾರ ಬೆಳಗ್ಗೆಯಿಂದ ಮಳೆಯಾಗುತ್ತಿದೆ.

ಅಕಾಲಿಕ ಮಳೆಯಿಂದಾಗಿ ರೈತರು ಸಾಕಷ್ಟು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಕೊಯ್ಲು ಹಾಗೂ ಬೆಳೆಗೆ ಈ ಅಕಾಲಿಕ ಮಳೆ ಹಾನಿಯುಂಟು ಮಾಡಲಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿನ ಮಳೆಯ ವಿವರ...

ಹೊಸಪೇಟೆ: ಬುಧವಾರ ಆರಂಭಗೊಂಡ ಮಳೆ ಗುರುವಾರವೂ ಮುಂದುವರೆದಿದೆ. ಬುಧವಾರ ಮಧ್ಯಾಹ್ನ, ಸಂಜೆ ವೇಳೆ ತುಂತುರು ಮಳೆ ಸುರಿದಿತ್ತು. ತಡರಾತ್ರಿ ಬಿರುಸಾಗಿ ಮಳೆಯಾಗಿತ್ತು. ಗುರುವಾರ ನಸುಕಿನ ಜಾವ ಆರಂಭಗೊಂಡ ತುಂತುರು ಮಳೆ ಈಗಲೂ ಮುಂದುವರೆದಿದೆ. ದಟ್ಟ ಕಾರ್ಮೋಡ ಕವಿದು, ತಂಗಾಳಿ ಬೀಸುತ್ತಿದೆ. ವಾತಾವರಣ ಸಂಪೂರ್ಣ ತಂಪಾಗಿದೆ.

ಶಿವಮೊಗ್ಗ: ಜಿಲ್ಲೆಯಲ್ಲಿ ಬುಧವಾರ ರಾತ್ರಿ ಮಳೆಗೆ ಶಿವಮೊಗ್ಗ ನಗರದ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಜನ ಜೀವನ ಅಸ್ತವ್ಯಸ್ತವಾಗಿದೆ

ವಿಜಯಪುರ: ಜಿಲ್ಲೆಯಾದ್ಯಂತ ತಡರಾತ್ರಿಯಿಂದ ತುಂತುರು ಮಳೆಯಾಗುತ್ತಿದೆ. ಎರಡು ದಿನಗಳಿಂದ ಜಿಲ್ಲೆಯಲ್ಲಿ ದಟ್ಟವಾದ ಮೋಡ ಕವಿದ ವಾತಾವರಣ ಇದ್ದು, ಆಗಾಗ ತುಂತುರು ಮಳೆಯಾಗುತ್ತಿದೆ.ದ್ರಾಕ್ಷಿ ಸೇರಿದಂತೆ ಇತರೆ ಬೆಳೆಗಳಿಗೆ ಸಮಸ್ಯೆಯಾಗುವ ಆತಂಕ ಎದುರಾಗಿದೆ.

ಬೀದರ್: ಜಿಲ್ಲೆಯಲ್ಲಿ ಮೋಡಕವಿದ ಹಾಗೂ ತಣ್ಣನೆಯ ವಾತಾವರಣವಿದೆ. ಬೀದರ್‌ ಹಾಗೂ ಕಮಲನಗರ ತಾಲ್ಲೂಕಿನಲ್ಲಿ ಜಿಟಿ ಜಿಟಿ ಮಳೆಯಾಗಿದೆ.

ಕೊಪ್ಪಳ: ಜಿಲ್ಲೆಯಾದ್ಯಂತ ನಸುಕಿನ ಜಾವ ಜಿಟಿಜಿಟಿ ಮಳೆ ಆಗಿದೆ. ಸಂಪೂರ್ಣ ಮೋಡ ಕವಿದಿದ್ದು, ಮತ್ತಷ್ಟು ಚಳಿಯ ವಾತಾವರಣವಿದೆ.
ಜಿಟಿಜಿಟಿ ಮಳೆಯಿಂದ ಕಟಾವಿಗೆ ಬಂದಿರುವ ಶೇಂಗಾ, ಮೆಕ್ಕೆ ಜೋಳಕ್ಕೆ ತೊಂದರೆಯಾಗಿದೆ.
ಈ ಅಕಾಲಿಕ ಮಳೆಯಿಂದ ಬಿಳಿಜೋಳ ಕಡಲೆ ಕಾಯಿಗಳು ಕಪ್ಪಾಗುವ ಆತಂಕವಿದೆ.

ಹುಬ್ಬಳ್ಳಿ: ನಗರದಲ್ಲಿ ಮೂರ್ನಾಲ್ಕು ದಿನಗಳಿಂದ ಮೋಡಕವಿದ ಹಾಗೂ ತಣ್ಣನೆಯ ವಾತಾವರಣವಿದ್ದು, ಗುರುವಾರ ಬೆಳಿಗ್ಗೆಯಿಂದ ಜಿಟಿ, ಜಿಟಿ ಮಳೆ ಆರಂಭವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT