ಬುಧವಾರ, ನವೆಂಬರ್ 25, 2020
19 °C

ಏಕಕಾಲಕ್ಕೆ ಯುಪಿಎಸ್‌ಸಿ, ಕೆಪಿಎಸ್‌ಸಿ ಪರೀಕ್ಷೆ: ಗೊಂದಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಪಿಎಸ್‌ಸಿ

ಬೆಂಗಳೂರು: ಭಾರತೀಯ ಕಂಪನಿ ಕಾರ್ಯದರ್ಶಿ ಸಂಸ್ಥೆಯು ಕಂಪನಿ ಕಾರ್ಯದರ್ಶಿ ಹುದ್ದೆಗಳಿಗೆ ಡಿ. 21ರಿಂದ 24ರವರೆಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸುತ್ತಿದ್ದು, ಅದೇ ದಿನಗಳಲ್ಲಿ ಲೆಕ್ಕ ಪರಿಶೋಧನೆ ಇಲಾಖೆಯ ಸಹಾಯಕ ನಿಯಂತ್ರಕ ಹುದ್ದೆಗಳಿಗೆ ಕೆಪಿಎಸ್‌ಸಿ ಕೂಡಾ ಪರೀಕ್ಷೆ ನಡೆಸಲು ನಿರ್ಧರಿಸಿರುವುದು ಅಭ್ಯರ್ಥಿಗಳಲ್ಲಿ ಗೊಂದಲ ಮೂಡಿಸಿದೆ.

ಅಲ್ಲದೆ, ಕೇಂದ್ರ ನಾಗರಿಕ ಸೇವೆಗಳ ಹುದ್ದೆಗಳ ಆಯ್ಕೆಗೆ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಜ. 8ರಿಂದ ಮುಖ್ಯಪರೀಕ್ಷೆ ನಿಗದಿಪಡಿಸಿರುವ ಮಧ್ಯೆಯೇ ಗೆಜೆಟೆಡ್‌ ಪ್ರೊಬೇಷನರಿ 106 ಹುದ್ದೆಗಳ ನೇಮಕಾತಿಗೆ ಕೆಪಿಎಸ್‌ಸಿ ಜ. 2ರಿಂದ ಐದು ದಿನ ಪರೀಕ್ಷೆ ನಡೆಸುವುದಾಗಿ ವೇಳಾಪಟ್ಟಿ ಪ್ರಕಟಿಸಿರುವುದು ಕೂಡಾ ಪರೀಕ್ಷಾರ್ಥಿಗಳ ಚಿಂತೆಗೆ ಕಾರಣವಾಗಿದೆ.

ಸ್ಟಾಫ್ ಸಿಲೆಕ್ಷನ್‌ ಕಮಿಷನ್‌ (ಎಸ್‌ಎಸ್‌ಸಿ) ಡಿ. 21ರಿಂದ ಡಿ. 31ರವರೆಗೆ ಸ್ಟೆನೋಗ್ರಾಫರ್‌ ಹುದ್ದೆಗಳಿಗೆ (ಸಿ ಆ್ಯಂಡ್‌ ಡಿ ಶ್ರೇಣಿ) ಪರೀಕ್ಷೆ ನಡೆಸಲು ಮುಂದಾಗಿದೆ. ಹೀಗಾಗಿ, ಪರೀಕ್ಷೆಗಳು ಕೈತಪ್ಪುವ ಆತಂಕ ಅಭ್ಯರ್ಥಿಗಳಿಗೆ ಎದುರಾಗಿದೆ. 

ಕೆಪಿಎಸ್‌ಸಿ ದಿನ ಬದಲಿಸಲಿ: ಕೇಂದ್ರ ನಾಗರಿಕ ಸೇವೆಗಳ ಹುದ್ದೆಗಳ ಆಯ್ಕೆಗೆ ಯುಪಿಎಸ್‌ಸಿ ಪರೀಕ್ಷೆ ದಿನವನ್ನು ಮೊದಲೇ ನಿಗದಿಪಡಿಸಿದೆ. ಅದು ಗೊತ್ತಿದ್ದೂ ಕೆಪಿಎಸ್‌ಸಿ ಜನವರಿ ಮೊದಲ ವಾರದಲ್ಲೇ ಪರೀಕ್ಷೆ ನಿಗದಿಪಡಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಅಭ್ಯರ್ಥಿಗಳು, ಕೆಪಿಎಸ್‌ಸಿ ಪರೀಕ್ಷಾ ವೇಳಾಪಟ್ಟಿ ಬದಲಿಸಬೇಕು ಎಂದು ಆಗ್ರಹಿಸಿದ್ದಾರೆ.

ಕೆಪಿಎಸ್‌ಸಿಯ ಮುಖ್ಯ ಪರೀಕ್ಷೆ ಜ. 5ರಂದು ಆರಂಂಭಗೊಂಡು ನಾಲ್ಕು ದಿನ ನಡೆಯಲಿದೆ. ಕೇವಲ ಮೂರು ದಿನಗಳ ಅಂತರದಲ್ಲಿ ಯುಪಿಎಸ್‌ಸಿ ಮುಖ್ಯ ಪರೀಕ್ಷೆ ಆರಂಭವಾಗುತ್ತದೆ. ಕೆಪಿಎಸ್‌ಸಿ ವೇಳಾಪಟ್ಟಿ ಪ್ರಕಟಿಸಿರುವುದು ಅನುಮಾನಗಳಿಗೆ ಕಾರಣವಾಗುತ್ತದೆ’ ಎಂದು ಪರೀಕ್ಷಾರ್ಥಿಯೊಬ್ಬರು ದೂರಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು