ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕನ್ನಡಕ್ಕಾಗಿ ನಾವು’ ವಿಶೇಷ ಅಭಿಯಾನ

Last Updated 23 ಅಕ್ಟೋಬರ್ 2021, 21:28 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯುಕನ್ನಡ ರಾಜ್ಯೋತ್ಸವದ ಪ್ರಯುಕ್ತ ಒಂದು ವಾರ ಹಮ್ಮಿಕೊಂಡಿರುವ‘ಕನ್ನಡಕ್ಕಾಗಿ ನಾವು’ ವಿಶೇಷ ಅಭಿಯಾನದ ಭಾಗವಾಗಿ ನಗರದ ವಿವಿಧೆಡೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

‘ಮಾತಾಡ್ ಮಾತಾಡ್ ಕನ್ನಡ’ ಘೋಷವಾಕ್ಯದಡಿ ಕಾರ್ಯಕ್ರಮಗಳು ನಡೆಯಲಿವೆ. ಮೈಸೂರು, ಶಿವಮೊಗ್ಗ, ಕಲಬುರಗಿ ಹಾಗೂ ದಾವಣಗೆರೆ ರಂಗಾಯಣ, ಕರ್ನಾಟಕ ನಾಟಕ ಅಕಾಡೆಮಿ ಹಾಗೂ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಿವೆ.

ಅ.24ರಂದು (ಭಾನುವಾರ) ಬೆಳಿಗ್ಗೆ 10ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ‘ಪರ್ವ’ ನಾಟಕ ಪ್ರದರ್ಶನ ಕಾಣಲಿದೆ. ಜಾಲಹಳ್ಳಿಯ ಬಿ.ಇ.ಎಲ್ ರಂಗಮಂದಿರದಲ್ಲಿ ‘ಗುಲಾಬಿ ಗ್ಯಾಂಗ್’ ನಾಟಕವನ್ನುರಂಗ ಪಯಣ ತಂಡವು ಪ್ರಸ್ತುತಪಡಿಸಲಿದೆ. ಅ.25ರಂದು (ಸೋಮವಾರ) ಸಂಜೆ 5 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ‘ಮೂಕನ ಮಕ್ಕಳು’ ನಾಟಕ ಪ್ರದರ್ಶನವಾಗಲಿದೆ. ಮಲ್ಲೇಶ್ವರದ ಎಂ.ಇ.ಎಸ್ ಕಾಲೇಜಿನ ಸಭಾಭವನದಲ್ಲಿ ‘ಮಾಯಾಬೇಟೆ’ ನಾಟಕವನ್ನು ದೃಶ್ಯಕಾವ್ಯ ಪ್ರಸ್ತುತಪಡಿಸಲಿದೆ.

ಅ.26ರ ಸಂಜೆ 6.30ಕ್ಕೆ ಕಲಾ
ಗ್ರಾಮದ ಸಾಂಸ್ಕೃತಿಕ ಸಮುಚ್ಚಯದಲ್ಲಿ ‘ಚಾಣಕ್ಯ ಪ್ರಪಂಚ’, ಸಂಜೆ 6.30ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ‘ರಾಶಿ ಚಕ್ರ’, ಶೇಷಾ
ದ್ರಿಪುರ ಸಂಜೆ ಕಾಲೇಜಿನಲ್ಲಿ ‘ಶಿವರಾತ್ರಿ’ ನಾಟಕ ಹಾಗೂ ಪೀಣ್ಯದ ಬಿ.ಇ.ಎಲ್‌ನಲ್ಲಿ ‘ಮೂಕನ ಮಕ್ಕಳು’ ನಾಟಕಗಳು ಪ್ರದರ್ಶನ ಕಾಣಲಿವೆ.

ಅ.27ರಂದು ಸಂಜೆ 6.30ಕ್ಕೆ ಕಲ್ಯಾಣ ನಗರದ ಡಾ. ಶಿವಕುಮಾರಸ್ವಾಮಿ ಜ್ಞಾನಸೌಧದಲ್ಲಿ ‘ಮೂಕನ ಮಕ್ಕಳು’, ಕಲಾಗ್ರಾಮದ ಸಾಂಸ್ಕೃತಿಕ ಸಮುಚ್ಚಯದಲ್ಲಿ ‘ಕನ್ನಡ ಕಲಿಯೋಣ ಬಾ’ ನಾಟಕ, ಮಲ್ಲೇಶ್ವರದ ಕುವೆಂಪು ಸಭಾಂಗಣದಲ್ಲಿ ‘ಕತ್ತಲೆಯ ಕೊರೊನಾ’ ನಾಟಕ, ಮೆಜೆಸ್ಟಿಕ್‌ನ ಆರ್.ಎಂ.ಎಸ್. ಕನ್ನಡ ಸಂಘದಲ್ಲಿ ಮಹದೇವಯ್ಯ ತಂಡದಿಂದ ಸುಗಮ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ.

ಅ.28ರಂದು ಸಂಜೆ 6.30ಕ್ಕೆ ಕುರುಬರಹಳ್ಳಿಯ ರಾಜಕುಮಾರ ಸಭಾಂಗಣದಲ್ಲಿ ‘ಕತ್ತಲೆ ಕರೊನಾ’ ನಾಟಕ, ಸುಚಿತ್ರ ಫಿಲ್ಮ್‌ ಸೊಸೈಟಿಯಲ್ಲಿ ‘ಶ್ರದ್ಧಾ ಮತ್ತು ಸ್ಟೈನ್‌ಲೆಸ್‌ ಸ್ಟೀಲ್‌ ಪಾತ್ರೆಗಳು’ ನಾಟಕ, ಆರ್‌ಪಿಸಿ ಬಡಾವಣೆಯ ಗ್ರಂಥಾಲಯ ಸಭಾಂಗಣದಲ್ಲಿ ‘ಸಿರಿ ಪುರಂದರ’ ನಾಟಕ ಹಮ್ಮಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT