ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದೇವನಹಳ್ಳಿಗೆ ಬಂದ ವಿಶ್ವದ ದೊಡ್ಡ ವಾಣಿಜ್ಯ ವಿಮಾನ

Published : 14 ಅಕ್ಟೋಬರ್ 2022, 11:28 IST
ಫಾಲೋ ಮಾಡಿ
Comments

ದೇವನಹಳ್ಳಿ: ವಿಶ್ವದ ಅತಿ ದೊಡ್ಡ ವಾಣಿಜ್ಯ ವಿಮಾನ ಸೂಪರ್‌ ಜಂಬೋ ಏರ್ ಬಸ್‌ - ಎ380 ಶುಕ್ರವಾರ ಮಧ್ಯಾಹ್ನ 3.30ಕ್ಕೆ ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು.

ಎಮಿರೈಟ್ಸ್‌ ಏರ್‌ಲೈನ್ಸ್‌ನ ಈ ಬೃಹತ್‌ ವಿಮಾನವೂ ಡಬಲ್‌ ಡೆಕರ್‌ ವಿಮಾನವಾಗಿದ್ದು,ಬೆಳಿಗ್ಗೆ 10 ಗಂಟೆಗೆ ದುಬೈನಿಂದ ಹೊರಟು, ಮಧ್ಯಾಹ್ನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ಧಾಣಕ್ಕೆ ಬಂದು ತಲುಪಿದೆ. ಪುನಃ ಮತ್ತೆ ವಿಮಾನವೂ ಬೆಂಗಳೂರಿನಿಂದ ಸಂಜೆ 6.40ಕ್ಕೆ ಹೊರಟು ರಾತ್ರಿ 9ಕ್ಕೆ ದುಬೈ ತಲುಪಲಿದೆ.

ಈ ಹಿಂದೆಯೇ ಎಮಿರೇಟ್ಸ್‌ ಏರ್‌ಲೈನ್ಸ್‌ ಘೋಷಿಸಿದಂತೆ, ಜಂಬೋ ಜೆಟ್‌ನ ಮೊದಲ ಹಾರಾಟ ಅಕ್ಟೋಬರ್‌ 30ರ ರಾತ್ರಿ ದುಬೈನಿಂದ ಟೇಕಾಫ್‌ ಆಗಿ ಅ.31ಕ್ಕೆ ಬೆಂಗಳೂರಿನಲ್ಲಿ ಲ್ಯಾಂಡ್‌ ಆಗಬೇಕಿತ್ತು. ಆದರೆ, ಎರಡು ವಾರದ ಮುನ್ನವೇ ಬೃಹತ್‌ ಲೋಹದ ಹಕ್ಕಿ ಬೆಂಗಳೂರು ತಲುಪಿರುವುದು ವಿಮಾನ ಪ್ರಯಾಣಿಕರಲ್ಲಿ ಸಂತಸ ತಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT