ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೊಳೆಗೇರಿ ನಿವಾಸಿಗಳಿಗೆ ಹಕ್ಕುಪತ್ರ’

Last Updated 20 ಆಗಸ್ಟ್ 2020, 20:55 IST
ಅಕ್ಷರ ಗಾತ್ರ

ಬೆಂಗಳೂರು: ‘ಕೊಳೆಗೇರಿ ನಿವಾಸಿಗಳಿಗೆ ಹಕ್ಕುಪತ್ರ ನೀಡುವ ಕುರಿತಾದ ವಸತಿ ಇಲಾಖೆಯ ಪ್ರಸ್ತಾವನೆಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಸಿಕ್ಕಿದೆ’ ಎಂದು ಸಚಿವ ವಿ. ಸೋಮಣ್ಣ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾನು ಸಚಿವನಾಗಿ ಸರಿಯಾಗಿ ಒಂದು ವರ್ಷ ಪೂರ್ಣಗೊಂಡ ಸಂದರ್ಭದಲ್ಲಿಯೇ ಸಮಾಜದ ಅತ್ಯಂತ ಕೆಳವರ್ಗ ಹಾಗೂ ದುರ್ಬಲ ವರ್ಗದ ಬಹುದಿನಗಳ ಕನಸು ಈಡೇರಿದೆ. 1,873 ಕೊಳೆಗೇರಿ ಪ್ರದೇಶಗಳ 3.13 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ನೀಡುವ ಪ್ರಸ್ತಾವನೆ ಇದಾಗಿದ್ದು, ರಾಜ್ಯದ ಸುಮಾರು 16 ಲಕ್ಷ ಕೊಳೆಗೇರಿ ನಿವಾಸಿಗಳಿಗೆ ಇದರಿಂದ ಪ್ರಯೋಜನ ಆಗಲಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿಯೇ 683 ಎಕರೆ ಸರ್ಕಾರಿ ಜಾಗದಲ್ಲಿ 239 ಕೊಳೆಗೇರಿ ಪ್ರದೇಶಗಳಿವೆ’ ಎಂದರು.

‘ಪ್ರಧಾನಿ ಅವರ ‘ಸರ್ವರಿಗೂ ಸೂರು’ ಎಂಬ ಕಲ್ಪನೆಯನ್ನು ಸಾಕಾರಗೊಳಿಸಲು ಈ ನಿರ್ಣಯ ಸಹಕಾರಿಯಾಗಿದೆ. ಕೊಳೆಗೇರಿಯಲ್ಲಿ ವಾಸ ಮಾಡುವ ಎಲ್ಲ ಜನರು ಸರ್ಕಾರದ ಈ ಮಹತ್ವದ ನಿರ್ಧಾರದ ಪ್ರಯೋಜನವನ್ನು ಪಡೆದುಕೊಳ್ಳಬೇಕು’ ಎಂದು ಅವರು ಮನವಿ ಮಾಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT